

ನವದೆಹಲಿ: ಕೇಂದ್ರ ಬಜೆಟ್ 2026ರ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಈ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಭಾರೀ ಇಳಿಕೆಯಾಗಿದೆ.
ಫೆಬ್ರವರಿ 1, 2026 ರಂದು, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ರೂ.1,62,240 ಮತ್ತು ಬೆಳ್ಳಿ ಪ್ರತಿ ಕೆಜಿಗೆ ರೂ.2,78,000 ದಾಖಲಾಗಿದೆ.
ಕಳೆದ 2 ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರ ಕುಸಿತ ಕಂಡಿವೆ. ಜನವರಿ 30 ರಂದು ರೂ.1,80,000 ಕ್ಕಿಂತ ಹೆಚ್ಚು ಇದ್ದ ಚಿನ್ನ ರೂ.1,55,000 ಕ್ಕೆ ಇಳಿದಿದೆ.
ಇನ್ನು ಬೆಳ್ಳಿ ಕೆಜಿಗೆ ರೂ.50,000 ಕ್ಕೆ ಇಳಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ 1 ಗ್ರಾಂ 24K ಚಿನ್ನದ ಬೆಲೆ ರೂ.16,058 ಇದೆ. 22K ಚಿನ್ನ 1 ಗ್ರಾಂ ರೂ.14,720 ಇದೆ. ಮತ್ತು 1 ಗ್ರಾಂ 18K ಚಿನ್ನದ ದರ ರೂ.12,044 ಇದೆ.
Advertisement