Indian Stock Market ಮಹಾ ಕುಸಿತ; Sensex 1,124 ಅಂಕ ಕುಸಿತ, ಗಂಟೆಯಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!

ಷೇರುಪೇಟೆಯ ಎಲ್ಲ 16 ಪ್ರಮುಖ ವಲಯಗಳೂ ಕೆಂಪಿನಲ್ಲಿ ವಹಿವಾಟು ನಡೆಸುತ್ತಿದ್ದವು. ವಿಶಾಲ ಮಾರುಕಟ್ಟೆಯ ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕಗಳು ತಲಾ ಶೇ.1.43ರಷ್ಟು ಕುಸಿದವು.
Indian Stock Market
ಷೇರು ಮಾರುಕಟ್ಟೆ ಕುಸಿತ
Updated on: 

ಮುಂಬೈ: ವಾರದ ಮೊದಲ ದಿನವೇ ಭಾರತೀಯ ಷೇರುಮಾರುಕಟ್ಟೆ ಮಹಾ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ1.52ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.56ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 1,124.02ಅಂಕಗಳ ಕುಸಿತದೊಂದಿಗೆ 72,771.72 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 360.25 ಅಂಕಗಳ ಇಳಿಕೆಯೊಂದಿಗೆ 22,780.25 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಷೇರುಪೇಟೆಯ ಎಲ್ಲ 16 ಪ್ರಮುಖ ವಲಯಗಳೂ ಕೆಂಪಿನಲ್ಲಿ ವಹಿವಾಟು ನಡೆಸುತ್ತಿದ್ದವು. ವಿಶಾಲ ಮಾರುಕಟ್ಟೆಯ ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕಗಳು ತಲಾ ಶೇ.1.43ರಷ್ಟು ಕುಸಿದವು.

Indian Stock Market
ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

ಸತತ 6ನೇ ವಾರವೂ ಕುಸಿತ

ನಿಫ್ಟಿ ಮತ್ತು ಸೆನ್ಸೆಕ್ಸ್ ಸತತ ಏಳು ವಾರಗಳಿಂದ ಕುಸಿತ ದಾಖಲಿಸಿದ್ದು, ಈ ಅವಧಿಯಲ್ಲಿ ಸುಮಾರು ಶೇ.6ರಷ್ಟು ಇಳಿಕೆಯಾಗಿವೆ. ಇದು ಎರಡೂ ಸೂಚ್ಯಂಕಗಳ ಇತಿಹಾಸದಲ್ಲಿನ ದೀರ್ಘಾವಧಿಯ ಸತತ ವಾರದ ಕುಸಿತಗಳ ಪೈಕಿ ಒಂದಾಗಿದೆ.

ಹೂಡಿಕೆದಾರರ 8 ಲಕ್ಷ ಕೋಟಿ ರೂ ನಷ್ಟ

ಇಂದಿನ ಮಹಾ ಕುಸಿತದ ಬಳಿಕ ಹೂಡಿಕೆದಾರರ ಸುಮಾರು 8 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ಹೇಳಲಾಗಿದೆ. ಷೇರುಪೇಟೆ ಆರಂಭವಾದಾಗ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣ ಸುಮಾರು 4,82,16,004 ಕೋಟಿ ಇತ್ತು.

ಆದರೆ ಬೆಳಗ್ಗೆ 10.15ರ ವೇಳೆಗೆ ಈ ಮೌಲ್ಯ 4,77,19,611 ಕೋಟಿ ರೂಗೆ ಕುಸಿದಿತ್ತು. ಇದರಿಂದ ಒಂದೇ ಗಂಟೆಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ಬರೊಬ್ಬರಿ ಸುಮಾರು 4.9 ಲಕ್ಷ ಕೋಟಿ ರೂ ಕರಗಿದೆ ಎನ್ನಲಾಗಿದೆ.

ಅಂತೆಯೇ ದಿನದ ಅಂತ್ಯಕ್ಕೆ ಈ ನಷ್ಟದ ಪ್ರಮಾಣ 8 ಲಕ್ಷ ಕೋಟಿಗೇರಿದೆ ಎಂದು ಹೇಳಲಾಗಿದೆ.

Indian Stock Market
ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಮಹಾ ಕುಸಿತಕ್ಕೆ ಕಾರಣಗಳೇನು?

ತಜ್ಞರ ಪ್ರಕಾರ, ಮಾರುಕಟ್ಟೆಯ ಈ ತೀವ್ರ ಕುಸಿತಕ್ಕೆ ಒಂದೇ ಒಂದು ಕಾರಣವಿಲ್ಲ. ಹಲವು ಜಾಗತಿಕ ಹಾಗೂ ದೇಶೀಯ ಅಂಶಗಳು ಒಟ್ಟಾಗಿ ಷೇರುಪೇಟೆಯ ಮೇಲೆ ಪರಿಣಾಮ ಬೀರಿವೆ. ಈ ಭಾರಿ ಕುಸಿತಕ್ಕೂ ಮುನ್ನವೇ ನಿಫ್ಟಿ ಮತ್ತು ಸೆನ್ಸೆಕ್ಸ್ ಸತತ ಏಳನೇ ವಾರವೂ ಇಳಿಕೆ ದಾಖಲಿಸಿದ್ದವು.

ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕದ ಬಾಂಡ್‌ಗಳ ಇಳುವರಿ ಹೆಚ್ಚಳ ಹಾಗೂ ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳ ಮಾರಾಟ ಮಾಡುತ್ತಿರುವುದು ಭಾರತೀಯ ಷೇರುಪೇಟೆಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

ಇಂದಿನ ವಹಿವಾಟಿನಲ್ಲಿ ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ತಲಾ ಶೇ.1.6ರಷ್ಟು ಕುಸಿದವು. ಪ್ರಮುಖ ಖಾಸಗಿ ಬ್ಯಾಂಕ್‌ಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಶೇ.1.8ರಷ್ಟು ಕುಸಿದರೆ, ಐಸಿಐಸಿಐ ಬ್ಯಾಂಕ್ ಷೇರು ಶೇ.1.7ರಷ್ಟು ಇಳಿಕೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com