
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಬುಧವಾರ ಅಲ್ಪ ಪ್ರಮಾಣದ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಐಟಿ, ಇಂಧನ, ಗ್ಯಾಸ್ ವಿಭಾಗದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕೂಡ ಅಲ್ಪ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.065ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಶೇ.0.080ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 50.62 ಅಂಕಗಳ ಇಳಿಕೆಯೊಂದಿಗೆ 78,148.49 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 18.95 ಅಂಕಗಳ ಇಳಿಕೆಯೊಂದಿಗೆ 23,688.95 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಅನಿಲ, ಇಂಧನ, ಎಫ್ಎಂಸಿಜಿ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಅಪೋಲೋ ಹಾಸ್ಪಿಟಲ್ಸ್, ಟ್ರೆಂಟ್, ಬಜಾಜ್ ಆಟೋ, ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿದೆ.
ಅಂತೆಯೇ ONGC, ITC, ರಿಲಯನ್ಸ್ ಇಂಡಸ್ಟ್ರೀಸ್, TCS, ಏಷ್ಯನ್ ಪೇಂಟ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.
Advertisement