SSLC ಪಾಸಾಗಿರುವ ಮಹಿಳೆಯರಿಗೆ ಗುಡ್ ನ್ಯೂಸ್; ಯಾವುದೇ ಪರೀಕ್ಷೆ ಇಲ್ಲದೆ ಕೆಲಸ, ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟಲ್ ಸಖಿ ಹುದ್ದೆಗೆ ಅರ್ಜಿ ಆಹ್ವಾನ

ಮಂಡ್ಯ ಗ್ರಾಮೀಣ ಭಾಗದ SSLC ಪಾಸಾದ ಮಹಿಳೆಯರಿಗೆ ಪರೀಕ್ಷೆಯಿಲ್ಲದ ಪೋಸ್ಟಲ್ ಸಖಿ ಉದ್ಯೋಗ; ಭಾರತೀಯ ಅಂಚೆ ಇಲಾಖೆಯಿಂದ ನೇರ ಸಂದರ್ಶನದ ಮೂಲಕ ನೇಮಕಾತಿ. ಆ ಕುರಿತ ವರದಿ ಇಲ್ಲಿದೆ:
Postal Women
ಪೋಸ್ಟಲ್ ಸಖಿ
Updated on

10ನೇ ತರಗತಿ ಪಾಸಾಗಿರುವ ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರಿಗೆ ಭಾರತೀಯ ಅಂಚೆ ಇಲಾಖೆಯು ಒಂದು ಭರ್ಜರಿ ಉದ್ಯೋಗಾವಕಾಶವನ್ನು ತಂದಿದೆ. ಹೌದು, ಪೋಸ್ಟಲ್ ಸಖಿ ಯೋಜನೆಯಡಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ SSLC ಪಾಸಾಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

  • ಪೋಸ್ಟಲ್ ಸಖಿ ಉದ್ಯೋಗದ ಸ್ಥಳ: ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶಗಳು

  • ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 50 ವರ್ಷ ಒಳಗಿರಬೇಕು.

  • ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ ಕಡ್ಡಾಯವಾಗಿ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.

  • ಆಯ್ಕೆ ವಿಧಾನ: ಯಾವುದೇ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಅಭ್ಯರ್ಥಿಗಳು ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದ ಸ್ಥಳೀಯ ನಿವಾಸಿಗಳಾಗಿರಬೇಕು.

  • ಕರ್ನಾಟಕ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ರಚನೆಯಾಗಿರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಈ 'ಪೋಸ್ಟಲ್ ಸಖಿ' ಯೋಜನೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

  • ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಚೆನ್ನಾಗಿ ತಿಳಿದಿರಬೇಕು.

Postal Women
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; 15,000 ಶಿಕ್ಷಕರ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟ

ಸಂದರ್ಶನಕ್ಕೆ ತರಬೇಕಾದ ಅಗತ್ಯ ದಾಖಲೆಗಳು:

  • ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಕೆಳಗಿನ ದಾಖಲೆಗಳ ಮೂಲ ಪ್ರತಿ ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಯನ್ನು ಕೊಂಡೊಯ್ಯಬೇಕು:

  • 10ನೇ ತರಗತಿ ಅಂಕಪಟ್ಟಿ

  • ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ (ಗುರುತಿನ ಚೀಟಿ)

  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಫೋಟೋಗಳು

  • ವಾಸಸ್ಥಳ ದೃಢೀಕರಣ ಪತ್ರ (ಸ್ವಸಹಾಯ ಸಂಘದ ವಿವರಗಳಿದ್ದರೆ ಉತ್ತಮ)

ಸಂದರ್ಶನ ನಡೆಯುವ ದಿನಾಂಕ: ಆಗಸ್ಟ್ 24, 2026

ಸಂದರ್ಶನದ ಸ್ಥಳ: ಅಧೀಕ್ಷಕರ ಕಚೇರಿ, ಮಂಡ್ಯ ಪ್ರಧಾನ ಅಂಚೆ ಕಚೇರಿ

Postal Women
Bangalore University: ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ; ಭರ್ಜರಿ ಸಂಬಳ

ಈ ಪೋಸ್ಟಲ್ ಸಖಿ ಎಂದರೆ ಯಾರು?

  • ಗ್ರಾಮೀಣ ಮಹಿಳೆಯರು: ಇವರು ಸಾಮಾನ್ಯವಾಗಿ ಗ್ರಾಮೀಣ ಭಾಗದ 'ಸ್ವಸಹಾಯ ಸಂಘಗಳ' ಸಕ್ರಿಯ ಮಹಿಳಾ ಸದಸ್ಯರಾಗಿರುತ್ತಾರೆ.

  • ಬ್ಯಾಂಕಿಂಗ್ ಪ್ರತಿನಿಧಿ: ಇವರಿಗೆ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ವಿಶೇಷ ತರಬೇತಿ ಮತ್ತು ಮೈಕ್ರೋ ಎಟಿಎಂ ಯಂತ್ರಗಳನ್ನು ನೀಡಲಾಗಿರುತ್ತದೆ.

ಇವರ ಮುಖ್ಯ ಕೆಲಸಗಳೇನು?

  • ಮನೆ ಬಾಗಿಲಿಗೆ ಬ್ಯಾಂಕಿಂಗ್: ಬ್ಯಾಂಕ್‌ಗಳಿಗೆ ಹೋಗಲು ಕಷ್ಟಪಡುವ ಹಿರಿಯ ನಾಗರಿಕರು ಮತ್ತು ಮಹಿಳೆಯರ ಮನೆಗೇ ಹೋಗಿ ಹಣ ಜಮಾ ಮಾಡುವುದು ಮತ್ತು ಹಣ ಡ್ರಾ ಮಾಡಿಕೊಡುವುದು.

  • ಸರಕಾರಿ ಯೋಜನೆಗಳ ಹಣ ವಿತರಣೆ: ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು VB-G RAM G ಕೂಲಿ ಹಣವನ್ನು ಜನರ ಕೈಗೆ ತಲುಪಿಸುವುದು.

  • ಖಾತೆ ತೆರೆಯುವುದು: ಗ್ರಾಮೀಣ ಜನರಿಗೆ ಸುಲಭವಾಗಿ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆಗಳನ್ನು ತೆರೆದುಕೊಡುವುದು.

  • ವಿಮೆ ಮತ್ತು ಬಿಲ್ ಪಾವತಿ: ಮೊಬೈಲ್ ರೀಚಾರ್ಜ್, ಕರೆಂಟ್ ಬಿಲ್ ಪಾವತಿ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಪ್ರಚಾರ ಮಾಡುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com