ಗೃಹ ಸಾಲ, ವಾಹನ ಸಾಲದ ಬಡ್ಡಿ ದುಬಾರಿ: ಉಳಿತಾಯ ಪ್ರಮಾಣ ಸತತ 3ನೇ ವರ್ಷವೂ ಕುಸಿತ!

ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ದುಬಾರಿಯಾಗುತ್ತಿರುವುದರ ಪರಿಣಾಮ ಮನೆಗಳಲ್ಲಿನ ಉಳಿತಾಯ 2024 ನೇ ಆರ್ಥಿಕ ವರ್ಷವೂ ಸೇರಿ ಸತತ 3 ನೇ ವರ್ಷ ಕುಸಿತ ಕಂಡಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)online desk

ನವದೆಹಲಿ: ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ದುಬಾರಿಯಾಗುತ್ತಿರುವುದರ ಪರಿಣಾಮ ಮನೆಗಳಲ್ಲಿನ ಉಳಿತಾಯ 2024 ನೇ ಆರ್ಥಿಕ ವರ್ಷವೂ ಸೇರಿ ಸತತ 3 ನೇ ವರ್ಷ ಕುಸಿತ ಕಂಡಿದೆ. ಆರ್ ಬಿಐ ಮುಂದಿನ ದಿನಗಳಲ್ಲಿ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದಂತೆ ಒಂದಷ್ಟು ಕಡಿವಾಣ ಹಾಕುವ ನಿರೀಕ್ಷೆ ಇದ್ದು, 2024-25 ರಲ್ಲಿ ಉಳಿತಾಯ ಕುಸಿತವಾಗುತ್ತಿರುವ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳಿವೆ.

3 ವರ್ಷಗಳಲ್ಲಿ ಸರಿ ಸುಮಾರು 9 ಲಕ್ಷ ಕೋಟಿ ಮೌಲ್ಯದಷ್ಟು ಉಳಿತಾಯ ಕುಸಿತ ಕಂಡಿದ್ದು, ಈಗ ಇದರ ಮೌಲ್ಯ 14.16 ಲಕ್ಷ ಕೋಟಿ ರೂಪಾಯಿಯಷ್ಟಾಗಿದೆ ಎಂದು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಖಾತೆ ಅಂಕಿ-ಅಂಶಗಳು 2024 ಮೂಲಕ ತಿಳಿದುಬಂದಿದೆ.

ಈ ದತ್ತಾಂಶವನ್ನು ವಿವರಿಸಿರುವ ICRA ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ಅದಿತಿ ನಾಯರ್, ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ, 2022-23 ರ ಅವಧಿಯಲ್ಲಿ ಬಾಧ್ಯತೆಗಳು ಶೇ.73 ರಷ್ಟು ಏರಿಕೆಯಾಗಿರುವುದು ಉಳಿತಾಯ ಕುಸಿಯುವುದಕ್ಕೆ ಕಾರಣ ಎಂದು ಹೇಳಿದ್ದಾರೆ.

(ಸಾಂಕೇತಿಕ ಚಿತ್ರ)
ಕೆಲ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ಸರ್ಕಾರ!

2023-24ರಲ್ಲಿ ಗೃಹ ಉಳಿತಾಯದಲ್ಲಿನ ಇಳಿಕೆಯ ಪ್ರವೃತ್ತಿಯು ಮುಂದುವರಿದಿದೆ ಎಂದು ತೋರುತ್ತದೆ, ಅದರ ಡೇಟಾವನ್ನು ನಂತರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅದಿತಿ ನಾಯರ್ ಹೇಳಿದ್ದಾರೆ.

ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ತಡೆಯಲು ಕ್ರಮಗಳನ್ನು ಕೈಗೊಂಡಿರುವುದರಿಂದ 2024-25ರಲ್ಲಿ ಈ ಪ್ರವೃತ್ತಿ ಕಡಿಮೆಯಾಗಬಹುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಪ್ರಕಾರ ಪೋರ್ಟ್‌ಫೋಲಿಯೊದಲ್ಲಿನ ಬದಲಾವಣೆಯು ಕುಸಿತಕ್ಕೆ ಕಾರಣವಾಗಿದ್ದು, ಉಳಿತಾಯದ ಹಣ ನೈಜ ಆಸ್ತಿಗಳಿಗೆ ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ.

