
ಮುಂಬೈ: ಭಾರತ ಸೇರಿದಂತೆ ಅಮೆರಿಕದ ಹೆಚ್ಚಿನ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಪರಸ್ಪರ ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದರಿಂದ ಮಂಗಳವಾರ ಭಾರತದ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟು ಭಾರಿ ಪ್ರಮಾಣದಲ್ಲಿ ಒತ್ತಡಕ್ಕೆ ಸಿಲುಕಿತು.
ನಿಫ್ಟಿ ಸೂಚ್ಯಂಕ 178 ಪಾಯಿಂಟ್‌ಗಳು ಅಥವಾ ಶೇಕಡಾ 0.76 ರಷ್ಟು ಕುಸಿತದೊಂದಿಗೆ 23,341.10 ರಲ್ಲಿ ಆರಂಭವಾಯಿತು. ಆದರೆ BSE ಸೆನ್ಸೆಕ್ಸ್ 536.33 ಪಾಯಿಂಟ್ ಅಥವಾ 0.69 ರಷ್ಟು ಕುಸಿತದೊಂದಿಗೆ ವಹಿವಾಟು 76,878.59 ನಲ್ಲಿ ಪ್ರಾರಂಭವಾಯಿತು.
ನಾಳೆಯಿಂದ ಪರಸ್ಪರ ಸುಂಕ ವಿಧಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿರುವುದೇ ಇದಕ್ಕೆ ಪ್ರಮುಖಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಮಾರುಕಟ್ಟೆಗಳು ಆರಂಭದಲ್ಲಿ ಕೆಟ್ಟದಾಗಿ ಕಂಡರೂ ನಂತರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಎಂದಿದ್ದಾರೆ.
Advertisement