Gold Rate: ಹಬ್ಬ ಮುಗಿಯಿತು; ಚಿನ್ನದ ಬೆಲೆ ಇಳಿಯಿತು; ವಿವರ ಇಂತಿದೆ!

ಸೋಮವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ 600 ರೂ ವರೆಗೂ ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.
Gold Rate
ಸಂಗ್ರಹ ಚಿತ್ರ
Updated on

ಮುಂಬೈ: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಹಬ್ಬ ಈಗ ಇಳಿಕೆಯಾಗಿದ್ದು, ಹಳದಿ ಲೋಹದ ದರ ಕ್ರಮೇಣ ಇಳಿಮುಖ ಕಾಣುತ್ತಿದೆ.

ಸೋಮವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ 600 ರೂ ವರೆಗೂ ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.

ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ 60 ರೂ ಇಳಿಕೆಯಾಗಿದೆ. ಅಂತೆಯೇ 22 ಕ್ಯಾರೆಟ್ ಚಿನ್ನದ ದರದಲ್ಲಿ 55 ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ 45 ರೂ ಇಳಿಕೆಯಾಗಿದೆ.

Gold Rate
ಬೆಂಗಳೂರು: ಮಾಲೀಕನ ಮನೆಯಲ್ಲಿದ್ದ 15 ಕೋಟಿ ರೂ. ಚಿನ್ನ, 40 ಲಕ್ಷ ರೂ. ನಗದು ಕದ್ದ ಸೆಕ್ಯೂರಿಟಿ ಗಾರ್ಡ್!

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ ಇಂತಿದ್ದು, 22 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 550 ರೂ ಇಳಿಕೆಯಾಗಿ, 72,200 ರೂ ಗೆ ಇಳಿಕೆಯಾಗಿದೆ. 18 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 450 ರೂ ಇಳಿಕೆಯಾಗಿ, 59,070 ರೂ ತಲುಪಿದೆ. 24 ಕ್ಯಾರೆಟ್ ನ ಚಿನ್ನದ ದರದಲ್ಲಿ 600 ರೂ ಇಳಿಕೆಯಾಗಿ 78,760 ರೂ ತಲುಪಿದೆ. ನಿನ್ನೆ ಈ ದರ 79,360 ರೂ ಗಳಷ್ಟಿತ್ತು.

ಬೆಳ್ಳಿ ದರ ಕೂಡ ಇಳಿಕೆ

ಏತನ್ಮದ್ಯೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 1000 ರೂ ಇಳಿಕೆಯಾಗಿದೆ. ಸೋಮವಾರದಂದು ಪ್ರತಿ ಕೆಜಿ ಬೆಳ್ಳಿ ದರ 93,000 ರೂ ಗೆ ಇಳಿಕೆದಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com