
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನೆಲಕಚ್ಚಿದ್ದ ಷೇರು ಮಾರುಕಟ್ಟೆ ಇಂದು ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ನಡೆಸುವುದು ಖಚಿತವಾಗುತ್ತಿದ್ದಂತೆಯೇ ಮತ್ತೆ ಪುಟಿದೆದ್ದಿದೆ.
ಎನ್ಎಸ್ ಇ ನಿಫ್ಟಿ 735.87 ಅಂಕಗಳು ಅಥವಾ ಶೇ.3.36 ರಷ್ಟು ಗಳಿಕೆ ಕಂಡಿದ್ದರೆ, ಬಿಎಸ್ಇ ಸೆನ್ಸೆಕ್ಸ್ 2303.19 ಅಂಕ (ಶೇ.3.10) ರಷ್ಟು ಏರಿಕೆ ಕಂಡಿದೆ. 74,382.24 ಗಳಿಗೆ ದಿನದ ವಹಿವಾಟು ಅಂತ್ಯಗೊಂಡಿತ್ತು.
ಮಂಗಳವಾರದಂದು ಚುನಾವಣಾ ಫಲಿತಾಂಶ ಪ್ರಕಟವಾಗಿ ಎನ್ ಡಿಎಗೆ ಸರಳ ಬಹುಮತ ದೊರೆತಿತ್ತು ಆದರೆ ಬಿಜೆಪಿಗೆ ಏಕಾಂಗಿಯಾಗಿ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಶೇ.6 ರಷ್ಟು ಕುಸಿದಿತ್ತು.
"ರಾಜಕೀಯ ಸ್ಥಿರತೆ ಖಾತ್ರಿಯಾಗಿರುವಂತೆ ತೋರುತ್ತಿರುವುದರಿಂದ ಭಾರತೀಯ ಮಾರುಕಟ್ಟೆಯು ವಿವಿಧ ವಲಯಗಳಾದ್ಯಂತ ಚೇತರಿಕೆಯನ್ನು ಪ್ರದರ್ಶಿಸಿದೆ. ಆದಾಗ್ಯೂ, ಸರ್ಕಾರದ ರಚನೆ ಮತ್ತು ಮುಂಬರುವ ಆರ್‌ಬಿಐ ನೀತಿ ಸಭೆಯ ಮೇಲೆ ಗಮನವಿರುತ್ತದೆ" ಎಂದು ಜಿಯೋಜಿತ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
Advertisement