ಪಿಯುಸಿ, ಪದವೀಧರರಿಗೆ ಸುವರ್ಣಾವಕಾಶ: 33 ಇಲಾಖೆಗಳಲ್ಲಿ 5,431 ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ KEA ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ 33 ಇಲಾಖೆಗಳು, ಮಂಡಳಿ ಹಾಗೂ ನಿಗಮಗಳಲ್ಲಿ ಖಾಲಿ ಇರುವ ಒಟ್ಟು 5,431 FDA ಮತ್ತು SDA ಸೇರಿದಂತೆ ವಿವಿಧ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
KEA Recruitment 2026: Official Notification Out for 5,431 FDA, SDA and Group C Posts in Karnataka
ಕೆಇಎ ಇಂದ ಬರೋಬ್ಬರಿ 5,431 ಹುದ್ದೆಗಳ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟ!AI Image
Updated on: 

ಬೆಂಗಳೂರು: ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ರಾಜ್ಯದ ನಿರುದ್ಯೋಗಿ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬಹುದೊಡ್ಡ ದೀಪಾವಳಿ ಉಡುಗೊರೆ ನೀಡಿದೆ. ಬರೋಬ್ಬರಿ 33 ಪ್ರಮುಖ ಸರ್ಕಾರಿ ಇಲಾಖೆಗಳು, ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ 5,400ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಬಿದ್ದಿದ್ದು, ಪಿಯುಸಿ ಪಾಸಾದವರಿಂದ ಹಿಡಿದು ಪದವೀಧರರವರೆಗೂ ಉದ್ಯೋಗಾವಕಾಶಗಳ ಬಾಗಿಲು ತೆರೆದಿದೆ. ವಯೋಮಿತಿ ಸಡಿಲಿಕೆ, ಪರೀಕ್ಷಾ ದಿನಾಂಕ ಹಾಗೂ ಇಲಾಖಾವಾರು ಹುದ್ದೆಗಳ ಹಂಚಿಕೆಯ ಸಂಪೂರ್ಣ ವಿವರ ಇಲ್ಲಿದೆ:

ಹುದ್ದೆಗಳ ವಿವರ:

ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

ಒಟ್ಟು ಹುದ್ದೆಗಳ ಸಂಖ್ಯೆ: 5,431 ಹುದ್ದೆಗಳು

  • ಉಳಿಕೆ ಮೂಲ ವೃಂದ (RPC): 2,163 ಪ್ರಥಮ ದರ್ಜೆ ಸಹಾಯಕ (FDA) ಮಟ್ಟದ ಹುದ್ದೆಗಳು ಹಾಗೂ 2,070 ದ್ವಿತೀಯ ದರ್ಜೆ ಸಹಾಯಕ (SDA) ಮಟ್ಟದ ಹುದ್ದೆಗಳು

  • ಕಲ್ಯಾಣ ಕರ್ನಾಟಕ ವೃಂದ (KK): 563 ಪ್ರಥಮ ದರ್ಜೆ ಸಹಾಯಕ (FDA) ಹಾಗೂ 635 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳು

  • ಯಾವೆಲ್ಲಾ ಇಲಾಖೆಗಳಲ್ಲಿ ಯಾವ ಹುದ್ದೆಗಳಿವೆ?

    • ದ್ವಿತೀಯ ಪಿಯುಸಿ / 12ನೇ ತರಗತಿ ಮಟ್ಟದ ಪ್ರಮುಖ ಹುದ್ದೆಗಳು (ಒಟ್ಟು 2,070):

      • ನ್ಯಾಯಾಂಗ ಇಲಾಖೆ: ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಎಸ್‌ಡಿಎ – 522 ಹುದ್ದೆಗಳು

      • ವಾಣಿಜ್ಯ ತೆರಿಗೆಗಳ ಇಲಾಖೆ: ಎಸ್‌ಡಿಎ – 500 ಹುದ್ದೆಗಳು

      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 – 284 ಹುದ್ದೆಗಳು

      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಎಸ್‌ಡಿಎ – 200 ಹುದ್ದೆಗಳು

      • ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ: ಕಿರಿಯ ಲೆಕ್ಕ ಸಹಾಯಕರು – 130 ಹುದ್ದೆಗಳು

