ಮುಂಬೈ: ಶುಕ್ರವಾರ ಚಿನ್ನದ ದರ ಮತ್ತೆ ಏರಿಕೆಯಾಗಿದ್ದು, ಚಿನಿವಾರ ಪೇಟೆಯಲ್ಲಿ ಚಿನ್ನದ ದರ 760 ರೂ ಏರಿಕೆಯಾಗಿದೆ.
ಶುಕ್ರವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 760 ರೂಗಳ ವರೆಗೂ ಏರಿಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ. ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ 76 ರೂ ಏರಿಕೆಯಾಗಿದೆ.
ಅಂತೆಯೇ 22 ಕ್ಯಾರೆಟ್ ಚಿನ್ನದ ದರದಲ್ಲಿ 70ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ 57 ರೂ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ ಇಂತಿದ್ದು, 22 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 700ರೂ ಏರಿಕೆಯಾಗಿ, 71,600 ರೂಗೆ ಏರಿಕೆಯಾಗಿದೆ. ಅಂತೆಯೇ 18 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 570ರೂ ಏರಿಕೆಯಾಗಿ, 58,580 ರೂ ತಲುಪಿದೆ. ಅಂತೆಯೇ 24 ಕ್ಯಾರೆಟ್ ನ ಚಿನ್ನದ ದರದಲ್ಲಿ 760 ರೂ ಏರಿಕೆಯಾಗಿ 78,110 ರೂ ತಲುಪಿದೆ. ನಿನ್ನೆ ಈ ದರ 77,350ರೂ ಗಳಷ್ಟಿತ್ತು.
ಬೆಳ್ಳಿ ದರದಲ್ಲಿ ಬದಲಾವಣೆ
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 91,500 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 915, ರೂ. 9,150 ಹಾಗೂ ರೂ. 91,500 ಗಳಾಗಿವೆ. ಉಳಿದಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 1,00,000 ಆಗಿದ್ದರೆ, ದೆಹಲಿಯಲ್ಲಿ ರೂ. 91,500, ಮುಂಬೈನಲ್ಲಿ ರೂ. 91,500 ಹಾಗೂ ಕೊಲ್ಕತ್ತದಲ್ಲೂ ರೂ. 91,500 ಗಳಾಗಿದೆ.
Advertisement