Indian Stock Market: ಮುಂದುವರೆದ ಭಾರತೀಯ ಷೇರುಮಾರುಕಟ್ಟೆ ನಾಗಾಲೋಟ, 82 ಸಾವಿರ ಅಂಕ ಗಡಿ ದಾಟಿದ Sensex

ವಾರದ ಮೊದಲ ದಿನವಾದ ಸೋಮವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Indian Stock Market
ಭಾರತೀಯ ಷೇರು ಮಾರುಕಟ್ಟೆ
Updated on: 

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯ ನಾಗಾಲೋಟ ಮುಂದುವರೆದಿದ್ದು, ಸೋಮವಾರವೂ ಕೂಡ ಸೆನ್ಸೆಕ್ಸ್ ಭಾರಿ ಏರಿಕೆ ಕಂಡಿದೆ.

ವಾರದ ಮೊದಲ ದಿನವಾದ ಸೋಮವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.63ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.58ರಷ್ಟು ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 512.34ಅಂಕಗಳ ಏರಿಕೆಯೊಂದಿಗೆ 82,104.79 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 146.80 ಅಂಕಗಳ ಏರಿಕೆಯೊಂದಿಗೆ 25,291.10 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market
RBI ನ ದೇಶೀಯ ಹಣ ವರ್ಗಾವಣೆ ನಿಯಯದಲ್ಲಿ ಹಲವು ಬದಲಾವಣೆ: ನೀವು ತಿಳಿದಿರಬೇಕಾದ ಅಂಶಗಳಿವು....

ಎಫ್‌ಎಂಸಿಜಿ ಷೇರುಗಳಿಗೆ ಬೇಡಿಕೆ; ಲೋಹ, ಆಟೋ ವಲಯದಲ್ಲಿ ಕುಸಿತ

ವಲಯವಾರು ವಹಿವಾಟಿನಲ್ಲಿ ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕ ಶೇ. 1.9ರಷ್ಟು ಏರಿಕೆ ಕಂಡು ಮುಂಚೂಣಿಯಲ್ಲಿತ್ತು. ಬ್ಯಾಂಕಿಂಗ್‌, ಮೂಲಸೌಕರ್ಯ, ಖಾಸಗಿ ಬ್ಯಾಂಕ್‌, ಮಾಧ್ಯಮ ಮತ್ತು ಪಿಎಸ್‌ಯು ಬ್ಯಾಂಕ್‌ ವಲಯಗಳಲ್ಲೂ ಖರೀದಿ ಕಂಡುಬಂತು.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಐಟಿಸಿ, ಭಾರ್ತಿ ಏರ್‌ಟೆಲ್‌, ಎಟರ್ನಲ್‌, ಪವರ್‌ಗ್ರಿಡ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಾಟಾ ಸ್ಟೀಲ್‌, ಮಾರುತಿ ಸುಜುಕಿ, ಬಜಾಜ್‌ ಫಿನ್‌ಸರ್ವ್‌, ಇಂಟರ್‌ಗ್ಲೋಬ್‌ ಏವಿಯೇಷನ್‌ ಮತ್ತು ಸನ್‌ ಫಾರ್ಮಾ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X