UPI ಪಾವತಿ ಸ್ವೀಕರಿಸುವ ವ್ಯಾಪಾರಿಗಳಿಗೆ ಭರ್ಜರಿ ಗಿಫ್ಟ್: QRಕೋಡ್ ಹಾಗೂ ಸೌಂಡ್‌ಬಾಕ್ಸ್‌ಗೆ ಇನ್ಮುಂದೆ ಪ್ರೋತ್ಸಾಹ ಧನ!

ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಅಂಗಡಿಯವರಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ವ್ಯಾಪಾರ ಸಕ್ಷಮ್ ಯೋಜನೆ ಎಂಬ ಹೊಸ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲದೆ:
NPCI Launches UPI Vyapar Saksham Yojana Offering Cash Incentives For QR Codes And Soundboxes
ಯುಪಿಐ ವ್ಯಾಪಾರ ಸಕ್ಷಮ್ ಯೋಜನೆOnline Desk
Updated on: 

ಮುಂಬೈ (ಮಹಾರಾಷ್ಟ್ರ): ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಅಂಗಡಿಯವರಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಯುಪಿಐ ವ್ಯಾಪಾರ ಸಕ್ಷಮ್ ಯೋಜನೆ ಎಂಬ ಹೊಸ ಪ್ರೋತ್ಸಾಹ ಧನ ಯೋಜನೆಯನ್ನು ಪರಿಚಯಿಸಿದೆ. ಈ ಮೂರು ವರ್ಷಗಳ ಯೋಜನೆಯಡಿ ಅರ್ಹ ಸಣ್ಣ ವ್ಯಾಪಾರಿಗಳಿಗೆ ಪ್ರತಿ QR ಕೋಡ್ ಅಳವಡಿಕೆಗೆ ₹300 ಮತ್ತು ಸೌಂಡ್‌ಬಾಕ್ಸ್‌ಗೆ ₹750 ಪ್ರೋತ್ಸಾಹ ಧನ ನೀಡಲಾಗುತ್ತದೆ. ಆ ಕುರಿತ ವರದಿ ಇಲ್ಲದೆ:

ವಹಿವಾಟು ಹೆಚ್ಚಳಕ್ಕೂ ಬೋನಸ್

ಮೂಲಸೌಕರ್ಯಕ್ಕೆ ಪ್ರೋತ್ಸಾಹ ಧನ. ಹೊಸ ಸಣ್ಣ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯಾಪ್ತಿಗೆ ತರಲು ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳ ಮೂಲಕ ಪ್ರತಿ ಭೌತಿಕ ಕ್ಯೂಆರ್ ಕೋಡ್‌ಗೆ ₹300 ಹಾಗೂ ಪಾವತಿ ಎಚ್ಚರಿಕೆ ನೀಡುವ ಸೌಂಡ್‌ಬಾಕ್ಸ್ ಅಳವಡಿಕೆಗೆ ₹750 ಪ್ರೋತ್ಸಾಹ ಧನ ಒದಗಿಸಲಾಗುತ್ತದೆ. ಜೊತೆಗೆ, ಕೇವಲ ಸಾಧನಗಳ ಅಳವಡಿಕೆಗೆ ಮಾತ್ರವಲ್ಲದೆ, ₹2,000 ವರೆಗಿನ ಅರ್ಹ ಯುಪಿಐ ವಹಿವಾಟುಗಳಲ್ಲಿ ತ್ರೈಮಾಸಿಕವಾಗಿ ಶೇ. 5 ರಷ್ಟು ವೃದ್ಧಿ ಸಾಧಿಸಿದರೆ ಹೆಚ್ಚುವರಿ ವಹಿವಾಟು-ಆಧಾರಿತ ಪ್ರೋತ್ಸಾಹ ಧನವನ್ನೂ ನಿಗದಿಪಡಿಸಲಾಗಿದೆ. ಅದರಲ್ಲೂ, ಈ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಅನುದಾನದ ಬದಲಾಗಿ, ಬ್ಯಾಂಕ್‌ಗಳು ಮತ್ತು ಪಾವತಿ ಆ್ಯಪ್‌ಗಳು ಗಳಿಸುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಆದಾಯದ ಶೇ. 5 ರಷ್ಟು ಪಾಲನ್ನು ಮೀಸಲಿಟ್ಟು ನಿಧಿ ಸಂಗ್ರಹಿಸಲಾಗುತ್ತದೆ. ಯುಪಿಐ ಎಂಡಿಆರ್ ಶುಲ್ಕವು ಅಧಿಕೃತವಾಗಿ ಜಾರಿಯಾದ ದಿನದಿಂದ ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.

NPCI Launches UPI Vyapar Saksham Yojana Offering Cash Incentives For QR Codes And Soundboxes
ಹೊಸ ವರ್ಷದಿಂದ ಹೊಸ ಚೆಕ್ ಬುಕ್ ಕಡ್ಡಾಯವೇ? ಆರ್‌ಬಿಐ ಸ್ಪಷ್ಟನೆ ಏನು? Cheque Book ನಿಯಮಗಳ ಬದಲಾವಣೆ ಕುರಿತ ವದಂತಿಗೆ RBI ಹೇಳಿದ್ದೇನು?

ಯಾರಿಗೆ ಈ ಸೌಲಭ್ಯ ಅನ್ವಯಿಸುತ್ತದೆ?

ಹಿಂದಿನ ಹಣಕಾಸು ವರ್ಷದಲ್ಲಿ ₹40 ಲಕ್ಷದವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ವ್ಯಾಪಾರಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ವಿಶೇಷವಾಗಿ ಟಯರ್-3 ರಿಂದ ಟಯರ್-6 ನಗರಗಳು, ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಕೇಂದ್ರ ಸರ್ಕಾರದ ಇತರ ಯೋಜನೆಗಳ ಅಡಿಯಲ್ಲಿ ನೋಂದಾಯಿತರಾದ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ, ಪ್ರೋತ್ಸಾಹ ಧನ ಪಡೆಯಲು ವ್ಯಾಪಾರಿಗಳು ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಎರಡು ತಿಂಗಳು ತಲಾ 25 ಅರ್ಹ ಯುಪಿಐ ವಹಿವಾಟುಗಳನ್ನು ನಡೆಸಿರಬೇಕು ಮತ್ತು ತಿಂಗಳಿಗೆ ಕನಿಷ್ಠ ₹5,000 ವಹಿವಾಟು ದಾಖಲಿಸಿರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X