
ಚೆನ್ನೈ: ಗಣೇಶ ಚತುರ್ಥಿ ಹಬ್ಬದ ಬೆನ್ನಲ್ಲೇ ಭಾರತದಾದ್ಯಂತ ಚಿನ್ನದ ಬೆಲೆ ಏರಿಕೆಯಾಗಿದ್ದು, ಹಬ್ಬದ ಬೇಡಿಕೆ ಮತ್ತು ಜಾಗತಿಕ ಸೂಚನೆಗಳು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.
ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಮತ್ತೆ ಗಗನದತ್ತ ಮುಖ ಮಾಡಿದ್ದು, ಗಣೇಶ ಹಬ್ಬದ ಬೆನ್ನಲ್ಲೇ ಚಿನ್ನದ ದರ ಇದೀಗ ಮತ್ತೆ ಗಗನಕ್ಕೇರಿದೆ.
ಗುರವಾರ ಚಿನ್ನದ ಬೆಲೆ 160 ರೂಗಳಷ್ಟು ಏರಿಕೆಯಾಗಿದೆ. ಇಂದು ಅಂದರೆ ಗುರುವಾರ 22 ಕ್ಯಾರಟ್ ಚಿನ್ನದ ದರದಲ್ಲಿ 150 ರೂ ಏರಿಕೆಯಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 16ರೂ ಏರಿಕೆಯಾಗಿದೆ.
22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 9,405ಕ್ಕೆ ಏರಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,050ಕ್ಕೆ ಏರಿಕೆಯಾಗಿದೆ.
ಅಂತೆಯೇ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 10,260 ರೂ ಗೆ ಏರಿಕೆಯಾಗಿದ್ದು, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,02,600 ರೂ ಗೆ ಏರಿಕೆಯಾಗಿದೆ.
ದೆಹಲಿ, ಜೈಪುರ, ಲಕ್ನೋ - ರೂ 1,02,590 (24 ಸಾವಿರ) / ರೂ 94,050 ರೂಗಳಿಗೆ ಚಿನ್ನದ ದರ ಏರಿಕೆಗಿದ್ದರೆ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ನಲ್ಲಿ - ರೂ 1,02,440 / ರೂ 93,900 ರೂಗೆ ಏರಿಕೆಯಾಗಿದೆ. ಅಂತೆಯೇ ಅಹಮದಾಬಾದ್ ನಲ್ಲಿ ರೂ 1,02,490 ರೂಗೆ ಏರಿಕೆಯಾಗಿದೆ.
ಸರಕು ವಿನಿಮಯ ಕೇಂದ್ರ (MCX) ರಜಾದಿನಗಳಿಗಾಗಿ ಮುಚ್ಚಲ್ಪಟ್ಟಿತ್ತು, ಆದಾಗ್ಯೂ ಹಿಂದಿನ ವಹಿವಾಟಿನಲ್ಲಿ (ಆಗಸ್ಟ್ 26) ಚಿನ್ನ ಈಗಾಗಲೇ ಬಲವಾದ ದರ ಏರಿಕೆ ಕಂಡಿತ್ತು, ಅಕ್ಟೋಬರ್ ನಲ್ಲಿ ಚಿನ್ನದ ದರ 10 ಗ್ರಾಂಗೆ ರೂ 1,00,950 ರ ಸಮೀಪದಲ್ಲಿವೆ.
Advertisement