
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ಬಾಂದ್ರಾದಲ್ಲಿರುವ (ಪಶ್ಚಿಮ) ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್ ನ್ನು ಮಾರಾಟ ಮಾಡಿದ್ದಾರೆ. 1,318 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ನ್ನು ರೂ. 5.35 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಲಹಾ ಕಂಪನಿ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
ಸಲ್ಮಾನ್ ಖಾನ್ ಅವರ ಮಾರಾಟ ಒಪ್ಪಂದದ ಆಸ್ತಿ ನೋಂದಣಿ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಕಂಪನಿ ಬುಧವಾರ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಶಿವ ಆಸ್ಥಾನ ಹೈಟ್ಸ್‌ನಲ್ಲಿರುವ ಐಷಾರಾಮಿ ಅಪಾರ್ಟ್ ಮೆಂಟ್ ನ್ನು ಸಲ್ಮಾನ್ ಖಾನ್ ಮಾರಾಟ ಮಾಡಿದ್ದಾರೆ.
ಈ ಅಪಾರ್ಟ್ ಮೆಂಟ್ 122.45 ಚದರ ಮೀಟರ್ (ಸುಮಾರು 1,318 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದೆ.
ಇದೇ ತಿಂಗಳಲ್ಲಿ ವಹಿವಾಟನ್ನು ನೋಂದಾಯಿಸಲಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಉದ್ಯಮಿಗಳಿಂದ ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ (ಖರೀದಿ-ಮಾರಾಟ) ವಾಣಿಜ್ಯ ನಗರಿ ಮುಂಬೈ ಸಾಕ್ಷಿಯಾಗಿದೆ.
Advertisement