
ಮುಂಬೈ: ಭಾರತೀಯ ಷೇರುಮಾರುಕಟ್ಟೆ ವಾರದ ಕೊನೆಯ ದಿನ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಗಣನೀಯ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.88ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.90ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 721.08 ಅಂಕಗಳ ಕುಸಿತದೊಂದಿಗೆ 81,463.09 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 225.10 ಅಂಕಗಳ ಇಳಿಕೆಯೊಂದಿಗೆ 24,837.00 ಅಂಕಗಳಿಗೆ ಕುಸಿತವಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಪವರ್ ಗ್ರಿಡ್ ಷೇರುಗಳ ಮೌಲ್ಯ ಗಣನೀಯ ಕುಸಿತಕಂಡಿದ್ದು, ಇದಲ್ಲದೆ ತಂತ್ರಜ್ಞಾನ ವಲಯದ ಷೇರುಗಳ ಸೇರಿದಂತೆ ಬಹುತೇಕ ಎಲ್ಲ ವಲಯಗಳ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ. ಬಜಾಜ್ ಫೈನಾನ್ಸ್ ಷೇರು ಮೌಲ್ಯದಲ್ಲಿ ಬರೊಬ್ಬರಿ ಶೇ.4.73 ರಷ್ಚು ಕುಸಿತವಾಗಿದ್ದು ದಿನದ ಅತಿ ದೊಡ್ಡ ನಷ್ಟ ದಾಖಲಾಗಿದೆ.
ಜೂನ್ ತ್ರೈಮಾಸಿಕ ಗಳಿಕೆ ಘೋಷಣೆಯ ನಂತರ ಬಜಾಜ್ ಫೈನಾನ್ಸ್ ಶೇ. 4.73 ರಷ್ಟು ಕುಸಿದಿದೆ. ಪವರ್ ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಟ್ರೆಂಟ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ ಸಹ ಹಿಂದುಳಿದಿವೆ. ಆದಾಗ್ಯೂ, ಸನ್ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಪವರ್ ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಟ್ರೆಂಟ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿದೆ. ಅಂತೆಯೇ ಸನ್ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.
ವಿದೇಶಿ ನಿಧಿಯ ನಿರಂತರ ಹೊರಹರಿವಿನ ನಡುವೆ ಹಣಕಾಸು, ಐಟಿ ಮತ್ತು ತೈಲ ಮತ್ತು ಅನಿಲ ಷೇರುಗಳಲ್ಲಿ ಭಾರೀ ಮಾರಾಟ ಕಂಡ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆ ಕುಸಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement