ಇನ್ಫೋಸಿಸ್ ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ Carlos Alcaraz ನೇಮಕ

ಕಾರ್ಲೋಸ್ ಅಲ್ಕರಾಜ್ ಅವರು ಅನೇಕ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿರುವ ಖ್ಯಾತ ಟೆನಿಸ್ ಆಟಗಾರರಾಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಕರಿಯರ್ ಗ್ರ್ಯಾಂಡ್ ಸ್ಲಾಂ ಸಾಧಿಸಿದವರಲ್ಲಿ ಒಬ್ಬರಾಗಿದ್ದಾರೆ.
Carlos Alcaraz
ಕಾರ್ಲೋಸ್ ಅಲ್ಕರಾಜ್
Updated on

ಇನ್ಫೋಸಿಸ್ ಸಂಸ್ಥೆ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರೊಂದಿಗೆ ಬಹುವರ್ಷಗಳ ಸಹಭಾಗಿತ್ವಕ್ಕೆ ಕೈಜೋಡಿಸಿದ್ದು, ಅವರನ್ನು ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿದೆ.

ಕಾರ್ಲೋಸ್ ಅಲ್ಕರಾಜ್ ಅವರು ಅನೇಕ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿರುವ ಖ್ಯಾತ ಟೆನಿಸ್ ಆಟಗಾರರಾಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಕರಿಯರ್ ಗ್ರ್ಯಾಂಡ್ ಸ್ಲಾಂ ಸಾಧಿಸಿದವರಲ್ಲಿ ಒಬ್ಬರಾಗಿದ್ದಾರೆ. ಅವರ ಪ್ರದರ್ಶನ, ಸ್ಥಿರತೆ ಮತ್ತು ಸ್ಪರ್ಧಾತ್ಮಕ ಮನೋಭಾವಕ್ಕೆ ಅವರು ಪ್ರಸಿದ್ಧರಾಗಿದ್ದಾರೆ.

ಈ ಸಹಭಾಗಿತ್ವದ ಭಾಗವಾಗಿ, ಇನ್ಫೋಸಿಸ್ ಸಂಸ್ಥೆ ಅಲ್ಕರಾಜ್ ಹಾಗೂ ಅವರ ಕೋಚಿಂಗ್ ತಂಡದೊಂದಿಗೆ ಕೆಲಸ ಮಾಡಿ, ಪಂದ್ಯ ವಿಶ್ಲೇಷಣೆ ಮತ್ತು ಪ್ರದರ್ಶನ ಟ್ರ್ಯಾಕಿಂಗ್‌ಗಾಗಿ ಎಐ ಆಧಾರಿತ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಈ ಉಪಕರಣಗಳು ಸಂಸ್ಥೆಯ Infosys Topaz ವೇದಿಕೆಯನ್ನು ಬಳಸಲಿದ್ದು, ಜನರೇಟಿವ್ ಮತ್ತು ಏಜೆಂಟ್ ಆಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತವೆ. ಇದರ ಉದ್ದೇಶ ಪಂದ್ಯ ಸಿದ್ಧತೆ ಮತ್ತು ತಂತ್ರಾತ್ಮಕ ನಿರ್ಧಾರಗಳನ್ನು ಉತ್ತಮಗೊಳಿಸುವುದಾಗಿದೆ.

ಇದರ ಜೊತೆಗೆ, ಇನ್ಫೋಸಿಸ್ ಮತ್ತು ಕಾರ್ಲೋಸ್ ಅಲ್ಕರಾಜ್ ಫೌಂಡೇಶನ್ ನಡುವಿನ ಸಹಯೋಗದ ಮೂಲಕ ತಂತ್ರಜ್ಞಾನ ಸಂಬಂಧಿತ ಸಾಮಾಜಿಕ ಪರಿಣಾಮ ಯೋಜನೆಗಳನ್ನೂ ಕೈಗೊಳ್ಳಲಾಗುತ್ತದೆ.

ಟೆನಿಸ್ ಕ್ಷೇತ್ರದಲ್ಲಿ ಡೇಟಾ ಅನಾಲಿಟಿಕ್ಸ್ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಇನ್ಫೋಸಿಸ್ ಸಂಸ್ಥೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಹೊಸ ಸಹಭಾಗಿತ್ವವು ಎಐ ಉಪಕರಣಗಳನ್ನು ಕ್ರೀಡೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ದಿಕ್ಕಿನಲ್ಲಿ ಮುಂದುವರಿದ ಹೆಜ್ಜೆಯಾಗಿದೆ.

Carlos Alcaraz
ಇನ್ಫೋಸಿಸ್ ನಿಂದ ಪುರವಂಕರಕ್ಕೆ ಭೂಮಿ ಮಾರಾಟ: ಬೆಂಗಳೂರು ಡಿಸಿಯಿಂದ ತನಿಖೆ; ಐವರು ಸಬ್-ರಿಜಿಸ್ಟ್ರಾರ್ ಅಮಾನತು

ಇನ್ಫೋಸಿಸ್ ಜೊತೆ ಕೈಜೋಡಿಸಿರುವುದು ನನಗೆ ಗೌರವದ ಸಂಗತಿ. ನನ್ನ ಆಟವನ್ನು ಇನ್ನಷ್ಟು ಸುಧಾರಿಸಲು ನಾನು ಸದಾ ಹೊಸ ಮಾರ್ಗಗಳನ್ನು ಹುಡುಕುತ್ತೇನೆ. ಈ ಸಹಭಾಗಿತ್ವದಿಂದ ಡೇಟಾ ಮತ್ತು AI ಬಳಸಿ ನನ್ನ ಪ್ರದರ್ಶನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಕೋರ್ಟ್ ಹೊರತಾಗಿ, ನನ್ನ ಫೌಂಡೇಶನ್ ಮೂಲಕ ಜಾಗತಿಕ ಸಮುದಾಯಗಳಿಗೆ ತಂತ್ರಜ್ಞಾನದ ಮೂಲಕ ಸಹಾಯ ಮಾಡುವುದಕ್ಕೂ ಉತ್ಸುಕನಾಗಿದ್ದೇನೆ ಎಂದು ಕಾರ್ಲೋಸ್ ಅಲ್ಕರಾಜ್ ಹೇಳಿದ್ದಾರೆ.

ಇನ್ಫೋಸಿಸ್‌ನ ಗ್ಲೋಬಲ್ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಸುಮಿತ್ ವಿರ್ಮಾನಿ, ಕಾರ್ಲೋಸ್ ಅಲ್ಕರಾಜ್ ಅವರನ್ನು ನಮ್ಮ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಸ್ವಾಗತಿಸುವುದು ಸಂತೋಷಕರ. ಅವರು ಹೊಸ ತಲೆಮಾರಿನ ಧೈರ್ಯ, ಚುರುಕುತನ ಮತ್ತು ಸಾಧನೆಗೆ ಒಲವು ಹೊಂದಿದ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಾರೆ. ನಾವು ತಂತ್ರಜ್ಞಾನ ಮೂಲಕ ಮಾನವ ಸಾಮರ್ಥ್ಯವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಅವರೊಂದಿಗೆ ಸೇರಿ ಟೆನಿಸ್‌ನಲ್ಲಿ ಹೊಸ ಮಟ್ಟದ ಪ್ರದರ್ಶನವನ್ನು ರೂಪಿಸಲು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com