LPG ಸಿಲಿಂಡರ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಅಕ್ಟೋಬರ್ 1ರೊಳಗೆ e-KYC ಮಾಡದಿದ್ದರೆ ಸಬ್ಸಿಡಿ ಕಟ್

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದಂತೆ, ಅಕ್ಟೋಬರ್ 1, 2026 ರಿಂದ ಸಬ್ಸಿಡಿ ದರದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ (e-KYC) ಮಾಡಿಸುವುದು ಕಡ್ಡಾಯವಾಗಿದೆ. ಆ ಕುರಿತ ವರದಿ ಇಲ್ಲಿದೆ:
LPG Cylinder
LPG ಸಿಲಿಂಡರ್Online Desk
Updated on

ನವದೆಹಲಿ: ಎಲ್‌ಪಿಜಿ ಗ್ರಾಹಕರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್! ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ನಕಲಿ ಗ್ಯಾಸ್ ಸಂಪರ್ಕಗಳನ್ನು ತಡೆಯಲು ಮತ್ತು ಸರ್ಕಾರಿ ಸಬ್ಸಿಡಿಯ ದುರ್ಬಳಕೆಯನ್ನು ತಡೆಗಟ್ಟಲು ಅಕ್ಟೋಬರ್ 1, 2026 ರಿಂದ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳಿಗೆ ಸಬ್ಸಿಡಿ ಪಡೆಯಲು ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (BAA - eKYC) ಪೂರ್ಣಗೊಳಿಸಿರಬೇಕು ಎಂದು ಘೋಷಿಸಿದೆ. ಹಾಗಾಗಿ, ಈ ಹೊಸ ನಿಯಮ ಮತ್ತು ದೃಢೀಕರಣ ಆಗದಿದ್ದರೆ ಏನಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

e-KYC ಮಾಡದಿದ್ದರೆ ಏನಾಗುತ್ತದೆ?

ಅಕ್ಟೋಬರ್ 1 ರೊಳಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಸದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ವಿತರಣೆ ನಿಲ್ಲುವುದಿಲ್ಲ. ಆದರೆ, ಅವರಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಸೌಲಭ್ಯ ಕಡಿತವಾಗಲಿದೆ. ಅಂದರೆ, ಪ್ರಸ್ತುತ 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗೆ ಸರ್ಕಾರವು ನೇರ ನಗದು ವರ್ಗಾವಣೆ ಮೂಲಕ ಸುಮಾರು 210 ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ. ಆದರೆ, e-KYC ಮಾಡಿಸದ ಗ್ರಾಹಕರು ಸಬ್ಸಿಡಿ ರಹಿತ ಪೂರ್ಣ ಮಾರುಕಟ್ಟೆ ದರವನ್ನು ಪಾವತಿಸಿ ಸಿಲಿಂಡರ್ ಖರೀದಿಸಬೇಕಾಗುತ್ತದೆ. ಆದರೆ, ಈ ನಿಯಮವು ಇದುವರೆಗೆ ಒಮ್ಮೆಯೂ ತಮ್ಮ ಎಲ್‌ಪಿಜಿ ಕನೆಕ್ಷನ್‌ಗೆ ಬಯೋಮೆಟ್ರಿಕ್ ಅಥವಾ ಆಧಾರ್ ಇ-ಕೆವೈಸಿ ಮಾಡಿಸದ ಗ್ರಾಹಕರಿಗೆ ಮಾತ್ರವೇ ಅನ್ವಯಿಸುತ್ತದೆ. ಹಾಗಾಗಿ, ಈಗಾಗಲೇ ಇ-ಕೆವೈಸಿ ಪ್ರಕ್ರಿಯೆ ಮುಗಿಸಿರುವ ಅಂದರೆ ದೇಶದ 30.4 ಕೋಟಿ ಎಲ್‌ಪಿಜಿ ಗ್ರಾಹಕರ ಪೈಕಿ ಈಗಾಗಲೇ ಸುಮಾರು ಶೇ. 89.9 ರಷ್ಟು (27.43 ಕೋಟಿ) ಸಕ್ರಿಯ ಗ್ರಾಹಕರು ಮತ್ತೊಮ್ಮೆ  e-KYC ಮಾಡುವ ಅಗತ್ಯವಿರುವುದಿಲ್ಲ.

ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?

  • ಗ್ಯಾಸ್ ವಿತರಕರ ಶೋರೂಮ್: ನಿಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಯಂತ್ರದ ಮೂಲಕ ಹೆಬ್ಬೆರಳಿನ ಗುರುತು ನೀಡಿ ದೃಢೀಕರಣ ಮಾಡಬಹುದು.

  • ಡೆಲಿವರಿ ಸಿಬ್ಬಂದಿ ಮೂಲಕ: ಸಿಲಿಂಡರ್ ತಲುಪಿಸಲು ಮನೆಗೆ ಬರುವ ಡೆಲಿವರಿ ಸಿಬ್ಬಂದಿ ಬಳಿ ಇರುವ ಮೊಬೈಲ್ ಆ್ಯಪ್ ಸಹಾಯದಿಂದಲೂ ಸ್ಥಳದಲ್ಲೇ ಇ-ಕೆವೈಸಿ ಮುಗಿಸಬಹುದು.

  • ಮೊಬೈಲ್ ಆ್ಯಪ್ಸ್ (ಸ್ವತಃ ಮಾಡಿಕೊಳ್ಳಿ): ಆಯಾ ತೈಲ ಕಂಪನಿಗಳ ಅಧಿಕೃತ ಆ್ಯಪ್‌ಗಳಾದ IndianOil ONE (ಇಂಡೇನ್ ಗ್ರಾಹಕರಿಗೆ), HelloBPCL (ಭಾರತ್ ಗ್ಯಾಸ್) ಅಥವಾ HP PAY (ಎಚ್‌ಪಿ ಗ್ಯಾಸ್) ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಆಧಾರ್ ಫೇಸ್ ಆರ್​ಡಿ ಆ್ಯಪ್ ಸಹಾಯದೊಂದಿಗೆ ಮುಖದ ಗುರುತು ನೀಡಿ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು.

LPG Cylinder
2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com