ನಕಲಿ ಚೀಸ್‌, ಪನೀರ್‌ ಮಾರಾಟಕ್ಕೆ ಜೊಮ್ಯಾಟೊ ಬ್ರೇಕ್; ರೆಸ್ಟೋರೆಂಟ್‌ಗಳಿಗೆ ಖಡಕ್‌ ಎಚ್ಚರಿಕೆ

ಇದರ ಅನ್ವಯ ಅನಲಾಗ್‌ ಚೀಸ್‌, ಅನಲಾಗ್‌ ಪನೀರ್‌ ಹಾಗೂ ಇತರ ಅನಲಾಗ್‌ ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತನ್ನ ವೇದಿಕೆಯಲ್ಲಿ ಪಟ್ಟಿ ಮಾಡುವುದಕ್ಕೆ ಜೊಮ್ಯಾಟೊ ನಿರ್ಬಂಧ ಹೇರಿದೆ.
Zomato bans analogue dishes on its platform
ನಕಲಿ ಪನೀರ್, ಚೀಸ್ ಯುಕ್ತ ಆಹಾರಗಳಿಗೆ ಬ್ರೇಕ್ ಹಾಕಿದ ಜೊಮ್ಯಾಟೋ
Updated on

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ‘ಅನಲಾಗ್‌ ಡೈರಿ’ ಉತ್ಪನ್ನಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಮಾರಾಟಕ್ಕೆ ಝೀರೋ ಟಾಲರೆನ್ಸ್‌ ನೀತಿ ಜಾರಿಗೆ ತಂದಿದೆ ಎಂದು ಮೂಲಗಳು ತಿಳಿಸಿವೆ.

ಇದರ ಅನ್ವಯ ಅನಲಾಗ್‌ ಚೀಸ್‌, ಅನಲಾಗ್‌ ಪನೀರ್‌ ಹಾಗೂ ಇತರ ಅನಲಾಗ್‌ ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತನ್ನ ವೇದಿಕೆಯಲ್ಲಿ ಪಟ್ಟಿ ಮಾಡುವುದಕ್ಕೆ ಜೊಮ್ಯಾಟೊ ನಿರ್ಬಂಧ ಹೇರಿದೆ.

ನಿಯಮ ಪಾಲಿಸದ ರೆಸ್ಟೋರೆಂಟ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವ ಅಧಿಕಾರವನ್ನು ಕಂಪನಿ ಕಾಯ್ದಿರಿಸಿದೆ.

Zomato bans analogue dishes on its platform
'ಪನೀರ್' ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ: ರಾಜ್ಯದಲ್ಲಿ ಒಂದು ವರ್ಷ ನಿಷೇಧ..!

‘ಅನಲಾಗ್‌ ಡೈರಿ’ ಎಂದರೇನು?

ಅಸಲಿ ಹಾಲು, ಚೀಸ್‌ ಅಥವಾ ಇತರ ಸಾಂಪ್ರದಾಯಿಕ ಡೈರಿ ಪದಾರ್ಥಗಳ ಬದಲಿಗೆ ಕಡಿಮೆ ಬೆಲೆಯ ಅಥವಾ ಪರ್ಯಾಯ ಪದಾರ್ಥಗಳನ್ನು ಬಳಸಿಕೊಂಡು, ಅಸಲಿ ಉತ್ಪನ್ನದಂತೆಯೇ ಕಾಣುವ ಮತ್ತು ರುಚಿ ನೀಡುವಂತೆ ತಯಾರಿಸುವ ಉತ್ಪನ್ನಗಳನ್ನು ಸಾಮಾನ್ಯವಾಗಿ ಅನಲಾಗ್‌ ಡೈರಿ ಉತ್ಪನ್ನಗಳು ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ನಿಜವಾದ ಹಾಲಿನ ಕೊಬ್ಬು ಅಥವಾ ಚೀಸ್‌ನ ಬದಲಿಗೆ ಸಸ್ಯಜನ್ಯ ಎಣ್ಣೆ ಸೇರಿದಂತೆ ಪರ್ಯಾಯ ಪದಾರ್ಥಗಳನ್ನು ಬಳಸಬಹುದು.

ತಕ್ಷಣದಿಂದಲೇ ಅನಲಾಗ್‌ ಡೈರಿ ಪದಾರ್ಥಗಳು ಮೆನುವಿನಿಂದ ಔಟ್

ಈಗಾಗಲೇ ತಮ್ಮ ಮೆನುವಿನಲ್ಲಿ ‘ಅನಲಾಗ್‌ ಡೈರಿ’ ಬಳಕೆಯಾಗುತ್ತದೆ ಎಂದು ಘೋಷಿಸಿರುವ ರೆಸ್ಟೋರೆಂಟ್‌ಗಳ ಆಹಾರ ಪದಾರ್ಥಗಳನ್ನು ತಕ್ಷಣದಿಂದಲೇ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ ಎಂದು ಜೊಮ್ಯಾಟೊ ತಿಳಿಸಿದೆ.

