
ಬೆಂಗಳೂರು: ದಿನ ಕಳೆದಂತೆ ಚಿನ್ನದ ಹೊಳಪು ಹೆಚ್ಚಾಗುತ್ತಲೇ ಇತ್ತು. ಅಂದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿತ್ತು. ಹೌದು... ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಕಳೆದ ಕೆಲ ವಾರಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಬದಲಾವಣೆ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 79,563 ರೂ.ನಲ್ಲಿ ಮುಂದುವರಿದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 86,783 ರೂನಲ್ಲಿದೆ. ವಿದೇಶಗಳಲ್ಲಿ ಕೆಲವೆಡೆ ಮಾತ್ರ ಚಿನ್ನದ ಬೆಲೆ ಇಳಿಕೆ ಆಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಭಾರತದಲ್ಲಿ ಸದ್ಯ 100 ಗ್ರಾಂ ಬೆಳ್ಳಿ ಬೆಲೆ 9,700 ರುಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 86,625 ರೂಪಾಯಿ ಆಗಿದೆ. ನಿನ್ನೆಯ ಚಿನ್ನದ ಬೆಲೆ 10 ಗ್ರಾಂಗೆ 86,845 ಇತ್ತು. ಅಲ್ಲದೆ ಕಳೆದ ವಾರದ ಚಿನ್ನದ ಬೆಲೆ 10 ಗ್ರಾಂಗೆ 87,895 ಆಗಿತ್ತು. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 79,405.00 ಇದೆ.
ಬೆಳ್ಳಿ ಇಂದಿನ ದರ
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಕೆಜಿಗೆ 97,000 ರೂಪಾಯಿ ಇದ್ದು ಕಳೆದ ವಾರದ ಬೆಳ್ಳಿ ಬೆಲೆ ಕೆಜಿಗೆ 1,03,200 ಇತ್ತು.
Advertisement