      • ಗ್ರಾಮ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ – 68 ಹುದ್ದೆಗಳು

      • ಇಎಸ್‌ಐ (ESI) ಯೋಜನೆ: ದ್ವಿತೀಯ ದರ್ಜೆ ಸಹಾಯಕರು (48) + ರೆಕಾರ್ಡ್ ಸಾರ್ಟರ್ (12) – 60 ಹುದ್ದೆಗಳು

      • ಅರಣ್ಯ ಇಲಾಖೆ: ಎಸ್‌ಡಿಎ – 45 ಹುದ್ದೆಗಳು

      • ನೋಂದಣಿ ಮತ್ತು ಮುದ್ರಾಂಕ ಇಲಾಖೆ: ಎಸ್‌ಡಿಎ – 38 ಹುದ್ದೆಗಳು

      • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ಎಸ್‌ಡಿಎ – 31 ಹುದ್ದೆಗಳು

      • ಕರ್ನಾಟಕ ಲೋಕಾಯುಕ್ತ: ಎಸ್‌ಡಿಎ – 28 ಹುದ್ದೆಗಳು

      • ಸಾರಿಗೆ ಇಲಾಖೆ: ಎಸ್‌ಡಿಎ – 24 ಹುದ್ದೆಗಳು

      • ಕೆಪಿಎಸ್‌ಸಿ (KPSC): ಕಿರಿಯ ಸಹಾಯಕರು – 21 ಹುದ್ದೆಗಳು

      • ಸಮಾಜ ಕಲ್ಯಾಣ ಇಲಾಖೆ: ಎಸ್‌ಡಿಎ – 20 ಹುದ್ದೆಗಳು

      • ಕಾರ್ಮಿಕ ಇಲಾಖೆ: ಎಸ್‌ಡಿಎ – 17 ಹುದ್ದೆಗಳು

      • ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ: ಎಸ್‌ಡಿಎ – 15 ಹುದ್ದೆಗಳು

      • ಕರ್ನಾಟಕ ಗೃಹ ಮಂಡಳಿ (KHB): ಎಸ್‌ಡಿಎ – 15 ಹುದ್ದೆಗಳು

      • ಕೆಐಎಡಿಬಿ (KIADB): ಕಿರಿಯ ಸಹಾಯಕರು – 15 ಹುದ್ದೆಗಳು

      • ಕೆಆರ್‌ಐಡಿಎಲ್ (KRIDL): ಎಸ್‌ಡಿಎ – 15 ಹುದ್ದೆಗಳು

      • ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ: ಎಸ್‌ಡಿಎ – 10 ಹುದ್ದೆಗಳು

      • ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ಪ್ರವರ್ತಕರು – 06 ಹುದ್ದೆಗಳು

      • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: ಎಸ್‌ಡಿಎ – 04 ಹುದ್ದೆಗಳು

      • ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ: ಎಸ್‌ಡಿಎ – 02 ಹುದ್ದೆಗಳು

    • ಪದವಿ ಮಟ್ಟದ ಪ್ರಮುಖ ಹುದ್ದೆಗಳು - ಉಳಿಕೆ ಮೂಲ ವೃಂದ (ಒಟ್ಟು 2,163):

      • ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ: ಲೆಕ್ಕ ಸಹಾಯಕರು (B.Com/BBM/BBA) – 490 ಹುದ್ದೆಗಳು

      • ಸಮಾಜ ಕಲ್ಯಾಣ ಇಲಾಖೆ: ವಾರ್ಡನ್ (ಪುರುಷ 294, ಮಹಿಳೆ 31) – 325 ಹುದ್ದೆಗಳು

      • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD): ಹಾಸ್ಟೆಲ್ ನಿಲಯ ಮೇಲ್ವಿಚಾರಕರು (ಪುರುಷ 180, ಮಹಿಳೆ 100) – 280 ಹುದ್ದೆಗಳು

