ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; 15,000 ಶಿಕ್ಷಕರ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟ

Karnataka Teacher Recruitment 2026: ಸರ್ಕಾರಿ ಶಾಲಾ ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಶಾಲಾ ಶಿಕ್ಷಣಇಲಾಖೆಯು ರಾಜ್ಯಾದ್ಯಂತ ಖಾಲಿ ಇರುವ 15000 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಚಾಲನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ.
Teacher Job
ಶಾಲಾ ಶಿಕ್ಷಕಿ
Updated on

Karnataka Teacher Recruitment 2026: ಸರ್ಕಾರಿ ಉದ್ಯೋಗ ಪಡೆಯಬೇಕು, ಶಾಲಾ ಮಕ್ಕಳಿಗೆ ಪಾಠ ಮಾಡಿ ಭವಿಷ್ಯ ರೂಪಿಸಬೇಕು ಎಂದು ಕನಸು ಕಾಣುತ್ತಿರುವ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಶಿಕ್ಷಣ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ.

ಹುದ್ದೆಗಳ ವಿವರ:

  • ಒಟ್ಟು 15,000 ಹುದ್ದೆಗಳು

  • ಕಲ್ಯಾಣ ಕರ್ನಾಟಕ ಭಾಗ (6,967 ಹುದ್ದೆಗಳು)

    • ಪದವೀಧರ ಪ್ರಾಥಮಿಕ ಶಿಕ್ಷಕರು (GPT - 6 ರಿಂದ 8ನೇ ತರಗತಿ): 3,228

    • ಪ್ರೌಢಶಾಲಾ ಸಹ ಶಿಕ್ಷಕರು: 2,214

    • ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ): 800

    • ದೈಹಿಕ ಶಿಕ್ಷಣ ಶಿಕ್ಷಕರು: 425

    • ಗಣಕಯಂತ್ರ ವಿಜ್ಞಾನ ಶಿಕ್ಷಕರು: 300

  • ಕಲ್ಯಾಣೇತರ / ಉಳಿದ ಮೂಲ ವೃಂದದ ಭಾಗ (8,033 ಹುದ್ದೆಗಳು)

    • ಪದವೀಧರ ಪ್ರಾಥಮಿಕ ಶಿಕ್ಷಕರು (GPT - 6 ರಿಂದ 8ನೇ ತರಗತಿ): 5,272

    • ಪ್ರೌಢಶಾಲಾ ಸಹ ಶಿಕ್ಷಕರು: 2,286

    • ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ): 100

    • ದೈಹಿಕ ಶಿಕ್ಷಣ ಶಿಕ್ಷಕರು: 175

    • ಗಣಕಯಂತ್ರ ವಿಜ್ಞಾನ ಶಿಕ್ಷಕರು: 200

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 18-08-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-09-2026

  • ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ)

Teacher Job
ಶಿಕ್ಷಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ವಸತಿ ಶಾಲೆಗಳಲ್ಲಿ 1,087 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಅರ್ಹತೆ:

  • ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ವಿಷಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

  • ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸು ಕಡ್ಡಾಯ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂಪಾಯಿ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ 500 ರೂಪಾಯಿ

Teacher Job
KPSCಯಿಂದ ಭರ್ಜರಿ ಉದ್ಯೋಗಾವಕಾಶ; 319 KAS ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ
Teacher Job
ಶಾಲಾ ಶಿಕ್ಷಕಿ

ಅರ್ಜಿ ಸಲ್ಲಿಸುವುದು ಹೇಗೆ?

  • ಆನ್‌ಲೈನ್ ಅರ್ಜಿ: ಅರ್ಜಿಗಳನ್ನುಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.

  • ಖಾತೆ ಸೃಷ್ಟಿ: ಅರ್ಜಿ ಸಲ್ಲಿಸುವಾಗ ರಚಿಸುವ User Name ಮತ್ತು Password ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಮಾಡಲು ಇವು ಅಗತ್ಯ.

  • ಅರ್ಜಿ ಶುಲ್ಕ: ಶುಲ್ಕವನ್ನು Internet Banking, Credit Card, Debit Card ಅಥವಾ ನೆಟ್‌ವರ್ಕಿಂಗ್ ಚಲನ್ ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬೇಕು.

  • ಅರ್ಜಿ ಸಲ್ಲಿಸುವ ನಿಯಮ (ನಿಯಮ iv & v):

  • ಒಬ್ಬ ಅಭ್ಯರ್ಥಿಯು ಒಂದು ವೃಂದದ (Cadre) ಒಂದು ಹುದ್ದೆಗೆ ಒಂದು ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಆದರೆ, ಅಭ್ಯರ್ಥಿಯು ಅರ್ಹತೆ ಹೊಂದಿದ್ದರೆ ಬೇರೆ ಬೇರೆ ವೃಂದಗಳ (ಉದಾ: PST, GPSTR, HSTR) ವಿವಿಧ ಹುದ್ದೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.

  • ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://erajyapatra.karnataka.gov.in/(S(nqx2j5bupd24y5umblxhrwe2))/RecentUploads.aspx?Category=6

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com