2023 ನೇ ಆರ್ಥಿಕ ವರ್ಷದಲ್ಲಿ ನಿವ್ವಳ ಹಣಕಾಸಿನ ಉಳಿತಾಯದ ಹರಿವು ಕಡಿಮೆಯಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಆತಂಕಗಳಿವೆ. ಇದು ಕುಟುಂಬಗಳು ಕಡಿಮೆ ಉಳಿತಾಯ ಮಾಡುತ್ತಿದೆ ಎಂದು ಹೇಳುತ್ತದೆ. ಆದರೆ, ವಾಸ್ತವದಲ್ಲಿ, ಇದು ಪೋರ್ಟ್ಫೋಲಿಯೊ ಶಿಫ್ಟ್ ಆಗಿದ್ದು, ಉಳಿತಾಯವಾಗಬೇಕಿದ್ದ ಹಣ ನಿಜವಾದ ಆಸ್ತಿಗಳಿಗೆ ಹೋಗುತ್ತಿದೆ" ಎಂದು ನಾಗೇಶ್ವರನ್ ಹೇಳಿದ್ದಾರೆ.

(ಸಾಂಕೇತಿಕ ಚಿತ್ರ)
Kotak Mahindra Bank ಮೇಲೆ RBI ಕ್ರಮ: ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್, ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನಿಷೇಧಿಸಿದ್ದೇಕೆ?

ಹಾಗಾದರೆ ಮನೆಯ ಉಳಿತಾಯ ಎಂದರೇನು? ಐತಿಹಾಸಿಕ ಡೇಟಾ ಮತ್ತು 2024-25ರ ದೃಷ್ಟಿಕೋನ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ...

Q

ಮನೆ/ಕುಟುಂಬದ ಉಳಿತಾಯ ಎಂದರೇನು?

A

ಒಂದು ಮನೆ ಅಥವಾ ಕುಟುಂಬದ ಉಳಿತಾಯ ಎಂದರೆ ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ ವರ್ಗೀಕರಣ ವ್ಯವಸ್ಥೆಯಲ್ಲಿ ಸರ್ಕಾರೇತರ, ಅಥವಾ ಕಾರ್ಪೊರೇಟ್ ಅಲ್ಲದ ಉಳಿತಾಯಕ್ಕೆ ಸೇರಿದ್ದಾಗಿದೆ. ಇದು ಪಾಲುದಾರಿಕೆ ಮತ್ತು ಏಕಮಾತ್ರ ಮಾಲೀಕತ್ವವನ್ನು ಒಳಗೊಂಡಿರಬಹುದು.

Q

ಮನೆಯ ಉಳಿತಾಯವು ಐತಿಹಾಸಿಕವಾಗಿ ಹೇಗೆ ನಡೆದು ಬಂದಿದೆ?

A

ಗೃಹ ಉಳಿತಾಯ 2020-21 ರಲ್ಲಿ ಅಂದರೆ ಕೋವಿಡ್ ಪ್ಯಾಂಡಮಿಕ್ ನ 2ನೇ ಅವಧಿಯಲ್ಲಿ 23.29 ಲಕ್ಷ ಕೋಟಿಯೊಂದಿಗೆ ಉತ್ತುಂಗದಲ್ಲಿತ್ತು. ಈ ಬಳಿಕ ಅದು ಕುಸಿತ ದಾಖಲಿಸಿದ್ದು, 2021-22ರಲ್ಲಿ 17.12 ಲಕ್ಷ ಕೋಟಿ ರೂ.ಗೆ ಕುಸಿದು 2022-23ರಲ್ಲಿ 14.16 ಲಕ್ಷ ಕೋಟಿ ರೂಗಳಿಗೆ ಇಳಿದಿದೆ.

Q

ಮನೆಯ ಉಳಿತಾಯವನ್ನು ಕಳೆಯುವ ಬಾಧ್ಯತೆಗಳಾವುವು ಎಂದರೆ...

