Tesla: ಭಾರತದಲ್ಲಿ ನೇಮಕಾತಿ ಆರಂಭ; ಇವಿ ಕಾರು ಮಾರುಕಟ್ಟೆಗೆ ಎಂಟ್ರಿ!

ಲಿಂಕ್ಡ್‌ಇನ್ ಮತ್ತು ಟೆಸ್ಲಾದ ವೆಬ್‌ಸೈಟ್‌ನಲ್ಲಿನ ಉದ್ಯೋಗ ಜಾಹೀರಾತು ಪ್ರಕಾರ, ಕಂಪನಿಯು ಭಾರತದಲ್ಲಿ ಕನಿಷ್ಠ 13 ಬಗೆಯ ವಿವಿಧ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಬಹು ನಿರೀಕ್ಷಿತ ಅಮೆರಿಕದ ಎಲೆಕ್ಟ್ರಿಕ್ ವಾಹನ(ಇವಿ) ದೈತ್ಯ ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದ್ದು, ದೇಶದ ಕಾರು ಮಾರುಕಟ್ಟೆಗೆ ಪ್ರವೇಶಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಈ ನೇಮಕಾತಿ ಅಭಿಯಾನ ಆರಂಭವಾಗಿದೆ.

ಲಿಂಕ್ಡ್‌ಇನ್ ಮತ್ತು ಟೆಸ್ಲಾದ ವೆಬ್‌ಸೈಟ್‌ನಲ್ಲಿನ ಉದ್ಯೋಗ ಜಾಹೀರಾತು ಪ್ರಕಾರ, ಕಂಪನಿಯು ಭಾರತದಲ್ಲಿ ಕನಿಷ್ಠ 13 ಬಗೆಯ ವಿವಿಧ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ.

ಮುಂಬೈ ಮತ್ತು ದೆಹಲಿಯನ್ನು ಕೇಂದ್ರಿಕರಿಸಿ, ಸೇವಾ ತಂತ್ರಜ್ಞರು, ಸೇವಾ ಸಲಹೆಗಾರರು, ಗ್ರಾಹಕ ನಿಶ್ಚಿತಾರ್ಥ ವ್ಯವಸ್ಥಾಪಕರು, ವ್ಯವಹಾರ ಕಾರ್ಯಾಚರಣೆ ವಿಶ್ಲೇಷಕರು, ವಿತರಣಾ ಕಾರ್ಯಾಚರಣೆ ತಜ್ಞರು ಮತ್ತು ಶೋ ರೂಮ್ ವ್ಯವಸ್ಥಾಪಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಹಿಂದಿನ ಅಡೆತಡೆಗಳ ಹೊರತಾಗಿಯೂ, ಭಾರತದಲ್ಲಿ ನೆಲೆ ಸ್ಥಾಪಿಸುವಲ್ಲಿ ಟೆಸ್ಲಾ ಆಸಕ್ತಿ ಹೊಂದಿದೆ ಎಂದು ಈ ನೇಮಕಾತಿ ಸೂಚಿಸುತ್ತದೆ.

ಸಾಂದರ್ಭಿಕ ಚಿತ್ರ
ಮೋದಿ ಭೇಟಿ ವೇಳೆ ತಂದೆ ಜೊತೆಯಿದ್ದ Musk ಮಕ್ಕಳು- ಇದರ ಹಿಂದಿನ ಕಾರ್ಯತಂತ್ರವೇನು ಗೊತ್ತೇ?

ಟೆಸ್ಲಾ ವರ್ಷಗಳಿಂದ ಭಾರತದಲ್ಲಿ ಅವಕಾಶಗಳನ್ನು ಅನ್ವೇಷಿಸುತ್ತಿದೆ. ಆದರೆ ಹೆಚ್ಚಿನ ಆಮದು ಸುಂಕಗಳಿಂದಾಗಿ ಭಾರತದ ಇವಿ ಮಾರುಕಟ್ಟೆ ಪ್ರವೇಶಿಸಲು ಹಿಂದೇಟು ಹಾಕುತ್ತಿತ್ತು. ಆದರೆ ಜಾಗತಿಕ ಇವಿ ತಯಾರಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ಮಾರ್ಚ್ 2024 ರಲ್ಲಿ ಹೊಸ ನೀತಿಯನ್ನು ಪರಿಚಯಿಸಿತು ಮತ್ತು ಸುಂಕವನ್ನು ಕಡಿತಗೊಳಿಸಿರುವುದರಿಂದ ಟೆಸ್ಲಾ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com