ಮುಂಬೈ: ಹಬ್ಬಗಳ ಸರಣಿ ಮುಕ್ತಾಯದ ಬಳಿಕ ಕುಸಿದಿದ್ದ ಚಿನ್ನದ ದರ ಮತ್ತೆ ಏರಿಗತಿಯಲ್ಲಿ ಸಾಗಿದ್ದು, ಗುರುವಾರ ಹಳದಿ ಲೋಹದ ದರ ಅಲ್ಪ ಏರಿಕೆಯಾಗಿದೆ.
ಹೌದು.. ಗುರುವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 300 ರೂ ಗಳ ವರೆಗೂ ಏರಿಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.
ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ 33 ರೂ ಏರಿಕೆಯಾಗಿದೆ. ಅಂತೆಯೇ 22 ಕ್ಯಾರೆಟ್ ಚಿನ್ನದ ದರದಲ್ಲಿ 30 ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ 24 ರೂ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ ಇಂತಿದ್ದು, 22 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 300 ರೂ ಏರಿಕೆಯಾಗಿ, 71,450 ರೂಗೆ ಏರಿಕೆಯಾಗಿದೆ. ಅಂತೆಯೇ 18 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 192 ರೂ ಏರಿಕೆಯಾಗಿ, 46,768 ರೂ ತಲುಪಿದೆ. ಅಂತೆಯೇ 24 ಕ್ಯಾರೆಟ್ ನ ಚಿನ್ನದ ದರದಲ್ಲಿ 330 ರೂ ಏರಿಕೆಯಾಗಿ 77,950 ರೂ ತಲುಪಿದೆ. ನಿನ್ನೆ ಈ ದರ 77,620 ರೂ ಗಳಷ್ಟಿತ್ತು.
ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಏತನ್ಮದ್ಯೆ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ನಿನ್ನೆಯಂತೇ ಪ್ರತೀ ಕೆಜಿ ಬೆಳ್ಳಿ ದರ 92,000 ರೂ ನಷ್ಟಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ತಿಳಿಸಿದೆ.
Advertisement