Indian Stock Market: ಕರಡಿ ಕುಣಿತ, Sensex 893 ಅಂಕ ಕುಸಿತ, ನಿಫ್ಟಿ 23,824ಕ್ಕೆ ಇಳಿಕೆ

ದುರ್ಬಲ ಜಾಗತಿಕ ಸೂಚ್ಯಂಕಗಳು ಹಾಗೂ ವಿಶ್ವದ ತಂತ್ರಜ್ಞಾನ ಷೇರುಗಳಲ್ಲಿನ ಭಾರಿ ಕುಸಿತದ ಪರಿಣಾಮವಾಗಿ ಷೇರುಪೇಟೆಗಳಲ್ಲಿ ತಿದ್ದುಪಡಿ ಕಂಡುಬಂದಿದೆ.
Indian Stock Market
ಭಾರತೀಯ ಷೇರು ಮಾರುಕಟ್ಟೆ
Updated on

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮಧ್ಯ ಪ್ರಾಚ್ಯ ಸಂಘರ್ಷ ಮತ್ತು ಅಮೆರಿಕ-ಇರಾನ್ ರಾಜಕೀಯ ಮೇಲಾಟಗಳ ನಡುವೆಯೇ ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.16ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.16ರಷ್ಟು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 893.39ಅಂಕಗಳ ಇಳಿಕೆಯೊಂದಿಗೆ 76,200.68 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 278.80 ಅಂಕಗಳ ಕುಸಿತದೊಂದಿಗೆ 23,824.10 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ಕುಸಿತದೊಂದಿಗೆ ನಿಫ್ಟಿ ಮತ್ತೆ 24 ಸಾವಿರಕ್ಕಿಂತ ಕಡಿಮೆ ಅಂಕಗಳಿಗೆ ಕುಸಿತವಾಗಿದೆ.

Indian Stock Market
CRED ನಲ್ಲಿ Meta ಬರೋಬ್ಬರಿ 8,550 ಕೋಟಿ ರೂ ಹೂಡಿಕೆ: ಭಾರತೀಯನ ಕೈಗೆ ವಾಟ್ಸಾಪ್ ಚುಕ್ಕಾಣಿ!

ಇಂದಿನ ವಹಿವಾಟಿನಲ್ಲಿ ಔಷಧ ಮತ್ತು ಆರೋಗ್ಯ ರಕ್ಷಣೆ ವಲಯಗಳ ಷೇರುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ವಲಯಗಳ ಷೇರುಗಳೂ ಕುಸಿದಿದ್ದು, ಪ್ರಮುಖವಾಗಿ ತಂತ್ರಜ್ಞಾನ, ಲೋಹ, ದೂರಸಂಪರ್ಕ, ಪಿಎಸ್‌ಯು ಬ್ಯಾಂಕ್, ರಿಯಾಲ್ಟಿ ಕ್ಷೇತ್ರಗಳ ಷೇರುಗಳ ಮೌಲ್ಯ ಶೇ.1ರಿಂದ ಶೇ.3ರವರೆಗೂ ಕುಸಿತ ಕಂಡಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸಿಪ್ಲಾ, ಡಾ. ರೆಡ್ಡೀಸ್ ಲ್ಯಾಬ್ಸ್, ಪವರ್ ಗ್ರಿಡ್ ಕಾರ್ಪ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಿಸಿಎಸ್, ವಿಪ್ರೋ, ಅದಾನಿ ಎಂಟರ್‌ಪ್ರೈಸಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ಕುಸಿತದ ಹೊರತಾಗಿಯೂ ಭಾರತ ಹೂಡಿಕೆಗೆ ಸುರಕ್ಷಿತ

ದುರ್ಬಲ ಜಾಗತಿಕ ಸೂಚ್ಯಂಕಗಳು ಹಾಗೂ ವಿಶ್ವದ ತಂತ್ರಜ್ಞಾನ ಷೇರುಗಳಲ್ಲಿನ ಭಾರಿ ಕುಸಿತದ ಪರಿಣಾಮವಾಗಿ ಷೇರುಪೇಟೆಗಳಲ್ಲಿ ತಿದ್ದುಪಡಿ ಕಂಡುಬಂದಿದೆ. ಆದಾಗ್ಯೂ, ಬಲವಾದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳ ಹಿನ್ನೆಲೆಯಲ್ಲಿ ದೀರ್ಘಾವಧಿಯಲ್ಲಿ ಭಾರತ ಹೂಡಿಕೆಗೆ ಸುರಕ್ಷಿತ ತಾಣವಾಗಿ ಮುಂದುವರಿಯಲಿದೆ ಎಂದು ಈಕ್ವಿರಸ್ ವೆಲ್ತ್‌ನ ಎಂಡಿ ಮತ್ತು ವ್ಯವಹಾರ ಮುಖ್ಯಸ್ಥ ಅಂಕುರ್ ಪುಂಜ್ ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಕ್ಕೆ ಸಂಬಂಧಿಸಿದ ಹೂಡಿಕೆ ಮತ್ತು ಅವಲಂಬನೆ ತುಲನಾತ್ಮಕವಾಗಿ ಕಡಿಮೆ ಇರುವುದರಿಂದ, ಜಾಗತಿಕ ತಂತ್ರಜ್ಞಾನ ವಲಯದಲ್ಲಿನ ಈ ಕುಸಿತವು ಜಾಗತಿಕ ಬಂಡವಾಳ ಮರುಹಂಚಿಕೆಗೆ ಕಾರಣವಾಗಲಿದೆ. ಇದರ ಪರಿಣಾಮವಾಗಿ ಭಾರತಕ್ಕೆ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಪಾವಧಿಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತಗಳು ಮುಂದುವರಿಯಬಹುದಾದರೂ, ದೀರ್ಘಾವಧಿಯಲ್ಲಿ ಈ ಬೆಳವಣಿಗೆ ಭಾರತಕ್ಕೆ ಹೆಚ್ಚಿನ ಬಂಡವಾಳ ಹರಿದುಬರಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com