
ಬೆಂಗಳೂರು: ಚಾಮರಾಜಪೇಟೆಯ ಉದ್ಯಮಿಯೊಬ್ಬರ ಮನೆಯಲ್ಲಿ 1.22 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 570 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳf ಕಳವು ಮಾಡಿದ್ದ ಇಬ್ಬರು ಕಾರು ಚಾಲಕರನ್ನು ವಿವಿ ಪುರಂ ಪೊಲೀಸರು ಬಂಧನಕ್ಕೊಳಸಿಪಡಿಸಿದ್ದಾರೆ.
ಮುಂಬೈ ಮೂಲದ ಕೇಶವ್ ಪಾಟೀಲ್ (37) ಮತ್ತು ನಿತಿನ್ ಕಾಳೆ (31) ಬಂಧಿತ ಆರೋಪಿಗಳು. ಕೇಶವ್ ಪಾಟೀಲ್ ಉದ್ಯಮಿಯ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
6 ತಿಂಗಳ ಹಿಂದೆ ಉದ್ಯಮಿಯ ಬಳಿ ಕೆಲಸ ಬಿಟ್ಟಿದ್ದ ಪಾಟೀಲ್, ಮತ್ತೊಬ್ಬ ಆರೋಪಿ ನಿತಿನ್ ಕಾಳೆ ಜೊತೆಗೂಡಿ ಕಳ್ಳತನಕ್ಕೆ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಚಿನ್ನವನ್ನು ಆರೋಪಿ ಕೇಶವ್ ಪಾಟೀಲ್ ಅಮೃತಹಳ್ಳಿಯಲ್ಲಿರುವ ತನ್ನ ಸೋದರ ಮಾವ ಮೋಹನ್ ಎಂಬುವವರ ಮನೆಯಲ್ಲಿ ಬಚ್ಚಿಟ್ಟಿದ್ದ. ಈ ವಿಚಾರ ತಿಳಿದ ಬಳಿಕ ಅವಮಾನಿತರಾಗಿ ಮೋಹನ್ ಅವರು ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement