ದಿನವೂ ಚಿನ್ನದ ಬೆಲೆ ಬದಲಾಗೋದು ಯಾಕೆ? ಯಾರು ಡಿಸೈಡ್ ಮಾಡ್ತಾರೆ ಬಂಗಾರದ ಬೆಲೆ?

Gold Rate: ಚಿನ್ನದ ಬೆಲೆ ದಿನವೂ ಏಕೆ ಏರಿಳಿತವಾಗುತ್ತದೆ? ಯಾರು ನಿಗದಿ ಮಾಡುತ್ತಾರೆ ಗೊತ್ತಾ? ಇಲ್ಲಿದೆ ಚಿನ್ನದ ದರ ನಿರ್ಧಾರದ ಹಿಂದಿರುವ 4 ಪ್ರಮುಖ ಅಂಶಗಳು
Gold
ಚಿನ್ನOnline Desk
Updated on

Gold Price: ಚಿನ್ನ ಖರೀದಿಸಲು ಹೋದಾಗ ಇವತ್ತು ಒಂದು ರೇಟ್, ನಾಳೆ ಇನ್ನೊಂದು ರೇಟ್ ಇರುವುದನ್ನು ಎಲ್ಲರೂ ಗಮನಿಸಿರಬಹುದು. ಅದ್ರಲ್ಲೂ, ಕೇವಲ 100 ರೂಪಾಯಿ ಬೆಲೆ ಹೆಚ್ಚುಕಮ್ಮಿ ಕೂಡ ಮಧ್ಯಮ ವರ್ಗದವರ ಬಜೆಟ್ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಆದರೆ ಚಿನ್ನದ ಬೆಲೆಯನ್ನು ನಿಖರವಾಗಿ ಯಾರು ನಿಗದಿಪಡಿಸುತ್ತಾರೆ ಗೊತ್ತಾ? ದಿನವೂ ರೇಟ್ ಬದಲಾಗಲು ಕಾರಣವೇನು ಗೊತ್ತಾ? ಇಲ್ಲಿದೆ ಅದಕ್ಕೆ ಉತ್ತರ:

ಬಂಗಾರದ ರೇಟ್ ನಿಗದಿ ಮಾಡೋದು ಯಾರು?

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಕೇವಲ ಆಭರಣವಾಗಿ ಮಾತ್ರವಲ್ಲದೆ, ಒಂದು ಸುರಕ್ಷಿತ ಹೂಡಿಕೆಯಾಗಿಯೂ ಅತಿ ಪ್ರಮುಖ ಸ್ಥಾನವಿದೆ. ಆದರೆ, ಜ್ಯುವೆಲ್ಲರಿಗೆ ಹೋದಾಗ ಪ್ರತಿದಿನವೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುವುದನ್ನು ನಾವು ಗಮನಿಸುತ್ತೇವೆ. ಈ ವೇಳೆ ಚಿನ್ನದ ಬೆಲೆಯ ಏರಿಳಿತಕ್ಕೆ ಸರ್ಕಾರದ ವಿರುದ್ದ ಕೋಪ ಮಾಡಿಕೊಳ್ಳುತೇವೆ. ಆದರೆ, ಚಿನ್ನದ ಬೆಲೆ ಏರಿಳಿತದ ಹಿಂದೆ ಯಾವುದೇ ಒಂದು ಸರ್ಕಾರ ಅಥವಾ ಬ್ಯಾಂಕ್ ಕೈವಾಡ ಇರುವುದಿಲ್ಲ. ಬದಲಿಗೆ ಚಿನ್ನದ ಬೆಲೆಯನ್ನು ಜಾಗತಿಕವಾಗಿ 2 ಪ್ರಮುಖ ಕೇಂದ್ರಗಳು ನಿರ್ಧರಿಸುತ್ತವೆ. ಅವು, ಲಂಡನ್ ಬುಲಿಯನ್ ಮಾರುಕಟ್ಟೆ ಮತ್ತು COMEX ನ್ಯೂಯಾರ್ಕ್. ಇಲ್ಲಿ ದಿನಕ್ಕೆ 2 ಬಾರಿ ದೊಡ್ಡ ಬ್ಯಾಂಕ್‌ಗಳು ಸೇರಿ ಚಿನ್ನದ ಬೆಂಚ್‌ಮಾರ್ಕ್ ಬೆಲೆಯನ್ನು ನಿಗದಿಪಡಿಸುತ್ತಾರೆ. ಇದನ್ನೇ LBMA Gold Price ಎಂದು ಕರೆಯುತ್ತಾರೆ. ಇದೇ ಅಂತರಾಷ್ಟ್ರೀಯ ಬೆಲೆ.

Gold
Gold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!

ಭಾರತದಲ್ಲಿ ಬೆಲೆ ಹೇಗೆ ನಿಗದಿಯಾಗುತ್ತದೆ?

  • ಅಂತರಾಷ್ಟ್ರೀಯ ಬೆಲೆ ಮತ್ತು ಡಾಲರ್ ದರ: ಮೊದಲು ಅಂತರಾಷ್ಟ್ರೀಯ ಚಿನ್ನದ ಬೆಲೆಯನ್ನು ಡಾಲರ್‌ನಿಂದ ರೂಪಾಯಿಗೆ ಪರಿವರ್ತಿಸಲಾಗುತ್ತದೆ. ಡಾಲರ್ ಎದುರು ರೂಪಾಯಿ ದುರ್ಬಲವಾದರೆ ಭಾರತದಲ್ಲಿ ಚಿನ್ನದ ಬೆಲೆ ಸ್ವಯಂಚಾಲಿತವಾಗಿ ಏರುತ್ತದೆ.

  • ಆಮದು ಸುಂಕ ಮತ್ತು GST: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ದೇಶದ ಪ್ರಮುಖ ಆಮದುದಾರರು ಚಿನ್ನವನ್ನು ಆಮದು ಮಾಡಿಕೊಂಡ ನಂತರ, ಅದಕ್ಕೆ ಆಮದು ಸುಂಕ ಮತ್ತು 3% ಜಿಎಸ್‌ಟಿ ಯಂತಹ ತೆರಿಗೆಗಳನ್ನು ಸೇರಿಸಲಾಗುತ್ತದೆ.

  • ಬೇಡಿಕೆ ಮತ್ತು ಪೂರೈಕೆ: ಅಕ್ಷಯ ತೃತೀಯ, ಮದುವೆ ಸೀಸನ್‌ನಲ್ಲಿ ಬೇಡಿಕೆ ಜಾಸ್ತಿಯಾದರೆ ಆಭರಣಕಾರರು ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಸೇರಿಸುತ್ತಾರೆ. ಮಳೆಗಾಲದಲ್ಲಿ ಬೇಡಿಕೆ ಕಡಿಮೆಯಾದರೆ ಬೆಲೆ ಸ್ವಲ್ಪ ಇಳಿಯಬಹುದು.

  • IBJA ರೇಟ್: ಭಾರತದಲ್ಲಿ ಪ್ರತಿದಿನ ಬೆಳಗ್ಗೆ IBJA - India Bullion and Jewellers Association ಮುಂಬೈನ ಬುಲಿಯನ್ ಮಾರುಕಟ್ಟೆಯ ಆಧಾರದ ಮೇಲೆ 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ಬೇಸ್ ರೇಟ್ ಬಿಡುಗಡೆ ಮಾಡುತ್ತದೆ.

ಇದೇ ದರವನ್ನು ಆಧರಿಸಿ ಬೆಂಗಳೂರು, ದೆಹಲಿ ಸೇರಿ ಎಲ್ಲಾ ನಗರಗಳ ಆಭರಣಕಾರರು ತಮ್ಮ ಬೆಲೆ ನಿಗದಿಪಡಿಸುತ್ತಾರೆ.

Gold
ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟಿಸಿದ ಆಂಧ್ರ CM; ಪ್ರತಿ ವರ್ಷ 900 ಕೆಜಿ ಚಿನ್ನ ಉತ್ಪಾದನೆ!

ಬೆಲೆ ಯಾಕೆ ದಿನವೂ ಬದಲಾಗೋದು?

ಜಾಗತಿಕ ಹಣದುಬ್ಬರ, ಅಮೆರಿಕದ ಬಡ್ಡಿದರ, ರಷ್ಯಾ-ಉಕ್ರೇನ್ ಯುದ್ಧದಂತಹ ಜಿಯೋ-ರಾಜಕೀಯ ಉದ್ವಿಗ್ನತೆ, ಡಾಲರ್‌ನ ಬಲ, ಷೇರು ಮಾರುಕಟ್ಟೆ ಕುಸಿತ ಇವೆಲ್ಲವೂ ಚಿನ್ನದ ಬೇಡಿಕೆಯನ್ನು ಹೆಚ್ಚು-ಕಡಿಮೆ ಮಾಡುತ್ತವೆ. ಹೂಡಿಕೆದಾರರು ರಿಸ್ಕ್ ಇದ್ದಾಗ ಚಿನ್ನ ಖರೀದಿಸುವುದರಿಂದ ಬೆಲೆ ಏರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com