ನಿಯಮ ಪಾಲಿಸದ ರೆಸ್ಟೋರೆಂಟ್‌ಗಳನ್ನು ಮುಂದಿನ ಹಂತದಲ್ಲಿ ಪ್ಲಾಟ್‌ಫಾರ್ಮ್‌ನಿಂದ ಡಿಲೀಸ್ಟ್‌ ಮಾಡಲಾಗುವುದು ಎಂದು ಕಂಪನಿ ಎಚ್ಚರಿಸಿದೆ. ಸೋಮವಾರ ರೆಸ್ಟೋರೆಂಟ್‌ ಪಾಲುದಾರರಿಗೆ ಕಳುಹಿಸಿರುವ ಸಂದೇಶದಲ್ಲಿ ಜೊಮ್ಯಾಟೊ, ಗ್ರಾಹಕರಿಗೆ ನಿಖರವಾಗಿ ವಿವರಿಸಲಾದ, ಸುರಕ್ಷಿತ ಹಾಗೂ ನಿರೀಕ್ಷಿತ ಗುಣಮಟ್ಟದ ಆಹಾರ ಸಿಗುವಂತೆ ನೋಡಿಕೊಳ್ಳುವುದು ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದೆ.

ರೆಸ್ಟೋರೆಂಟ್‌ಗಳಿಗೆ ಜೊಮ್ಯಾಟೊ ಸೂಚನೆ

ಅನಲಾಗ್‌ ಚೀಸ್‌, ಅನಲಾಗ್‌ ಪನೀರ್‌ ಅಥವಾ ಇತರ ಅನಲಾಗ್‌ ಡೈರಿ ಉತ್ಪನ್ನಗಳನ್ನು ಬಳಸುತ್ತಿರುವ ರೆಸ್ಟೋರೆಂಟ್‌ಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಜೊಮ್ಯಾಟೊ ಸೂಚಿಸಿದೆ.

ನೈಸರ್ಗಿಕ ಡೈರಿ ಉತ್ಪನ್ನಗಳಿಗೆ ಬದಲಾಯಿಸಬೇಕು. ತಕ್ಷಣ ಬದಲಾವಣೆ ಸಾಧ್ಯವಾಗದಿದ್ದರೆ ಅನಲಾಗ್‌ ಡೈರಿ ಬಳಸುವ ಆಹಾರ ಪದಾರ್ಥಗಳನ್ನು ಮೆನುವಿನಿಂದ ತೆಗೆದುಹಾಕಬೇಕು. ಪೂರೈಕೆದಾರರು ನೀಡಿರುವ ಉತ್ಪನ್ನದ ಲೇಬಲ್‌ ಮತ್ತು ಪದಾರ್ಥಗಳ ವಿವರಗಳನ್ನು ಪರಿಶೀಲಿಸಬೇಕು. ಜೊಮ್ಯಾಟೊದಲ್ಲಿ ಪಟ್ಟಿ ಮಾಡಿರುವ ಆಹಾರ ಪದಾರ್ಥಗಳಲ್ಲಿ ಬಳಸಿರುವ ಪದಾರ್ಥಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕು.

ನಿಯಮ ಮೀರಿದರೆ ಪ್ಲಾಟ್‌ಫಾರ್ಮ್‌ನಿಂದಲೇ ಔಟ್!

ಯಾವುದೇ ರೆಸ್ಟೋರೆಂಟ್‌ ನಿಯಮ ಪಾಲಿಸದಿರುವುದು ಪತ್ತೆಯಾದರೆ, ಅದನ್ನು ಪ್ಲಾಟ್‌ಫಾರ್ಮ್‌ನಿಂದ ಡಿಲೀಸ್ಟ್‌ ಮಾಡುವ ಹಕ್ಕು ಜೊಮ್ಯಾಟೊಗೆ ಇದೆ. ಜತೆಗೆ ಕಂಪನಿಯ ನೀತಿಗಳು ಮತ್ತು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಇತರ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ತಿಳಿಸಿದೆ.

ಅಲ್ಲದೆ, ನಿಯಮ ಉಲ್ಲಂಘನೆಯಾಗಿರುವ ಆಹಾರ ಉತ್ಪನ್ನ ಗ್ರಾಹಕರಿಗೆ ತಲುಪಿದ್ದರಿಂದ ಕಂಪನಿಗೆ ಯಾವುದೇ ನಷ್ಟ, ವೆಚ್ಚ ಅಥವಾ ಹಾನಿ ಉಂಟಾದರೆ, ಅದನ್ನು ಸಂಬಂಧಪಟ್ಟ ರೆಸ್ಟೋರೆಂಟ್‌ನಿಂದ ವಸೂಲಿ ಮಾಡುವ ಹಕ್ಕನ್ನೂ ಜೊಮ್ಯಾಟೊ ಕಾಯ್ದಿರಿಸಿದೆ.

Zomato bans analogue dishes on its platform
ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ; ಕಾರಣ ಏನು?

ಆಹಾರ ಸುರಕ್ಷತೆ ಬಗ್ಗೆ ಹೆಚ್ಚಿದ ಗಮನ

ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ನಡೆಸಿದ ಎನ್ನಲಾದ ಕಾರ್ಯಾಚರಣೆ ಹಾಗೂ ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಡೆಸಿದ ತಪಾಸಣೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಗಮನ ಹೆಚ್ಚಾಗಿದೆ.

ಇದೇ ಸಂದರ್ಭದಲ್ಲಿ ಜೊಮ್ಯಾಟೊ ಕೈಗೊಂಡಿರುವ ಈ ಕ್ರಮವು ಗ್ರಾಹಕರಿಗೆ ಆಹಾರದಲ್ಲಿ ಬಳಸಿರುವ ಪದಾರ್ಥಗಳ ಬಗ್ಗೆ ಹೆಚ್ಚಿನ ಪಾರದರ್ಶಕತೆ ಒದಗಿಸುವ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com