Indian Stock Market: 2ನೇ ದಿನವೂ ಮಹಾ ಏರಿಕೆ, ಕೇವಲ 15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ವೃದ್ಧಿ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ್ದ ಕೇಂದ್ರ ಬಜೆಟ್ 2026ರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಮಹಾ ಪತನ ಕಂಡಿತ್ತು.
Sensex
ಸಾಂದರ್ಭಿಕ ಚಿತ್ರ
Updated on

ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಬಳಿಕ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಭರ್ಜರಿ ಏರಿಕೆ ಕಂಡಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ್ದ ಕೇಂದ್ರ ಬಜೆಟ್ 2026ರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಮಹಾ ಪತನ ಕಂಡಿತ್ತು.

ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡು, ಸೆನ್ಸೆಕ್ಸ್ ಬರೊಬ್ಬರಿ 1,843.43ಅಂಕಗಳ ಇಳಿಕೆಯಾಗಿದ್ದರೆ, ನಿಫ್ಟಿ 593.45 ಅಂಕಗಳ ಕುಸಿತವಾಗಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಸೋಮವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಚೇತರಿಕೆ ಕಂಡಿತ್ತು. ನಿನ್ನೆ ಸೆನ್ಸೆಕ್ಸ್ ಬರೊಬ್ಬರಿ 943.52ಅಂಕಗಳ ಏರಿಕೆಯಾಗಿದ್ದರೆ, ನಿಫ್ಟಿ 262.95 ಅಂಕಗಳ ಏರಿಕೆಯಾಗಿತ್ತು. ಇಂದೂ ಕೂಡ ಈ ಬೆಳವಣಿಗೆ ಮುಂದುವರೆದಿದ್ದು, ಇಂದು ಷೇರು ಮಾರುಕಟ್ಟೆ ದಾಖಲೆಯ ಏರಿಕೆ ಕಂಡಿದೆ.

Sensex
Indian Stock Market: ಮಹಾ ಕುಸಿತದ ಬಳಿಕ ಪುಟಿದೆದ್ದ ಮಾರುಕಟ್ಟೆ; Sensex 943 ಅಂಕ ಏರಿಕೆ!

2 ಸಾವಿರ ಅಂಕ ಏರಿಕೆ

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.2.54ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.2.55ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 2,072.67ಅಂಕಗಳ ಏರಿಕೆಯೊಂದಿಗೆ 83,739.13 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 639.15 ಅಂಕಗಳ ಏರಿಕೆಯೊಂದಿಗೆ 25,727.55 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

"ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಖಂಡಿತವಾಗಿಯೂ ನಿರ್ಣಾಯಕ ಗೆಲುವಾಗಿದ್ದು, ಇದು ಭಾರತೀಯ ಮಾರುಕಟ್ಟೆಗಳಿಗೆ ಪ್ರಮುಖವಾದ ಒತ್ತಡವನ್ನು ತೆಗೆದುಹಾಕುತ್ತದೆ.

ಬಲವಾದ ಬಜೆಟ್‌ನ ನೆರಳಿನಲ್ಲೇ ಬರುತ್ತಿರುವ ಇದು ಬಂಡವಾಳ ಹರಿವು, ರೂಪಾಯಿ ಮೌಲ್ಯ ಏರಿಕೆ ಮತ್ತು ಉತ್ಪಾದನಾ ಹೂಡಿಕೆಯ ಮೇಲೆ ಗೋಚರತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ" ಎಂದು ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ ಬಾಲಸುಬ್ರಮಣಿಯನ್ ಹೇಳಿದ್ದಾರೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಅದಾನಿ ಪೋರ್ಟ್ಸ್ ಸುಮಾರು ಶೇಕಡಾ 9.12 ರಷ್ಟು ಏರಿಕೆಯೊಂದಿಗೆ ಭಾರಿ ಮುನ್ನಡೆ ಸಾಧಿಸಿದ್ದರೆ, ಉಳಿದಂತೆ ಬಜಾಜ್ ಫೈನಾನ್ಸ್, ಇಂಟರ್‌ಗ್ಲೋಬ್ ಏವಿಯೇಷನ್, ಪವರ್ ಗ್ರಿಡ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟೆಕ್ ಮಹೀಂದ್ರಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ಅಮೆರಿಕ ಮತ್ತು ಭಾರತ ವ್ಯಾಪಾರ ಒಪ್ಪಂದವು ಜವಳಿ, ಚರ್ಮ, ರತ್ನಗಳು ಮತ್ತು ಆಭರಣಗಳು, ಆಟೋ ಪೂರಕ, ಸಮುದ್ರಾಹಾರ ರಫ್ತು ಮತ್ತು ವಿಶೇಷ ರಾಸಾಯನಿಕಗಳ ಷೇರುಗಳಲ್ಲಿಯೂ ತೀವ್ರ ಏರಿಕೆಗೆ ಕಾರಣವಾಯಿತು.

