Reliance Jio ಹೊಸ ಅನ್ಲಿಮಿಟೆಡ್ 5G Plan; ಶೇ.20ರಷ್ಟು ದರ ಹೆಚ್ಚಳ, ಜುಲೈ 3ರಿಂದ ಪ್ರಾರಂಭ

JIO ಹೊಸ ಅನ್ಲಿಮಿಟೆಡ್ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಜುಲೈ 3 2024 ರಿಂದ ಹೊಸ ಯೋಜನೆಗಳು ಲಭ್ಯವಿರುತ್ತವೆ.
Reliance Jio introduces new unlimited 5G plans
ರಿಲಯನ್ಸ್ ಜಿಯೋ 5G
Updated on

ಮುಂಬೈ: ಖ್ಯಾತ ಮೊಬೈಲ್ ಸೇವಾ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಹೊಸ ಅನ್ಲಿಮಿಟೆಡ್ 5G Plan ಬಿಡುಗಡೆ ಮಾಡಿದ್ದು, ಶೇ.20ರಷ್ಟು ದರ ಹೆಚ್ಚಳ ಮಾಡಿ ಜುಲೈ 3ರಿಂದಲೇ ಈ ಹೊಸ ಪ್ಲಾನ್ ಗಳನ್ನು ಜಾರಿಗೊಳಿಸುತ್ತಿದೆ.

JIO ಹೊಸ ಅನ್ಲಿಮಿಟೆಡ್ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಜುಲೈ 3 2024 ರಿಂದ ಹೊಸ ಯೋಜನೆಗಳು ಲಭ್ಯವಿರುತ್ತವೆ. ಸುಸ್ಥಿರತೆಯನ್ನು ಬಲಪಡಿಸಲು ಅದರ ಬದ್ಧತೆಯನ್ನು ಹೆಚ್ಚಿಸುವುದು.

ಪ್ರೀಮಿಯರ್ ಡಿಜಿಟಲ್ ಸೊಸೈಟಿಯಾಗಿ ರೂಪಾಂತರಗೊಂಡ ಜಿಯೋ ಇಂದು ತನ್ನ ಹೊಸ ಅನಿಯಮಿತ ಯೋಜನೆಗಳನ್ನು ಘೋಷಿಸಿದೆ. ಅತ್ಯಂತ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ತನ್ನ ಭರವಸೆಯನ್ನು ಜಿಯೋ ಎತ್ತಿಹಿಡಿದಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶೇ.20ರಷ್ಟು ದರ ಹೆಚ್ಚಳ

ಜಿಯೋ ಪ್ರಿಪೇಯ್ಡ್‌ ಪ್ಲಾನ್‌ನ ಶುಲ್ಕಗಳನ್ನು (Jio Tariffs) ಶೇ.20ರಷ್ಟು ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. 28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್‌ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್‌ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.

ಅಂದಹಾಗೆ ಜಿಯೋ ಸಂಸ್ಥೆಯ ಈ 5G ಸೇವೆ 2G/day ಅಥವಾ ಅದಕ್ಕಿಂತ ಮೇಲ್ಪಟ್ಟ ಪ್ಲಾನ್ ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ನೂತನ ಜಿಯೋ 5 ಜಿ ಪ್ಲಾನ್ ಗಳು ಇಂತಿವೆ.

ಜಿಯೋ 5g ಪ್ಲಾನ್ ಗಳು
ಜಿಯೋ 5g ಪ್ಲಾನ್ ಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com