ಮುಂಬೈ: ಸತತ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕೊನೆಗೂ ಮಂಗಳವಾರ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ 239.38 ಅಂಕ ಏರಿಕೆಯಾಗಿದೆ.
ಹೌದು.. ಕಳೆದೊಂದು ವಾರದಿಂದ ಸತತ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಚೇತೋಹಾರಿ ವಹಿವಾಟಿನೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 239.38 ಅಂಕಗಳ ಏರಿಕೆಯೊಂದಿಗೆ 77,578.38 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 64.70 ಅಂಕ ಏರಿಕೆಯಾಗಿ, 23,518.50 ಅಂಕಗಳಿಗೆ ಏರಿಕೆಯಾಗಿದೆ.
ಭಾರತೀಯ ಷೇರುಮಾರುಕಟ್ಟೆ ಇಂದು ಶೇ.0.28ರಿಂದ ಶೇ0.31ರವರೆಗೂ ಏರಿಕೆಯಾಗಿದ್ದು, ಸೆನ್ಸೆಕ್ಸ್ ಇಂದು ಶೇ.0.31ರಷ್ಟು ಅಂದರೆ, 239.38 ಅಂಕಗಳ ಏರಿಕೆಯೊಂದಿಗೆ 77,578.38 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಶೇ.0.28ರಷ್ಟು ಏರಿಕೆಯೊಂದಿಗೆ 64.70 ಅಂಕಗಳ ಏರಿಕೆ ಕಂಡು 23,518.50 ಅಂಕಗಳಿಗೆ ಏರಿಕೆಯಾಗಿದೆ.
ವಲಯದ ಸೂಚ್ಯಂಕಗಳಲ್ಲಿ, ನಿಫ್ಟಿ ಮೀಡಿಯಾ, ನಿಫ್ಟಿ ಆಟೋ, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಐ.ಟಿ. ವಿಭಾಗದ ಷೇರುಗಳು ಲಾಭಾಂಶ ಕಂಡಿವೆ. ಅಂತೆಯೇ ನಿಫ್ಟಿ ಮೆಟಲ್ ಇಂಡೆಕ್ಸ್, ನಿಫ್ಟಿ ಪಿಎಸ್ಯು ಬ್ಯಾಂಕ್ ಸೆಕ್ಟರ್ ನ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಮಹೀಂದ್ರಾ & ಮಹೀಂದ್ರಾ, ಟೆಕ್ ಮಹೀಂದ್ರಾ, HDFC ಬ್ಯಾಂಕ್, ಟೈಟಾನ್, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ಲಾಭಾಂಶ ಕಂಡಿದ್ದು, ಅಂತೆಯೇ ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫಿನ್‌ಸರ್ವ್, ಮಾರುತಿ, ಟಾಟಾ ಸ್ಟೀಲ್ ಮತ್ತು ಭಾರ್ತಿ ಏರ್‌ಟೆಲ್ ನಷ್ಟ ಅನುಭವಿಸಿವೆ.
Advertisement