ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದೇಗೆ ಗೊತ್ತಾ?

ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.
Netflix
ಇವರಿಗೆಲ್ಲ Netflix Free ಫ್ರೀ!Online Desk
Updated on

Netflix Free Subscription: ನೆಟ್‌ಫ್ಲಿಕ್ಸ್ (Netflix) ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ (Free Subscription) ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.

ಹೌದು, ನೆಟ್‌ಫ್ಲಿಕ್ಸ್ ಸುಮಾರು 6 ವರ್ಷಗಳ ನಂತರ ತನ್ನ ಉಚಿತ ಪ್ರಯೋಗ ಯೋಜನೆಯನ್ನು ಪ್ರಾಯೋಗಿಕವಾಗಿ ಮರಳಿ ತರುತ್ತಿದೆ, ಆದರೆ ಇದು ಎಲ್ಲರಿಗೂ ಲಭ್ಯವಿಲ್ಲ.! ಹಾಗಾದ್ರೆ, ಯಾರೆಲ್ಲಾ ಫ್ರೀ ಸಬ್ಸ್ಕ್ರಿಪ್ಷನ್ ಪಡೆಯಬಹುದು ಗೊತ್ತಾ?

ಏತನ್ಮಧ್ಯೆ, ನೆಟ್‌ಫ್ಲಿಕ್ಸ್ ಹಲವಾರು ವರ್ಷಗಳ ಕಾಲ ವಿಶ್ವಾದ್ಯಂತ ತನ್ನ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡುತ್ತಿತ್ತು. ಆದರೆ, 2020 ರ ಕೋವಿಡ್ ವೇಳೆಯಲ್ಲಿ ಇದನ್ನ ಸ್ಟಾಪ್ ಮಾಡಿತ್ತು. ಆದರೆ, ಇದೀಗ ತನ್ನ ಉಚಿತ ಯೋಜನೆಗಳನ್ನು ಮರಳಿ ತರುವುದರಿಂದ ಹೆಚ್ಚಿನ ಜನರು ಸ್ಟ್ರೀಮಿಂಗ್ ಸೇವೆಗೆ ಚಂದಾದಾರರಾಗಲು ಪ್ರೋತ್ಸಾಹಿಸಬಹುದೇ ಎಂದು ಕಂಪನಿ ಈ ಮೂಲಕ ತಿಳಿಯಲು ಮುಂದಾಗಿದೆ.

Netflix
ಕನ್ನಡ ಚಿತ್ರರಂಗದ ಉಳಿವಿಗಾಗಿ ‘ಸರ್ಕಾರಿ OTT ಆರಂಭಿಸಿ’: CM ಶಿವಕುಮಾರ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ

ಇವರಿಗೆ ಮಾತ್ರ ಫ್ರೀ ಫ್ರೀ ಫ್ರೀ!

ಭಾರತ, ಬ್ರೆಜಿಲ್ ಸೇರಿದಂತೆ ಕೆಲವು ಆಯ್ದ ದೇಶಗಳ ಹೊಸ ಬಳಕೆದಾರರಿಗೆ ಅಂದ್ರೆ, ಈ ಹಿಂದೆ ಎಂದಿಗೂ ನೆಟ್‌ಫ್ಲಿಕ್ಸ್ ಖಾತೆ ಹೊಂದಿರದ ಹೊಸ ಗ್ರಾಹಕರಿಗೆ ಮಾತ್ರವೇ ನೆಟ್‌ಫ್ಲಿಕ್ಸ್ ತನ್ನ ಫ್ರೀ ಸಬ್ಸ್ಕ್ರಿಪ್ಷನ್ ನೀಡುತ್ತಿದೆ. ಏತನ್ಮಧ್ಯೆ, ನೆಟ್‌ಫ್ಲಿಕ್ಸ್ ತನ್ನ ಎಲ್ಲಾ ಅರ್ಹ ಹೊಸ ಬಳಕೆದಾರರಿಗೂ ಒಂದೇ ರೀತಿಯ ಆಫರ್ ನೀಡುತ್ತಿಲ್ಲ. ಬದಲಿಗೆ, ಕಂಪನಿಯು ಕೆಲವು ಗ್ರಾಹಕರಿಗೆ 30 ದಿನಗಳ ಉಚಿತ ಸೌಲಭ್ಯ ಹಾಗೂ ಇನ್ನೂ ಕೆಲವರಿಗೆ 14 ಅಥವಾ 15 ದಿನಗಳ ಉಚಿತ ಅವಧಿ ಮಾತ್ರ ನೀಡುತ್ತಿದೆ.

ಆಫರ್ ಪರಿಶೀಲಿಸುವುದು ಹೇಗೆ?

ನೆಟ್‌ಫ್ಲಿಕ್ಸ್ ವೆಬ್‌ಸೈಟ್ ಅಥವಾ ಆಪ್‌ಗೆ ಭೇಟಿ ನೀಡಿ ಹೊಸ ಇಮೇಲ್ ಬಳಸಿ ಸೈನ್-ಅಪ್ ಮಾಡಿ. ಈ ನೋಂದಣಿ ಪ್ರಕ್ರಿಯೆಯ ವೇಳೆ ನಿಮಗೆ "Try 30 days for ₹0" ಅಥವಾ ಇಂತಹುದೇ ಉಚಿತ ಪ್ರಯೋಗದ ಬ್ಯಾನರ್ ಕಾಣಿಸಿದರೆ, ನೀವು ಅರ್ಹರಾಗಿದ್ದೀರಿ ಎಂದರ್ಥ. ಯಾವುದೇ ಬ್ಯಾನರ್ ಕಾಣಿಸದಿದ್ದರೆ, ನಿಮ್ಮ ಸಾಧನ ಅಥವಾ ಖಾತೆಗೆ ಸದ್ಯಕ್ಕೆ ಈ ಆಫರ್ ಲಭ್ಯವಿಲ್ಲ ಎಂದು ತಿಳಿಯಬೇಕು.

Netflix
ಅಪಘಾತದ ನಂತರ ಪಟಾಕಿ ಪಾರ್ವತಿ ಭರ್ಜರಿ ಕಮ್ ಬ್ಯಾಕ್; ನಾಗಬಂಧಂ ಯಶಸ್ಸಿನಲ್ಲಿ ನಭಾ ನಟೇಶ್

ಎಚ್ಚರಿಕೆ:

ಉಚಿತ ಪ್ರಯೋಗಕ್ಕೆ ಸೈನ್-ಅಪ್ ಮಾಡುವಾಗ ಆಟೋ-ಪೇ ಸಕ್ರಿಯಗೊಳ್ಳುತ್ತದೆ. ಅದರಂತೆ, ನಿಮ್ಮ ಉಚಿತ ಅವಧಿ ಮುಗಿಯುವ ಮುನ್ನ ನೀವು ಯೋಜನೆಯನ್ನು ಕ್ಯಾನ್ಸಲ್ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಹಣ ಕಟ್ ಆಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com