ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು ಸೆನ್ಸೆಕ್ಸ್ 820 ಅಂಕ ಕುಸಿತಗೊಂಡಿದೆ.
ನಿನ್ನೆ ಅತ್ಪಲ್ಯ ಅಂಕಗಳ ಏರಿಳಿತದಿಂದ ದಿನದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.03ರಿಂದ ಶೇ.1.07ರವರೆಗೂ ಕುಸಿದಿದೆ. ಸೆನ್ಸೆಕ್ಸ್ ಇಂದು ಶೇ.1.03ರಷ್ಟು ಅಂದರೆ, 820.97 ಅಂಕಗಳ ಕುಸಿತದೊಂದಿಗೆ 78,675.18 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಚಿ ಶೇ.1.07ರಷ್ಟು ಕುಸಿತದೊಂದಿಗೆ 257.85 ಅಂಕಗಳ ಕುಸಿತ ಕಂಡು 23,883.45 ಅಂಕಗಳಿಗೆ ಕುಸಿದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಬ್ರಿಟಾನಿಯಾ, ಭಾರತ್ ಎಲೆಕ್ಟ್ರಾನಿಕ್ಸ್, NTPC, ಏಷ್ಯನ್ ಪೇಂಟ್ಸ್, ಮತ್ತು HDFC ಬ್ಯಾಂಕ್ ಗಳ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತವಾಗಿದ್ದು, ಅಂತೆಯೇ ಟ್ರೆಂಟ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು HCL ಟೆಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.
Advertisement