ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಹೌದು. ಕೆಜಿ 40-60 ರೂ. ಇದ್ದ ಈರುಳ್ಳಿ ಈಗ ರೂ. 70-80 ಆಗಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಕೈ ಸುಡುತ್ತಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ವಾದನೆ ಕುಂಠಿತ ಹಾಗೂ ಪೂರೈಕೆಯ ಕೊರತೆಯಿಂದಾಗಿ ಬೆಲೆಗಳು ಗಗನಕ್ಕೇರಿದೆ.
ದೆಹಲಿಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 60 ರಿಂದ 70 ರೂ.ಗೆ ಏರಿದೆ. ಬೆಲೆ ಏರಿಕೆಯಿಂದಾಗಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಜನರು ಇನ್ನೂ ಅದನ್ನು ಖರೀದಿಸುತ್ತಿದ್ದಾರೆ ಎಂದು ಮಾರಾಟಗಾರರೊಬ್ಬರು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಗ್ರಾಹಕ ಫೈಜಾ "ಈರುಳ್ಳಿಯ ಬೆಲೆ ಸೀಸನ್‌ಗೆ ಅನುಗುಣವಾಗಿ ಕಡಿಮೆಯಾಗಬೇಕಾಗಿದ್ದರೂ ಸಹ ಹೆಚ್ಚಾಗಿದೆ. ಕೆಜಿಗೆ 70 ರೂ. ಕೊಟ್ಟು ಈರುಳ್ಳಿ ಖರೀದಿಸಿದೆ. ಪ್ರತಿದಿನ ತಿನ್ನುವ ತರಕಾರಿಗಳ ಬೆಲೆಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಹಲವಾರು ಪಟ್ಟು ಹೆಚ್ಚಾಗಿದ್ದುಮನೆಯ ಬಜೆಟ್‌ನ ಮೇಲೂ ಪರಿಣಾಮ ಬೀರಿದೆ ಎಂದು ಮುಂಬೈ ಗ್ರಾಹಕ ಡಾ. ಖಾನ್ ತಿಳಿಸಿದರು.
ಕಳೆದ ಎರಡು ದಿನಗಳಿಂದ, ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಗಟು ಈರುಳ್ಳಿ ಬೆಲೆಯು ಸ್ಥಿರವಾದ ಏರಿಕೆ ಕಂಡಿದೆ. ಇದೇ ರೀತಿಯ ಪ್ರವೃತ್ತಿ ಮುಂದುವರೆದರೆ ಕೆಜಿ ಈರುಳ್ಳಿ ರೂ.100ಕ್ಕೆ ಏರುವ ಮುನ್ಸೂಚನೆ ಸಿಗುತ್ತಿವೆ.
ಗುರುವಾರ ಪ್ರೀಮಿಯಂ ಈರುಳ್ಳಿ ಬೆಲೆ ಕೆಜಿಗೆ ರೂ.70-80 ಇತ್ತು. ಆದರೆ, ಕಡಿಮೆ ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ ಸುಮಾರು ರೂ.40 ಇದೆ. ಕರ್ನಾಟಕದಲ್ಲಿ ಇತ್ತೀಚಿನ ಧಾರಾಕಾರ ಮಳೆಯು ಸ್ಥಳೀಯ ಈರುಳ್ಳಿ ಬೆಳೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ವ್ಯಾಪಕವಾದ ಬೆಳೆ ಹಾನಿಯಾಗಿದ್ದು, ಇದು ಕೊರತೆಗೆ ಕಾರಣವಾಗಿದ್ದು, ಬೆಲೆ ತೀವ್ರವಾಗಿ ಏರಿದೆ.
ಕಡಿಮೆ ಗುಣಟ್ಟದ ಈ ಈರುಳ್ಳಿಯನ್ನು ಚಿತ್ರದುರ್ಗ, ಬಾಗಲಕೋಟೆ, ಗದಗ, ಕೊಪ್ಪಳ ಮುಂತಾದ ಪ್ರದೇಶಗಳಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದೆ ಎಂದು ಯಶವಂತಪುರ ಎಪಿಎಂಸಿಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಇತರ ತರಕಾರಿ ಬೆಲೆಯೂ ಹೆಚ್ಚಾಗುತ್ತಿದೆ.
Advertisement