
ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಕುಸಿತದ ಬೆನ್ನಲ್ಲೇ ಇತ್ತ ಮಹಿಳೆಯರ ಅಚ್ಚುಮೆಚ್ಚಿನ ಲೋಹ ಚಿನ್ನದ ದರ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇಂದು ಚಿನ್ನದ ದರದಲ್ಲಿ ದಾಖಲೆಯ 250 ರೂ ಏರಿಕೆಯಾಗಿದ್ದು, ಇದು ಬಂಗಾರದ ಬೆಲೆಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದೆ. ಇಂದು ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 250ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 78,700ರೂ ಗೆ ಏರಿಕೆಯಾಗಿದೆ.
ಬಂಗಾರದ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ 78 ಸಾವಿರದ 700ರ ಗಡಿದಾಟಿದೆ. ಇದು ಚಿನ್ನದ ದರದ ನೂತನ ಗರಿಷ್ಠ ಬೆಲೆಯಾಗಿದೆ.
ಚಿನ್ನಾಭರಣ ವ್ಯಾಪಾರಿಗಳಿಂದ ಸ್ಥಿರವಾದ ಖರೀದಿ ಬೆಂಬಲ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯಿಂದಾಗಿ ಸೋಮವಾರ ಚಿನ್ನದ ಬೆಲೆಯು 250 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ 78,700 ರೂ.ಗೆ ಏರಿಕೆಯಾಗಿದೆ. ಕಳೆದ ವಾರಾಂತ್ಯ ಅಂದರೆ ಶುಕ್ರವಾರ ಬಂಗಾರ ಪ್ರತೀ 10 ಗ್ರಾಂಗೆ 78,450 ರೂ ಗಳಷ್ಟಿತ್ತು. ಆದರೆ ಇಂದು 250ರೂ ಏರಿಕೆಯಾಗಿ ಪ್ರತೀ 10 ಗ್ರಾಂ ಚಿನ್ನದ ದರ 78,700ರೂ ಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆ ಇಳಿಕೆ
ಏತನ್ಮದ್ಯೆ ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದ್ದು, ಶುಕ್ರವಾರದಂದು ಪ್ರತಿ ಕೆಜಿಗೆ 94,200 ರೂ.ಗಳಷ್ಟಿದ್ದ ಬೆಳ್ಳಿ ಬೆಲೆ ಇಂದು 200 ರೂ.ನಷ್ಟು ಇಳಿಕೆಯಾಗಿದ್ದು, 94,000 ರೂ.ಗೆ ಇಳಿದಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ತಿಳಿಸಿದೆ.
Advertisement