A

ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲಗಳು ಹಾಗೂ ಇತರ ಸಾಲಗಳು ಮನೆಯ ಉಳಿತಾಯವನ್ನು ಕಳೆಯುವ ಬಾಧ್ಯತೆಗಳಾಗಿವೆ. ಹಣಕಾಸು ನಿಗಮಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಮನೆಗಳಿಗೆ ನೀಡುವ ಸಾಲಗಳು ನಾಲ್ಕು ಪಟ್ಟು ಹೆಚ್ಚಾಗಿದ್ದು 3.33 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದು 2020-21 ರಲ್ಲಿ 93,723 ಕೋಟಿಯಷ್ಟಿತ್ತು. 2022-23 ರಲ್ಲಿ ಶೇ.73 ರಷ್ಟು ಏರಿಕೆಯಾಗಿದ್ದು, 1.92 ಲಕ್ಷ ಕೋಟಿ ರೂಪಾಯಿಗಳಾಗಿತ್ತು.

Q

ಸಾಲದ ಬಾಧ್ಯತೆಗಳು ಏಕೆ ಹೆಚ್ಚಾಗುತ್ತಿವೆ?

A

ಅದಿತಿ ನಾಯರ್ ಪ್ರಕಾರ, ಸಾಲದ ಬಾಧ್ಯತೆಗಳ ಒಂದು ಭಾಗವು ಗೃಹ ಸಾಲಗಳ ಕಡೆಗೆ ಹೋಗುತ್ತಿವೆ. ಕೋವಿಡ್ ನಂತರ ವಸತಿ ಮಾರುಕಟ್ಟೆ ಚೇತರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ ಮತ್ತು ಕೋವಿಡ್ ನಂತರದ ಕೆಲವು ವರ್ಷಗಳಲ್ಲಿ ಗೃಹ ಮಾರಾಟವು ಗರಿಷ್ಠ ಮಟ್ಟವನ್ನು ತಲುಪೆ. ಆದರೆ ಇದು ಕೇವಲ ಗೃಹ ಖರೀದಿ ಸಾಲಗಳಲ್ಲ, ಅಲ್ಲಿ ಮನೆ ನಿರ್ವಹಣೆ ವೆಚ್ಚವೂ ಹೆಚ್ಚಿವೆ. ವಾಹನ ಮತ್ತು ಶಿಕ್ಷಣ, ಕೃಷಿ ಮತ್ತು ವ್ಯಾಪಾರ ಸಾಲಗಳನ್ನು ಸಹ ಇದು ಒಳಗೊಂಡಿದೆ.

"2024 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮನೆಯ ಹೊಣೆಗಾರಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ ಆದ್ದರಿಂದ ಈ ಕೆಲವು ಪ್ರವೃತ್ತಿಗಳು ಮುಂದುವರಿಯಬಹುದು. ಆದಾಗ್ಯೂ, RBI ಯಿಂದ ಇತ್ತೀಚಿನ ನಿಯಂತ್ರಣವನ್ನು ಬಿಗಿಗೊಳಿಸುವುದರೊಂದಿಗೆ, 2025ರಲ್ಲಿ ಕೆಲವು ವರ್ಗಗಳ ವೈಯಕ್ತಿಕ ಸಾಲಗಳು ನಿಧಾನಗತಿಯ ಬೆಳವಣಿಗೆಯನ್ನು ಕಾಣುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ನಾಯರ್ ಹೇಳಿದರು.

ವೈಯಕ್ತಿಕ ಸಾಲಗಳ ಏರಿಕೆಯನ್ನು ಕಂಡ RBI ಕಳೆದ ವರ್ಷ ನವೆಂಬರ್‌ನಲ್ಲಿ ವೈಯಕ್ತಿಕ ಸಾಲ ಸೇರಿದಂತೆ ಅಸುರಕ್ಷಿತ ಸಾಲಗಳಿಗೆ ನಿಬಂಧನೆಗಳನ್ನು ಹೆಚ್ಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com