

ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ಸಂಸ್ಥೆ: ಭಾರತದ ಸರ್ವೋಚ್ಚ ನ್ಯಾಯಾಲಯ
ಹುದ್ದೆಯ ಹೆಸರು: ಜೂನಿಯರ್ ಕೋರ್ಟ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು: 250 (ತಾತ್ಕಾಲಿಕ)
ಕೆಲಸದ ಸ್ಥಳ: ನವದೆಹಲಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 7 ಅಕ್ಟೋಬರ್ 2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಅಕ್ಟೋಬರ್ 2026 (ರಾತ್ರಿ 11:55 ರವರೆಗೆ).
ಪರೀಕ್ಷೆಯ ದಿನಾಂಕ: 20 ನವೆಂಬರ್ 2026 (ತಾತ್ಕಾಲಿಕ).
ಸಂಬಳ:
ಪೇ ಮ್ಯಾಟ್ರಿಕ್ಸ್ ಲೆವೆಲ್ 6 ರ ಅಡಿಯಲ್ಲಿ 35,400 ರೂ. ಆರಂಭಿಕ ಮೂಲ ವೇತನ ಇರಲಿದ್ದು, ಭತ್ಯೆಗಳು ಸೇರಿದರೆ ಮಾಸಿಕ ಒಟ್ಟು ವೇತನ ಸುಮಾರು 72,000 ರೂ. ವರೆಗೆ ಸಿಗಲಿದೆ.
ಅರ್ಹತೆ:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್ ಆಗಿರಬೇಕು.
ಹೆಚ್ಚುವರಿ ಕೌಶಲ್ಯ: ಕಂಪ್ಯೂಟರ್ ಆಪರೇಷನ್ ಜ್ಞಾನ ಮತ್ತು ಕಂಪ್ಯೂಟರ್‌ನಲ್ಲಿ ಪ್ರತಿ ನಿಮಿಷಕ್ಕೆ ಕನಿಷ್ಠ 35 ಪದಗಳ ಇಂಗ್ಲಿಷ್ ಟೈಪಿಂಗ್ ವೇಗ ಹೊಂದಿರಬೇಕು.
ವಯೋಮಿತಿ: 1 ಸೆಪ್ಟೆಂಬರ್ 2026 ಕ್ಕೆ ಅನ್ವಯಿಸುವಂತೆ 18 ರಿಂದ 30 ವರ್ಷ ಒಳಗಿರಬೇಕು. (SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ನಿಗದಿತ ಅಳತೆಯ ಸ್ಕ್ಯಾನ್ ಮಾಡಿದ ಭಾವಚಿತ್ರ ಮತ್ತು ಸಹಿ.
10ನೇ ತರಗತಿ, ಪಿಯುಸಿ (12ನೇ ತರಗತಿ) ಮತ್ತು ಪದವಿ ಅಂಕಪಟ್ಟಿ/ಪ್ರಮಾಣಪತ್ರಗಳು.
ಜಾತಿ ಅಥವಾ ಅಂಗವಿಕಲತೆ (PwD) ಪ್ರಮಾಣಪತ್ರ (ಅನ್ವಯಿಸಿದರೆ).
ಹಾಲಿ ಉದ್ಯೋಗದಲ್ಲಿದ್ದರೆ ನಿರಾಕ್ಷೇಪಣಾ ಪತ್ರ (NOC).
ಅರ್ಜಿ ಶುಲ್ಕವನ್ನು ಅಧಿಕೃತ ಪೋರ್ಟಲ್‌ನಲ್ಲಿ ಯುಸಿಒ ಬ್ಯಾಂಕ್ (UCO Bank) ಪಾವತಿ ಗೇಟ್‌ವೇ ಮೂಲಕ ಪಾವತಿಸಬೇಕು.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ: ₹1,500
SC, ST, ಮಾಜಿ ಸೈನಿಕರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ₹750
ಬೆಂಗಳೂರಿನಲ್ಲೇ ಕೇಂದ್ರ ಸರ್ಕಾರದ ಹುದ್ದೆ: ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ; ₹2 ಲಕ್ಷ ಸಂಬಳ, ಅರ್ಜಿ ಶುಲ್ಕವಿಲ್ಲ!ಆಯ್ಕೆ ಪ್ರಕ್ರಿಯೆಯ ಹಂತಗಳು:
ಅಭ್ಯರ್ಥಿಗಳನ್ನು ಒಟ್ಟು 4 ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಆಬ್ಜೆಕ್ಟಿವ್ ಟೈಪ್ ಪರೀಕ್ಷೆ: 100 ಅಂಕಗಳು
ಕಂಪ್ಯೂಟರ್ ಟೈಪಿಂಗ್ ಟೆಸ್ಟ್: 50 ಅಂಕಗಳು
ಡಿಸ್ಕ್ರಿಪ್ಟಿವ್ ಲಿಖಿತ ಪರೀಕ್ಷೆ: 100 ಅಂಕಗಳು
ಸಂದರ್ಶನ: 25 ಅಂಕಗಳು
(ಗಮನಿಸಿ: ಮೊದಲ ಹಂತದ ಲಿಖಿತ ಪರೀಕ್ಷೆಗಾಗಿ ರಾಜ್ಯದ ಪ್ರಮುಖ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ., ಇನ್ನುಳಿದ ಟೈಪಿಂಗ್, ಡಿಸ್ಕ್ರಿಪ್ಟಿವ್ ಮತ್ತು ಸಂದರ್ಶನಗಳು ದೆಹಲಿ/ಎನ್‌ಸಿಆರ್ ಪ್ರದೇಶದಲ್ಲಿ ನಡೆಯಲಿವೆ).
ಅರ್ಜಿ ಸಲ್ಲಿಸುವ ಲಿಂಕ್:
ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ www.sci.gov.in ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಂಚೆ ಮೂಲಕ ಕಳುಹಿಸಲಾದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.