
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಾವು-ಏಣಿ ಆಟ ನಡೆದಿದ್ದು, ನಿನ್ನೆ ಏರಿಕೆಯಲ್ಲಿ ಮುಕ್ತಾಯಗೊಂಡಿದ್ದ ಮಾರುಕಟ್ಟೆ ಇಂದು ಇಳಿಕೆಯಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಹೌದು... ಬುಧವಾರ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ, ಗ್ರಾಹಕ ಬಳಿಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯದ ಷೇರುಗಳ ಮೌಲ್ಯ ಕುಸಿತಕಂಡಿವೆ.
ಮಂಗಳವಾರ ಭಾರಿ ಏರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.40ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.18ರಷ್ಟು ಅಲ್ಪ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 312.53ಅಂಕಗಳ ಇಳಿಕೆಯೊಂದಿಗೆ 78,271.28 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 42.95 ಅಂಕಗಳ ಇಳಿಕೆಯೊಂದಿಗೆ 23,739.25 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹಿಂಡಾಲ್ಕೊ ಇಂಡಸ್ಟ್ರೀಸ್, ಒಎನ್‌ಜಿಸಿ, ಅಪೊಲೊ ಆಸ್ಪತ್ರೆಗಳು, ಬಿಪಿಸಿಎಲ್, ಅದಾನಿ ಪೋರ್ಟ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ, ನೆಸ್ಲೆ ಇಂಡಿಯಾ, HUL, ಬ್ರಿಟಾನಿಯಾ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ
Advertisement