ವಾರಕ್ಕೆ 5 ದಿನ ಕೆಲಸ ಸಂಸ್ಕೃತಿಗೆ ಭಾರತ ಹೊರಳಿದಾಗ ಬೇಸರಗೊಂಡಿದ್ದ ನಾರಾಯಣ ಮೂರ್ತಿ!

“ನನ್ನನ್ನು ಕ್ಷಮಿಸಿ, ನಾನು ನನ್ನ ದೃಷ್ಟಿಕೋನವನ್ನು ಬದಲಾಯಿಸಿಲ್ಲ. ನಾನು ಈ ನನ್ನ ನಿಲುವಿಗೆ ಕೊನೆಯುಸಿರುವವರೆಗೂ ಬದ್ಧನಾಗಿರುತ್ತೇನೆ ಎಂದು ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ನಾರಾಯಣ ಮೂರ್ತಿ ಹೇಳಿದ್ದಾರೆ.
Narayana Murthy
ನಾರಾಯಣ ಮೂರ್ತಿonline desk
Updated on

ಮುಂಬೈ: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕೆಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಕಠಿಣ ಪರಿಶ್ರಮವು ಭಾರತದ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನನ್ನನ್ನು ಕ್ಷಮಿಸಿ, ನಾನು ನನ್ನ ದೃಷ್ಟಿಕೋನವನ್ನು ಬದಲಾಯಿಸಿಲ್ಲ. ನಾನು ಈ ನನ್ನ ನಿಲುವಿಗೆ ಕೊನೆಯುಸಿರುವವರೆಗೂ ಬದ್ಧನಾಗಿರುತ್ತೇನೆ ಎಂದು ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ನಾರಾಯಣ ಮೂರ್ತಿ ಹೇಳಿದ್ದಾರೆ.

ಅನುಭವಿ ವಾಣಿಜ್ಯೋದ್ಯಮಿಯಾಗಿರುವ ನಾರಾಯಣ ಮೂರ್ತಿ, ವಾರದಲ್ಲಿ 5 ದಿನಗಳ ಕಾಲ ಕೆಲಸ ಮಾಡುವ ಸಂಸ್ಕೃತಿಯ ಬಗ್ಗೆಯೂ ಮಾತನಾಡಿದ್ದು, ಭಾರತದಲ್ಲಿ ಒಂದು ವಾರದಲ್ಲಿ 6 ಇದ್ದ ಕೆಲಸದ ದಿನಗಳು 1986 ರಲ್ಲಿ 5 ದಿನಗಳಿಗೆ ಇಳಿಕೆಯಾದಾಗ ನಾನು ನಿರಾಶೆಗೊಂಡಿದ್ದೆ ಎಂದು ಹೇಳಿದ್ದು, ಭಾರತದ ಅಭಿವೃದ್ಧಿಗೆ ತ್ಯಾಗದ ಅಗತ್ಯವಿದೆ, ವಿಶ್ರಾಂತಿ ಅಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ 100 ಗಂಟೆಗಳ ಕೆಲಸದ ವಾರದ ಬಗ್ಗೆ ಗಮನ ಸೆಳೆದ ಅವರು, "ಪ್ರಧಾನಿ ಮೋದಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮ್ಮ ಮೆಚ್ಚುಗೆಯನ್ನು ತೋರಿಸುವ ಏಕೈಕ ಮಾರ್ಗವೆಂದರೆ ಅದು ಅಷ್ಟೇ ಕಷ್ಟಪಟ್ಟು ಕೆಲಸ ಮಾಡುವುದಾಗಿದೆ" ಎಂದು ಹೇಳಿದ್ದಾರೆ.

WWII ನಂತರದ ಜರ್ಮನಿ ಮತ್ತು ಜಪಾನ್‌ನ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದು, ಭಾರತ ಕಠಿಣ ಪರಿಶ್ರಮ ಮತ್ತು ರಾಷ್ಟ್ರೀಯ ಪುನರ್ನಿರ್ಮಾಣದ ಇದೇ ಮಾರ್ಗವನ್ನು ಅನುಸರಿಸಬೇಕೆಂದು ಸಲಹೆ ನೀಡಿ "ತಮ್ಮ ದೇಶಗಳನ್ನು ಪುನರ್ನಿರ್ಮಿಸಲು ಅವರು ಇದನ್ನೇ ಮಾಡಿದರು" ಎಂದು ಮೂರ್ತಿ ಹೇಳಿದ್ದಾರೆ.

ನಾರಾಯಣ ಮೂರ್ತಿ ತಮ್ಮ ಕೆಲಸದ ನೀತಿಯ ಬಗ್ಗೆ ವೈಯಕ್ತಿಕ ಒಳನೋಟಗಳನ್ನು ಹಂಚಿಕೊಂಡಿದ್ದಾರೆ ಅವರ ವೃತ್ತಿಜೀವನದುದ್ದಕ್ಕೂ ಅವರು 14-ಗಂಟೆಗಳ ದಿನಗಳು, ವಾರದಲ್ಲಿ ಆರೂವರೆ ದಿನಗಳ ತೀವ್ರ ವೇಳಾಪಟ್ಟಿಯನ್ನು ನಿರ್ವಹಿಸುತ್ತಿದ್ದುದ್ದನ್ನು ಅವರು ಬಹಿರಂಗಪಡಿಸಿದ್ದಾರೆ. ಬೆಳಗ್ಗೆ 6:30ಕ್ಕೆ ಕಚೇರಿಗೆ ಬಂದು ರಾತ್ರಿ 8:40ರ ಸುಮಾರಿಗೆ ಹೊರಡುತ್ತಿದ್ದುದ್ದನ್ನು ನೆನಪಿಸಿಕೊಂಡ ಅವರು "ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ," ಎಂದು ಹೇಳಿದ್ದಾರೆ.

Narayana Murthy
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಬೇಕಿಲ್ಲ: ನಾರಾಯಣ ಮೂರ್ತಿ

78 ವರ್ಷ ವಯಸ್ಸಿನ ಉದ್ಯಮಿ ತಾವು ಕಠಿಣ ಪರಿಶ್ರಮವು ಯಶಸ್ಸಿನ ಏಕೈಕ ಮಾರ್ಗವೆಂದು ದೃಢವಾಗಿ ನಂಬುವುದಾಗಿ ತಿಳಿಸಿದ್ದಾರೆ. “ನಾವು ಈ ದೇಶದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಶ್ರಮಕ್ಕೆ ಪರ್ಯಾಯವಿಲ್ಲ. ನೀವು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದರೂ ಸಹ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com