

ಮಾಧುರಿ ದೀಕ್ಷಿತ್ ಫೈಟ್ ಮಾಡಿದರೆ ಹೇಗಿರುತ್ತದೆ? 'ಆ್ಯಕ್ಷನ್ ಸಿನಿಮಾದಲ್ಲಿ ಮಾಧುರಿಯೇ' ಎಂದು ಮೂಗು ಮುರಿಯಬೇಡಿ. ಆಕೆ ಡಿಶುಂಡಿಶುಂ ಎಂದು ಸಖತ್ತಾಗಿ ಹೊಡೆದಾಡುವುದನ್ನು ತೆರೆ ಮೇಲೆ ನೋಡುವ ದಿನ ದೂರವಿಲ್ಲ.
ಸೌಮಿಕ್ ಸೇನ್ ಚೊಚ್ಚಲ ನಿರ್ದೇಶನದ 'ಗುಲಾಬ್ ಗ್ಯಾಂಗ್'ನಲ್ಲಿ ಮುಖ್ಯಪಾತ್ರ ವಹಿಸಿರುವ ಮಾಧುರಿ, ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಇಂಥ ಸನ್ನಿವೇಶಗಳಲ್ಲಿ ನಟಿಸುವಾಗ ಸಿಕ್ಕಾಪಟ್ಟೆ ಥ್ರಿಲ್ ಅನುಭವಿಸಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ. ಇನ್ನೊಂದು ವಿಶೇಷ ಎಂದರೆ ಇದೇ ಚಿತ್ರದ ಹಾಡಿಗಾಗಿ ತನ್ನ ತಾಯಿ ಜತೆ ದನಿಗೂಡಿಸಿದ್ದಳು ಮಾಧುರಿ.
ಸಂಪತ್ ಪಾಲ್ ಮತ್ತು ಅವರ ಗುಲಾಬಿ ಗ್ಯಾಂಗ್ ಕೈಗೊಂಡ ಮಹಿಳೆಯರ ಅಭಿವೃದ್ಧಿ ಕಾರ್ಯಗಳ ನೈಜಕಥೆಯ ಹಂದರವನ್ನು 'ಗುಲಾಬ್ ಗ್ಯಾಂಗ್' ಹೊಂದಿದೆ.