      • ನ್ಯಾಯಾಂಗ ಇಲಾಖೆ: ವಿವಿಧ ನ್ಯಾಯಾಲಯಗಳಲ್ಲಿ ಪ್ರಥಮ ದರ್ಜೆ ಸಹಾಯಕರು – 249 ಹುದ್ದೆಗಳು

      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್-1 (135) + ಜಿ.ಪಂ/ತಾ.ಪಂ ಎಫ್‌ಡಿಎ (100) – 235 ಹುದ್ದೆಗಳು

      • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES): ಎಫ್‌ಡಿಎ ಕಂ ಕಂಪ್ಯೂಟರ್ ಆಪರೇಟರ್ (79) + ನಿಲಯ ಪಾಲಕರು (78) – 157 ಹುದ್ದೆಗಳು

      • ವಾಣಿಜ್ಯ ತೆರಿಗೆಗಳ ಇಲಾಖೆ: ಎಫ್‌ಡಿಎ (56) + ವಾಣಿಜ್ಯ ತೆರಿಗೆ ಪರಿವೀಕ್ಷಕರು (CTI - 48) – 104 ಹುದ್ದೆಗಳು

      • ಕೃಷಿ ಇಲಾಖೆ: ಪ್ರಥಮ ದರ್ಜೆ ಸಹಾಯಕರು – 50 ಹುದ್ದೆಗಳು

      • ಅರಣ್ಯ ಇಲಾಖೆ: ಪ್ರಥಮ ದರ್ಜೆ ಸಹಾಯಕರು – 36 ಹುದ್ದೆಗಳು

      • ಕರ್ನಾಟಕ ಸರ್ಕಾರ ಸಚಿವಾಲಯ: ಸಹಾಯಕರು – 32 ಹುದ್ದೆಗಳು

      • ಕೆಪಿಎಸ್‌ಸಿ ಮತ್ತು ಲೋಕಾಯುಕ್ತ: ಸಹಾಯಕರು (15) + ಎಫ್‌ಡಿಎ (13) – 28 ಹುದ್ದೆಗಳು

      • ನೋಂದಣಿ ಮತ್ತು ಮುದ್ರಾಂಕ ಇಲಾಖೆ: ಉಪ ನೋಂದಣಾಧಿಕಾರಿ (17) + ಎಫ್‌ಡಿಎ (07) – 24 ಹುದ್ದೆಗಳು

      • ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ: ಲೆಕ್ಕಪರಿಶೋಧಕರು – 23 ಹುದ್ದೆಗಳು

      • ಕೆಐಎಡಿಬಿ (KIADB): ಸಹಾಯಕರು – 20 ಹುದ್ದೆಗಳು

      • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ಪ್ರಥಮ ದರ್ಜೆ ಸಹಾಯಕರು – 17 ಹುದ್ದೆಗಳು

      • ಇತರೆ ಇಲಾಖೆಗಳು (ಕಾರ್ಮಿಕ, ಕೈಗಾರಿಕೆ, ಪ್ರವಾಸೋದ್ಯಮ, ಗೃಹ ಮಂಡಳಿ ಇತ್ಯಾದಿ): 65ಕ್ಕೂ ಹೆಚ್ಚು ಹುದ್ದೆಗಳು

    • ಪದವಿ ಮಟ್ಟದ ಹುದ್ದೆಗಳು - ಕಲ್ಯಾಣ ಕರ್ನಾಟಕ ವೃಂದ (ಒಟ್ಟು 563):

      • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಹಾಸ್ಟೆಲ್ ನಿಲಯ ಮೇಲ್ವಿಚಾರಕರು (ಪುರುಷ 94, ಮಹಿಳೆ 12) – 106 ಹುದ್ದೆಗಳು

      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1 (49) + ಜಿ.ಪಂ/ತಾ.ಪಂ ಎಫ್‌ಡಿಎ (48) – 97 ಹುದ್ದೆಗಳು

      • ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES): ನಿಲಯ ಪಾಲಕರು (28) + ಎಫ್‌ಡಿಎ ಕಂ ಕಂಪ್ಯೂಟರ್ ಆಪರೇಟರ್ (25) – 53 ಹುದ್ದೆಗಳು

