ರಫ್ತಿಗೆ ಒತ್ತು: ಬಾಸ್ಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದು; ಈರುಳ್ಳಿ ಬೆಳೆಗಾರರಿಗೂ ಖುಷಿ ಸುದ್ದಿ ಕೊಟ್ಟ ಕೇಂದ್ರ!

ಬಾಸುಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.
Basmati rice
ಸಂಗ್ರಹ ಚಿತ್ರ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ಬಾಸ್ಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದತಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬಾಸುಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.

‘ರೈತರ ಕಲ್ಯಾಣದತ್ತ ಗಮನಹರಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ದರವನ್ನು ರದ್ದುಗೊಳಿಸಲು ನಿರ್ಧರಿಸಿದೆ. ರಫ್ತು ದರವನ್ನು ರದ್ದುಪಡಿಸುವುದರಿಂದ ಬಾಸ್ಮತಿ ಅಕ್ಕಿ ಉತ್ಪಾದಿಸುವ ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಅನುಕೂಲವಾಗುತ್ತದೆ. ಜತೆಗೆ, ಬಾಸ್ಮತಿ ಅಕ್ಕಿಯ ಬೇಡಿಕೆ ಹೆಚ್ಚಳದೊಂದಿಗೆ ರಫ್ತು ಕೂಡ ಹೆಚ್ಚಾಗುತ್ತದೆ ಎಂದು ಚೌಹಾಣ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿ ಟನ್‌ಗೆ 79,678 ರೂ ದರ ನಿಗದಿಪಡಿಸಲಾಗಿತ್ತು. ಇಡೀ ದೇಶದಲ್ಲಿಯೇ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬಾಸ್ಮತಿ ಅಕ್ಕಿ ಬೆಳೆಯಲಾಗುತ್ತದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಬಾಸ್ಮತಿ ಅಕ್ಕಿಯ ಮೇಲಿನ ಪ್ರತಿ ಟನ್‌ಗೆ 950 ಡಾಲರ್ MEP ಅನ್ನು ತೆಗೆದುಹಾಕುವುದರಿಂದ ರಫ್ತು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಸ್ಮತಿ ಅಕ್ಕಿ ರಫ್ತುಗಾಗಿ ನೋಂದಣಿ-ಕಮ್-ಹಂಚಿಕೆ ಪ್ರಮಾಣಪತ್ರಗಳನ್ನು (RCAC) ನೀಡಲು USD 950 MT ಪ್ರಸ್ತುತ ಕನಿಷ್ಠ ರಫ್ತು ಬೆಲೆಯನ್ನು (MEP) ತೆಗೆದುಹಾಕಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.

ಅಂತೆಯೇ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಈ ನಿರ್ಧಾರವನ್ನು ತಕ್ಷಣವೇ ಜಾರಿಗೆ ತರಲು ಮತ್ತು ಅವಾಸ್ತವಿಕ ಬೆಲೆಗಳನ್ನು ತಡೆಯಲು ರಫ್ತು ಒಪ್ಪಂದಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

Basmati rice
ಅನ್ನಭಾಗ್ಯ ಯೋಜನೆ: ಅಕ್ಕಿ ಕೊಟ್ಟರೂ ಖರೀದಿಗೆ ಕರ್ನಾಟಕ ಸಿದ್ಧವಿಲ್ಲ- ಕೇಂದ್ರ ಸರ್ಕಾರ

ಈರುಳ್ಳಿ ಮೇಲಿನ ರಫ್ತು ಸುಂಕ ಕಡಿತ

ಇದೇ ವೇಳೆ ಈರುಳ್ಳಿ ಮೇಲಿನ ರಫ್ತು ಸುಂಕವನ್ನು 40% ರಿಂದ 20% ಕ್ಕೆ ಕಡಿತಗೊಳಿಸಲಾಗಿದ್ದು, ಈ ನೂತನ ಕ್ರಮವು ಸೆಪ್ಟೆಂಬರ್ 14 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರುತ್ತದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಘೋಷಿಸಲಾದ ಈ ನಿರ್ಧಾರಗಳು ಕೃಷಿ ರಫ್ತು ಪ್ರಮಾಣವನ್ನು ಹೆಚ್ಚಿಸುವ ಮತ್ತು ರೈತರನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈರುಳ್ಳಿ ಮೇಲಿನ MEP ಅನ್ನು ರದ್ದುಗೊಳಿಸಿದೆ, ಇದನ್ನು ಮೇ ತಿಂಗಳಿನಿಂದ ಪ್ರತಿ ಟನ್‌ಗೆ $550 ಎಂದು ನಿಗದಿಪಡಿಸಲಾಗಿದೆ. ಹೆಚ್ಚಿನ ಚಿಲ್ಲರೆ ಬೆಲೆಗಳ ಹೊರತಾಗಿಯೂ, ಈ ಕ್ರಮವು ಹೆಚ್ಚಿನ ಈರುಳ್ಳಿ ರಫ್ತುಗಳನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಪ್ರಮುಖ ಅಡಿಗೆ ವಸ್ತುವಿನ ಹೆಚ್ಚಿನ ಚಿಲ್ಲರೆ ಬೆಲೆಗಳ ಹೊರತಾಗಿಯೂ ಈರುಳ್ಳಿ ಮೇಲಿನ MEP ಅನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತವು ಈ ಆರ್ಥಿಕ ವರ್ಷದ ಜುಲೈವರೆಗೆ 2.6 ಲಕ್ಷ ಟನ್ ಈರುಳ್ಳಿಯನ್ನು ರಫ್ತು ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶವು 16.07 ಲಕ್ಷ ಟನ್ ಈರುಳ್ಳಿಯನ್ನು ರಫ್ತು ಮಾಡಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಶುಕ್ರವಾರದಂದು ಅಖಿಲ ಭಾರತ ಸರಾಸರಿ ಈರುಳ್ಳಿ ಬೆಲೆ ಕೆಜಿಗೆ 50.83 ರೂ.ಗಳಾಗಿದ್ದು, ಪ್ರತಿ ಕೆಜಿಗೆ 28 ​​ರೂ.ನಿಂದ 83 ರೂ.ವರೆಗೆ ವ್ಯತ್ಯಾಸವಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com