15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13ಲಕ್ಷ ಕೋಟಿ ವೃದ್ಧಿ!

ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ರೂ. 12,10,877.45 ಕೋಟಿಗಳಷ್ಟು ಹೆಚ್ಚಾಗಿ ರೂ. 4,67,14,754.77 ಕೋಟಿಗಳಿಗೆ (ಯುಎಸ್‌ಡಿ 5.16 ಟ್ರಿಲಿಯನ್) ತಲುಪಿದೆ.

ಭಾರತದ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 18ಕ್ಕೆ ಇಳಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ವಹಿವಾಟು ಆರಂಭವಾದ ಕೇವಲ ನಿಮಿಷದಲ್ಲೇ ಹೂಡಿಕೆದಾರರ ಸಂಪತ್ತು 13ಲಕ್ಷ ಕೋಟಿ ವೃದ್ಧಿಯಾಗಿದೆ.

ವಿದೇಶಿ ಸಾಂಸ್ಥಿತಿಕ ಹೂಡಿಕೆದಾರರು ಮತ್ತೇ ಭಾರತದ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಮಾರುಕಟ್ಟೆ (ಎನ್‌ಎಸ್‌ಸಿ) ಸೂಚ್ಯಂಕ ನಿಫ್ಟಿ ಏರಿಕೆಯಾಗಿದೆ.

ಷೇರು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ ಬರೊಬ್ಬರಿ 3500 ಅಂಕ ಏರಿಕೆ ಕಂಡರೆ ನಿಫ್ಟಿ 1200 ಅಂಕ ಏರಿಕೆ ಕಂಡಿತ್ತು. ಈ ಮೂಲಕ ಬಿಎಸ್‌ಸಿ ಪಟ್ಟಿ ಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 468.32 ಲಕ್ಷ ಕೋಟಿ ರೂ.ಗಳಿಗೆ ಏರಿತು.

Sensex
ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ: ಇದು 'Mother of All Deals'; ಪ್ರಧಾನಿ ಮೋದಿ ಶ್ಲಾಘನೆ; Video

ಮಾರುಕಟ್ಟೆ ಚೇತರಿಕೆಗೆ ಕಾರಣ

ಆರಂಭದಲ್ಲಿ ಅಮೆರಿಕಾ ಶೇ. 25 ಸುಂಕ ವಿಧಿಸಿತ್ತು. ಭಾರತ- ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರತಿಯಾಗಿ ಶೇ. 25 ರಷ್ಟು ದಂಡವಿಧಿಸಿತ್ತು. ಹೀಗಾಗಿ ಒಟ್ಟು ಸುಂಕ 50 ರಷ್ಟು ಏರಿಕೆಯಾಗಿತ್ತು. ಇದೀಗ ಸುಂಕು ಇಳಿಕೆ ಮತ್ತು ವಿದೇಶಿ ಹೂಡಿಕೆದಾರರು ಮರಳಿ ಭಾರತಕ್ಕೆ ಬರುತ್ತಿರುವ ಕಾರಣ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ ಕಂಡಿದೆ. ಈ ಎಲ್ಲಾ ಕಾರಣದಿಂದಾಗಿ ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com