ಇರಾನ್-ಅಮೆರಿಕ ಸಂಘರ್ಷ: ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ

ಅಮೆರಿಕ- ಇರಾನ್ ಸಂಘರ್ಷ ಏಳನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಕದನ ವಿರಾಮ ಒಪ್ಪಂದದ ಹೊರತಾಗಿಯೂ ಪರಿಸ್ಥಿತಿ ಶಾಂತವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
Crude Oil  (File photo)
ಕಚ್ಚಾ ತೈಲ ಸಾಂದರ್ಭಿಕ ಚಿತ್ರ
Updated on

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಮತ್ತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಪರಿಣಾಮ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶತಕ ಬಾರಿಸಿದೆ.

ತೈಲ ಬೆಲೆಗಳು ಬುಧವಾರ ಪ್ರತಿ ಬ್ಯಾರೆಲ್‌ಗೆ ಶೇ. 1 ಕ್ಕಿಂತ ಹೆಚ್ಚು ಏರಿಕೆಯಾಗುವ ಮೂಲಕ 100 ಡಾಲರ್ ಗಡಿ ದಾಟಿದೆ.

ಬ್ರೆಂಟ್ ಕಚ್ಚಾ ತೈಲದ (Brent Crude) ಫ್ಯೂಚರ್‌ ಬೆಲೆ ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜ್‌ನಲ್ಲಿ ಇಂದು ಬ್ಯಾರೆಲ್‌ಗೆ ಭರ್ತಿ 100 ಡಾಲರ್ ತಲುಪಿದೆ. ಜುಲೈ ಬಳಿಕ ತೈಲ ಬೆಲೆ ಈ ಮಟ್ಟಕ್ಕೆ ಏರಿಕೆಯಾಗಿರುವುದು ಇದೇ ಮೊದಲು.

Crude Oil  (File photo)
ಮಧ್ಯಪ್ರಾಚ್ಯ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಅಮೆರಿಕ- ಇರಾನ್ ಸಂಘರ್ಷ ಏಳನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಕದನ ವಿರಾಮ ಒಪ್ಪಂದದ ಹೊರತಾಗಿಯೂ ಪರಿಸ್ಥಿತಿ ಶಾಂತವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಕಚ್ಚಾ ತೈಲ ಬೆಲೆ ಹೆಚ್ಚುತ್ತಲೇ ಇದ್ದು, ಆಗಸ್ಟ್ ತಿಂಗಳ ಆರಂಭದಿಂದೀಚೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ವರ್ಷದಲ್ಲೇ ಜಾಗತಿಕ ಕಚ್ಚಾ ತೈಲದ ಮಾನದಂಡವು ಶೇ. 60ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಸಮೀಪದಲ್ಲಿದ್ದ ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿವೆ. ಇದರಿಂದಾಗಿ ಪ್ರಮುಖ ಕಡಲ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ತೀವ್ರ ಅಡ್ಡಿ ಉಂಟಾಗಿದೆ.

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಹಲವು ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವಾದ ಸೌದಿಯೂ ಸಂಘರ್ಷಕ್ಕೆ ಸಿಲುಕುವಂತಾಗಿದೆ.

ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ತೀವ್ರಗೊಂಡಿದ್ದು, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಹಾಗೂ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com