      • ಪೌರಾಡಳಿತ ನಿರ್ದೇಶನಾಲಯ: ಎಫ್‌ಡಿಎ (15), ಕಂದಾಯ ನಿರೀಕ್ಷಕರು (15), ಮುಖ್ಯಾಧಿಕಾರಿ ಗ್ರೇಡ್-2 (12), ಲೆಕ್ಕಿಗರು (05) – 52 ಹುದ್ದೆಗಳು

      • ಅರಣ್ಯ ಇಲಾಖೆ & ಸಮಾಜ ಕಲ್ಯಾಣ ಇಲಾಖೆ: ಎಫ್‌ಡಿಎ (26) + ವಾರ್ಡನ್ ಪುರುಷ (25) – 51 ಹುದ್ದೆಗಳು

      • ನ್ಯಾಯಾಂಗ ಇಲಾಖೆ: ಕಲ್ಯಾಣ ಕರ್ನಾಟಕ ಜಿಲ್ಲಾ ನ್ಯಾಯಾಲಯಗಳಲ್ಲಿ ಎಫ್‌ಡಿಎ – 33 ಹುದ್ದೆಗಳು

      • ಸಹಕಾರ ಸಂಘಗಳ ಇಲಾಖೆ: ಲೆಕ್ಕಪರಿಶೋಧಕರು (27) + ಎಫ್‌ಡಿಎ (06) – 33 ಹುದ್ದೆಗಳು

      • ಕೃಷಿ ಮಾರಾಟ ಮತ್ತು ಕೃಷಿ ಇಲಾಖೆ: ಎಫ್‌ಡಿಎ ಹುದ್ದೆಗಳು – 26 ಹುದ್ದೆಗಳು

      • ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ: ಲೆಕ್ಕ ಸಹಾಯಕರು – 12 ಹುದ್ದೆಗಳು

      • ಇತರೆ (ಆರ್ಥಿಕ, ಸಚಿವಾಲಯ, ವಾಣಿಜ್ಯ ತೆರಿಗೆ, ವಾರ್ತಾ ಇಲಾಖೆ): ವಿವಿಧ ಹುದ್ದೆಗಳು – 100 ಹುದ್ದೆಗಳು

KEA Recruitment 2026: Official Notification Out for 5,431 FDA, SDA and Group C Posts in Karnataka
SSLC, ITI, ಡಿಪ್ಲೊಮಾ ಆದವರಿಗೆ ISRO ಸುವರ್ಣಾವಕಾಶ! 97 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ವೇತನ ಎಷ್ಟು ಗೊತ್ತಾ?

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 30, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25, 2026

  • ಶುಲ್ಕ ಪಾವತಿಸಲು ಕೊನೆಯ ದಿನ: ನವೆಂಬರ್ 26, 2026

  • ಪರೀಕ್ಷೆ ನಡೆಯುವ ದಿನಾಂಕಗಳು: 2027ರ ಜನವರಿ 8, 9, 10, 16 ಮತ್ತು 17

ಅರ್ಹತೆ:

  • ವಿದ್ಯಾರ್ಹತೆ:

    • ಎಫ್‌ಡಿಎ ಹುದ್ದೆಗಳು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ

    • ಎಸ್‌ಡಿಎ ಹುದ್ದೆಗಳು: ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ (CBSE/ICSE 12ನೇ ತರಗತಿ, NIOS, ಎರಡು ವರ್ಷಗಳ ITI/JOC, ಅಥವಾ ಮೂರು ವರ್ಷಗಳ ಡಿಪ್ಲೊಮಾ)

    • ತಾಂತ್ರಿಕ ಹುದ್ದೆಗಳು: ಸಂಬಂಧಿಸಿದ ವಿಭಾಗದಲ್ಲಿ ನಿಗದಿತ ಡಿಪ್ಲೊಮಾ ವಿದ್ಯಾರ್ಹತೆ

  • ವಯೋಮಿತಿ:

    • ಕನಿಷ್ಠ ವಯಸ್ಸು: 18 ವರ್ಷ

    • ಸಾಮಾನ್ಯ ವರ್ಗ (GM) ಗರಿಷ್ಠ ವಯಸ್ಸು: 40 ವರ್ಷ (ಒಂದು ಬಾರಿಯ 5 ವರ್ಷಗಳ ವಯೋಮಿತಿ ಸಡಿಲಿಕೆ ಸೇರಿ)

