ಬೆಂಗಳೂರು: ಮಾಲೀಕನ ಮನೆಯಲ್ಲಿದ್ದ 15 ಕೋಟಿ ರೂ. ಚಿನ್ನ, 40 ಲಕ್ಷ ರೂ. ನಗದು ಕದ್ದ ಸೆಕ್ಯೂರಿಟಿ ಗಾರ್ಡ್!

ನವೆಂಬರ್ 1ರಂದು ಸಂಜೆ 5 ಗಂಟೆಗೆ ಕುಟುಂಬ ಸಮೇತ ಗುಜರಾತ್​ಗೆ ತೆರಳಿದ್ದ ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್‌ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಈ ಕಳ್ಳತನ ಬೆಳಕಿಗೆ ಬಂದಿದೆ.
ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್​​
ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್​​
Updated on

ಬೆಂಗಳೂರು: ಸೆಕ್ಯೂರಿಟಿ ಗಾರ್ಡ್, ತನ್ನ ಮಾಲೀಕನ ಮನೆಯಲ್ಲಿದ್ದ 15 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 40 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್​​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳ ಮೂಲದ ನಮ್ರಾಜ್, ತನ್ನ ಮಾಲೀಕನ ಮನೆಯಲ್ಲಿದ್ದ ಬರೋಬ್ಬರಿ 15.15 ಕೋಟಿ ರೂ. ಮೌಲ್ಯದ 18.4 ಕೆ.ಜಿಯ ಚಿನ್ನಾಭರಣ ಮತ್ತು 40 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್‌ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಪೊಲೀಸ್​ ಠಾಣೆಗೆ ದೂರು ನೀಡಿದ್ದು, ನೇಪಾಳ ಮೂಲದ ನಮ್ರಾಜ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಸದ್ಯ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್​​
1.22 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಚಿನ್ನದ ವ್ಯಾಪಾರಿ ಮನೆಯಲ್ಲಿ ಕಳುವಾಗಿದ್ದು ಬರೋಬ್ಬರಿ 18.4ಕೆಜಿ ಚಿನ್ನ. ಆ ಪೈಕಿ ಸುರೇಂದ್ರ ಕುಮಾರ್ ಜೈನ್ ಕುಟುಂಬಕ್ಕೆ 2.8 ಕೆಜಿ ಚಿನ್ನ ಸೇದಿದ್ದು, ಅವರ 5 ಸಹೋದರಿಯರ ಒಟ್ಟು 2.7 ಕೆಜಿ ಚಿನ್ನ ಹಾಗೂ ವ್ಯಾಪಾರದ 12.8 ಕೆಜಿ ಚಿನ್ನ ಕಳುವು ಮಾಡಲಾಗಿದೆ. ಜೊತೆಗೆ ಮನೆಯಲ್ಲಿದ್ದ ವ್ಯಾಪಾರದ 37.8 ಲಕ್ಷ, ವೈಯಕ್ತಿಕ 3 ಲಕ್ಷ ರೂ. ಹಣ ಸಹ ಕಳುವಾಗಿದ್ದು, ಒಟ್ಟಾರೆ 18 ಕೆಜಿ 437 ಗ್ರಾಂ ಚಿನ್ನ, 40.80 ಲಕ್ಷ ನಗದು ಸೇರಿ ಅಂದಾಜು ಮೌಲ್ಯ 15.15 ಕೋಟಿ ರೂ. ಆಗಿದೆ.

ನಮ್ರಾಜ್​​ ನೇಪಾಳ ಮೂಲದವನಾಗಿದ್ದು, ಜ್ಯುವೆಲರಿ ಶಾಪ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದನು. ಆತನಿಗೆ ಮನೆಯಿಲ್ಲದ ಕಾರಣ ತಮ್ಮ ನಿವಾಸದ ಬಳಿ ಪಾರ್ಕಿಂಗ್​ನಲ್ಲಿ ಸೆಕ್ಯೂರಿಟಿಗೆ ಮನೆ ನೀಡಿದ್ದೆ. ಕಳೆದ ಆರು ತಿಂಗಳಿಂದ ಪತ್ನಿ ಜೊತೆ ಸೆಕ್ಯೂರಿಟಿ ರೂಂನಲ್ಲಿ ನಮ್ರಾಜ್ ವಾಸವಿದ್ದ. ಈ ನಡುವೆ ಜ್ಯುವೆಲರಿ ಶಾಪ್​ನ ಸೆಕ್ಯೂರಿಟಿ ಕೆಲಸದ ಜೊತೆ ತಮ್ಮ ಮನೆಯಲ್ಲೂ ಕೆಲಸ ಮಾಡುತ್ತಿದ್ದ. ಗಿಡಿಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು ಎಂದು ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ.

ನವೆಂಬರ್ 1ರಂದು ಸಂಜೆ 5 ಗಂಟೆಗೆ ಕುಟುಂಬ ಸಮೇತ ಗುಜರಾತ್​ಗೆ ತೆರಳಿದ್ದ ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್‌ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಮನೆ ಕಳ್ಳತನವಾಗಿರುವುದು ತಿಳಿದು ನಮ್ರಾಜ್​ಗೆ ಕರೆ ಮಾಡಿದ್ದಾರೆ. ಆದರೆ ಆತನ ನಂಬರ್ ಸ್ವಿಚ್ ಆಫ್ ಬಂದಿದೆ. ಹೀಗಾಗಿ ಆತನೇ ಕಳ್ಳತನ ಮಾಡಿರಬಹುದು ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ವಿಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com