ಅಮೆರಿಕದ ಬೊಕ್ಕಸ ತುಂಬಿಸಲು ವಿದೇಶಿ ರಾಷ್ಟ್ರಗಳಿಗೆ ಟ್ರಂಪ್ ಸುಂಕದ ಬೆದರಿಕೆ! ಭಾರತ, ಚೀನಾ, ಬ್ರೆಜಿಲ್‌ ಪ್ರಮುಖ ಟಾರ್ಗೆಟ್!

ಅಮೆರಿಕ ಮತ್ತೆ ಶ್ರೀಮಂತ ರಾಷ್ಟ್ರವಾಗಲು ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ಮರು ಸ್ಥಾಪಿಸುತ್ತದೆ. ಇದು ಆದಷ್ಟು ಬೇಗ ನಡೆಯಲಿದೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷ್ಟಿಂಗನ್: ಅಮೆರಿಕಕ್ಕೆ ಹಾನಿಯನ್ನುಂಟು ಮಾಡುವ ಹೊರ ದೇಶಗಳ ಮೇಲೆ ಸುಂಕವನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚೀನಾ, ಭಾರತ ಮತ್ತು ಬ್ರೆಜಿಲ್‌ಗಳನ್ನು ಹೆಚ್ಚು ಸುಂಕದ ದೇಶಗಳೆಂದು ಅವರು ಹೆಸರಿಸಿದ್ದಾರೆ.

ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಸೋಮವಾರ ಫ್ಲೋರಿಡಾದ ರಿಟ್ರೀಟ್ ನಲ್ಲಿ ರಿಪಬ್ಲಿಕನ್ನರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಮಗೆ ನಿಜವಾಗಿಯೂ ಹಾನಿಕಾರವಾಗಿರುವ ಹೊರಗಿನ ದೇಶಗಳು ಮತ್ತು ಜನರ ಮೇಲೆ ಸುಂಕವನ್ನು ಹಾಕಲಿದ್ದೇವೆ.ಅವರು ಹಾನಿಯಾಗಿದ್ದರೂ ಮೂಲತಃ ತಮ್ಮ ದೇಶವನ್ನು ಉತ್ತಮಗೊಳಿಸಲು ಬಯಸುತ್ತಾರೆ ಎಂದರು.

'ಇತರ ರಾಷ್ಟ್ರಗಳುಏನು ಮಾಡುತ್ತಾರೆ ಎಂಬುದನ್ನು ನೋಡಿ. ಚೀನಾ ಮೊದಲ ಸುಂಕ ಹೆಚ್ಚಳದ ರಾಷ್ಟ್ರವಾಗಿದೆ. ನಂತರ ಭಾರತ, ಬ್ರೆಜಿಲ್ ಸೇರಿದಂತೆ ಇತರ ಹಲವು ದೇಶಗಳಿವೆ. ನಮಗೆ ಅಮೆರಿಕ ಮೊದಲ ಆದ್ಯತೆಯಾಗಿರುವುದರಿಂದ ಅಂತಹ ದೇಶಗಳ ಮೇಲೆ ಸುಂಕವನ್ನು ವಿಧಿಸಲಾಗುವುದು. ಇದರಿಂದ ನಮ್ಮ ಬೊಕ್ಕಸಕ್ಕೆ ಹಣ ಬರಲಿದೆ ಎಂದು ಹೇಳಿದರು.

ಅಮೆರಿಕ ಮತ್ತೆ ಶ್ರೀಮಂತ ರಾಷ್ಟ್ರವಾಗಲು ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ಮರು ಸ್ಥಾಪಿಸುತ್ತದೆ. ಇದು ಆದಷ್ಟು ಬೇಗ ನಡೆಯಲಿದೆ. ಅಮೆರಿಕ "ಹಿಂದೆಂದಿಗಿಂತಲೂ ಶ್ರೀಮಂತ ಮತ್ತು ಹೆಚ್ಚು ಶಕ್ತಿಶಾಲಿಯನ್ನಾಗಿ ಕಂಬ್ಯಾಕ್ ಆಗಲು ಇದು ಸೂಕ್ತ ಸಮಯವಾಗಿದೆ ಎಂದರು.

ಕಳೆದ ವಾರ ನಡೆದ ತಮ್ಮ ಉದ್ಘಾಟನಾ ಭಾಷಣವನ್ನು ಉಲ್ಲೇಖಿಸಿ ಮಾತನಾಡಿದ ಟ್ರಂಪ್, ವಿದೇಶಿ ರಾಷ್ಟ್ರಗಳನ್ನು ಶ್ರೀಮಂತಗೊಳಿಸಲು ನಮ್ಮ ನಾಗರಿಕರಿಗೆ ತೆರಿಗೆ ವಿಧಿಸುವ ಬದಲು, ನಾವು ನಮ್ಮ ನಾಗರಿಕರನ್ನು ಶ್ರೀಮಂತಗೊಳಿಸಲು ವಿದೇಶಿ ರಾಷ್ಟ್ರಗಳಿಗೆ ಸುಂಕ ವಿಧಿಸಬೇಕು ಮತ್ತು ತೆರಿಗೆ ವಿಧಿಸಬೇಕು ಎಂದರು.

ಅಮೆರಿಕದ ಮೊದಲ ಆರ್ಥಿಕ ಮಾದರಿಯಡಿ ಇತರ ದೇಶಗಳ ಮೇಲಿನ ಸುಂಕಗಳು ಹೆಚ್ಚಾಗುತ್ತಿದ್ದಂತೆ, ಅಮೆರಿಕದ ಕಾರ್ಮಿಕರು ಮತ್ತು ವ್ಯವಹಾರಗಳ ಮೇಲಿನ ತೆರಿಗೆಗಳು ಕಡಿಮೆಯಾಗುತ್ತವೆ ಮತ್ತು ಬೃಹತ್ ಸಂಖ್ಯೆಯ ಉದ್ಯೋಗಗಳು ಮತ್ತು ಕಾರ್ಖಾನೆಗಳು ಮನೆಗೆ ಬರುತ್ತವೆ" ಎಂದು ಅವರು ಹೇಳಿದರು.

Donald Trump
ಅಕ್ರಮ ವಲಸಿಗರ ವಾಪಸಾತಿ: ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಅಮೆರಿಕ ಕಠಿಣ ಸಂದೇಶ!

ಇದಕ್ಕೂ ಮುನ್ನಾ, ಟ್ರಂಪ್ ಈಗಾಗಲೇ ಭಾರತವನ್ನು ಒಳಗೊಂಡಿರುವ ಬ್ರಿಕ್ಸ್ ಗುಂಪಿನ ಮೇಲೆ ಶೇ. 100 ರಷ್ಟು ಸುಂಕ ಹೆಚ್ಚಳ ಮಾಡುವ ಬಗ್ಗೆ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com