    • ಪ್ರವರ್ಗ 2A, 2B, 3A, 3B ಗರಿಷ್ಠ ವಯಸ್ಸು: 43 ವರ್ಷ

    • SC, ST, ಪ್ರವರ್ಗ-1 ಗರಿಷ್ಠ ವಯಸ್ಸು: 45 ವರ್ಷ

ಸಂಬಳ:

  • ಎಫ್‌ಡಿಎ: ₹48,000 ದಿಂದ ₹99,400 (ಹುದ್ದೆಗಳಿಗೆ ಅನುಗುಣವಾಗಿ ಬದಲಾಗಲಿದೆ)

  • ಎಸ್‌ಡಿಎ: ₹36,000 ದಿಂದ ₹67,600 (ಹುದ್ದೆಗಳಿಗೆ ಅನುಗುಣವಾಗಿ ಬದಲಾಗಲಿದೆ)

ಪರೀಕ್ಷಾ ವಿಧಾನ:

  • ಪರೀಕ್ಷಾ ಮಾದರಿ: ಆಫ್‌ಲೈನ್ - ಒಎಂಆರ್ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು

  • ಋಣಾತ್ಮಕ ಮೌಲ್ಯಮಾಪನ: ಪ್ರತಿ ತಪ್ಪು ಉತ್ತರಕ್ಕೆ 0.25 (1/4) ಅಂಕ ಕಡಿತಗೊಳಿಸಲಾಗುತ್ತದೆ. ಉತ್ತರಿಸದ ಪ್ರಶ್ನೆಗಳಿಗೆ 5ನೇ ವೃತ್ತವನ್ನು ಶೇಡ್ ಮಾಡಬೇಕು, ಇಲ್ಲದಿದ್ದರೆ 0.25 ಅಂಕ ಕಡಿತವಾಗುತ್ತದೆ.

  • ಕನಿಷ್ಠ ಅರ್ಹತಾ ಅಂಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ. 35 ಅಂಕಗಳನ್ನು ಪಡೆಯುವುದು ಕಡ್ಡಾಯ.

  • ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: 150 ಅಂಕಗಳು, ಕನಿಷ್ಠ 50 ಅಂಕಗಳನ್ನು ಪಡೆಯುವುದು ಕಡ್ಡಾಯ (ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಕನ್ನಡ ಪ್ರಥಮ/ದ್ವಿತೀಯ ಭಾಷೆಯಾಗಿ ಓದಿದವರಿಗೆ ಇದರಿಂದ ವಿನಾಯಿತಿ ಇರುತ್ತದೆ).

  • ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಅಂಕಗಳು, 100 ಪ್ರಶ್ನೆಗಳು, 2 ಗಂಟೆ ಅವಧಿ.

  • ಪತ್ರಿಕೆ-2: 100 ಅಂಕಗಳು, 100 ಪ್ರಶ್ನೆಗಳು, 2 ಗಂಟೆ ಅವಧಿ.

ಆಯ್ಕೆ ಪ್ರಕ್ರಿಯೆ:

  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಹುದ್ದೆಗಳ ಆಯ್ಕೆ ಹಂಚಿಕೆ ನಡೆಯುತ್ತದೆ.

  • ಫಲಿತಾಂಶದ ನಂತರ ಅಭ್ಯರ್ಥಿಗಳಿಗೆ ಅಣುಕು ಹುದ್ದೆ ಹಂಚಿಕೆ ಹಾಗೂ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುತ್ತದೆ.

  • ಅಂತಿಮವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ.

KEA Recruitment 2026: Official Notification Out for 5,431 FDA, SDA and Group C Posts in Karnataka
ಐಟಿಐ ಪಾಸಾದವರಿಗೆ ನೌಕಾಪಡೆಯಲ್ಲಿ ಉದ್ಯೋಗ: ಕಾರವಾರ ನೇವಲ್ ಡಾಕ್‌ಯಾರ್ಡ್‌ನಲ್ಲಿ 210 ಹುದ್ದೆಗಳಿಗೆ ಅರ್ಜಿ ಆಹ್ವಾನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X