
ಹೈದರಾಬಾದ್: ಇನ್ಫೋಸಿಸ್ ಲಿಮಿಟೆಡ್ ಹೈದರಾಬಾದ್‌ನ ಪೋಚಾರಂನಲ್ಲಿರುವ ತನ್ನ ಐಟಿ ಕ್ಯಾಂಪಸ್ ಅನ್ನು ಗಮನಾರ್ಹವಾಗಿ ವಿಸ್ತರಿಸುವ ಯೋಜನೆ ಪ್ರಕಟಿಸಿದ್ದು, ಇದು 17,000 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಂದರ್ಭದಲ್ಲಿ ಇನ್ಫೋಸಿಸ್ ಸಿಎಫ್‌ಒ ಜಯೇಶ್ ಸಂಘರಾಜ್ಕ ಮತ್ತು ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಡಿ ಶ್ರೀಧರ್ ಬಾಬು ಸಭೆ ನಡೆಸಿದ ನಂತರ ಈ ಘೋಷಣೆ ಮಾಡಲಾಯಿತು.
35,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್‌ನ ಅತಿದೊಡ್ಡ ಐಟಿ ಕ್ಯಾಂಪಸ್ ಗಳಲ್ಲಿ ಒಂದಾದ ಪೋಚಾರಂ ಕ್ಯಾಂಪಸ್ ನ್ನು 750 ಕೋಟಿ ರೂ. ಆರಂಭಿಕ ಹೂಡಿಕೆಯೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಈ ವಿಸ್ತರಿತ ಯೋಜನೆಯು ಮೊದಲ ಹಂತದಲ್ಲಿ 10,000 ಜನರಿಗೆ ಉದ್ಯೋಗ ಕಲ್ಪಿಸಲಿದೆ ಎಂದು ಇನ್ಫೋಸಿಸ್ ಸಿಎಫ್‌ಒ ಜಯೇಶ್ ಹೇಳಿದ್ದಾರೆ.
Advertisement