Netflix-Flipkart ಬಂಪರ್ ಕೊಡುಗೆ; ಇವ್ರಿಗೆಲ್ಲ ಉಚಿತ ಸಬ್‌ಸ್ಕ್ರಿಪ್ಷನ್!

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಹಾಗೂ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಕೈಜೋಡಿಸಿದ್ದು, ಭಾರತೀಯ ಗ್ರಾಹಕರಿಗೆ ಮನರಂಜನೆಯ ಕೊಡುಗೆ ನೀಡಲು ಮುಂದಾಗಿವೆ. ಈ ಪಾಲುದಾರಿಕೆಯ ಭಾಗವಾಗಿ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನ ಉಚಿತವಾಗಿ ನೀಡುತ್ತಿದೆ.
Netflix-Flipkart
ನೆಟ್‌ಫ್ಲಿಕ್ಸ್-ಫ್ಲಿಪ್‌ಕಾರ್ಟ್Online Desk
Updated on

ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಹಾಗೂ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಇಬ್ಬರು ಒಂದಾಗಿ ತಮ್ಮ ಗ್ರಾಹಕರಿಗೆ ಮನರಂಜನೆಯ ರಸದೌತಣ ನೀಡಲು ಮುಂದಾಗಿದೆ. ಅದರಂತೆ, ಈ ಎರಡು ಕಂಪನಿಗಳು ಇತ್ತೀಚೆಗೆ ಭಾರತದಲ್ಲಿ ಹೊಸ ಪಾಲುದಾರಿಕೆಯನ್ನು ಘೋಷಿಸಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್ ಗ್ರಾಹಕರು ಪ್ರತಿ ತಿಂಗಳು ಉಚಿತವಾಗಿ 30 ದಿನಗಳ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ:

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪಡೆಯೋದು ಹೇಗೆ?

ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಲು ನೀವು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಾಗಿರಬೇಕು. (ಕಳೆದ 365 ದಿನಗಳಲ್ಲಿ ಫ್ಲಿಪ್‌ಕಾರ್ಟ್ ನಲ್ಲಿ 15 ಯಶಸ್ವಿ ಆರ್ಡರ್‌ಗಳನ್ನು ಮಾಡುವ ಮೂಲಕ ಉಚಿತವಾಗಿ ಪ್ಲಸ್ ಮೆಂಬರ್ ಆಗಬಹುದು). ಇವರು ಒಂದು ಕ್ಯಾಲೆಂಡರ್ ತಿಂಗಳಿನಲ್ಲಿ ಕನಿಷ್ಠ 4 ಯಶಸ್ವಿ ಆರ್ಡರ್‌ಗಳನ್ನು ಮಾಡಬೇಕು. ಇನ್ನು ಪ್ರತಿ ಆರ್ಡರ್‌ನ ಕನಿಷ್ಠ ಮೌಲ್ಯ ₹299 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಹೀಗೆ, ಫ್ಲಿಪ್‌ಕಾರ್ಟ್, ಫ್ಲಿಪ್‌ಕಾರ್ಟ್ ಗ್ರೋಸರಿ ಅಥವಾ ಫ್ಲಿಪ್‌ಕಾರ್ಟ್ ಮಿನಿಟ್ಸ್ ಮೂಲಕ ಆರ್ಡರ್‌ ಮಾಡಬಹುದು.

ಆಫರ್ ಕ್ಲೈಮ್ ಮಾಡುವುದು ಹೇಗೆ?

  • ನಿಮ್ಮ 4 ಆರ್ಡರ್‌ಗಳ ರಿಟರ್ನ್ ಅವಧಿ ಮುಗಿದ ನಂತರ, ಫ್ಲಿಪ್‌ಕಾರ್ಟ್ ಆ್ಯಪ್ ತೆರೆಯಿರಿ.

  • My Account > Plus Page > Netflix Benefit ವಿಭಾಗಕ್ಕೆ ಹೋಗಿ.

  • ಅಲ್ಲಿ ಕಾಣಿಸುವ 'Claim Now' ಬಟನ್ ಮೇಲೆ ಕ್ಲಿಕ್ ಮಾಡಿ.

  • ಇದು ನಿಮ್ಮನ್ನು ನೆಟ್‌ಫ್ಲಿಕ್ಸ್ ಪುಟಕ್ಕೆ ಮರುನಿರ್ದೇಶಿಸುತ್ತದೆ.

  • ಅಲ್ಲಿ ನಿಮ್ಮ ಇಮೇಲ್ ಅಥವಾ ಫೋನ್ ನಂಬರ್ ನೀಡಿ ಲಾಗಿನ್/ಸೈನ್ ಅಪ್ ಮಾಡುವ ಮೂಲಕ 30 ದಿನಗಳ ಉಚಿತ ಮೊಬೈಲ್ ಪ್ಲಾನ್ ಸಕ್ರಿಯಗೊಳಿಸಬಹುದು.

Netflix-Flipkart
ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದು ಹೇಗೆ ಗೊತ್ತಾ?

ಏನಿದು ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್?

ನೆಟ್‌ಫ್ಲಿಕ್ಸ್‌ನ ಮೊಬೈಲ್ ಪ್ಲಾನ್ ₹149 ಮೌಲ್ಯದ್ದಾಗಿದ್ದು, ಒಂದು ಬಾರಿಗೆ ಒಂದೇ ಸ್ಮಾರ್ಟ್‌ಫೋನ್‌ನಲ್ಲಿ 480p ರೆಸಲ್ಯೂಶನ್‌ನಲ್ಲಿ ಮಾತ್ರ ವೀಕ್ಷಿಸಬಹುದು. ಅದರಂತೆ, ನೀವು ಪ್ರತಿ ತಿಂಗಳು 4 ಅರ್ಹ ಆರ್ಡರ್‌ಗಳನ್ನು ಮಾಡುತ್ತಾ ಹೋದರೆ, ಈ ನೆಟ್‌ಫ್ಲಿಕ್ಸ್ ಆಫರ್ ಪ್ರತಿ ತಿಂಗಳು ಉಚಿತವಾಗಿ ನವೀಕರಣಗೊಳ್ಳುತ್ತಾ ಹೋಗುತ್ತದೆ. ಒಂದು ವೇಳೆ ಆರ್ಡರ್ ಮಾಡಿದ ನಂತರ ಅದನ್ನು ಕ್ಯಾನ್ಸಲ್ ಅಥವಾ ರಿಟರ್ನ್ ಮಾಡಿದರೆ ಆ ಆರ್ಡರ್ ಅನ್ನು ಪರಿಗಣಿಸಲಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com