

ರಾಷ್ಟ್ರ ರಾಜಧಾನಿ ದೆಹಲಿ ಎಂದರೆ ಈಗೀಗ ಎಲ್ಲರೂ ಭಯ ಬೀಳುವಂತಾಗಿದೆ. ಮಹಿಳೆಯರಿಗಂತೂ ಅದು ಸುರಕ್ಷಿತ ತಾಣ ಅಲ್ಲವೇ ಅಲ್ಲ ಎನ್ನುವುದು ಮೇಲಿಂದ ಮೇಲೆ ದೃಢಪಡುತ್ತಲೇ ಇದೆ. ಗುಳಿಕೆನ್ನೆ ಚೆಲುವೆ ಪ್ರೀತಿ ಜಿಂಟಾಗೆ ಕೂಡ ದೆಹಲಿ ಎಂದರೆ ಸಿಕ್ಕಾಪಟ್ಟೆ ಹೆದರಿಕೆಯಂತೆ. ಅವಳಿಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಆದರೂ ಆ ಮಹಾನಗರದ ಹೆಸರು ಕೇಳಿದರೇ ಅವಳಿಗೆ ಹೆದರಿಕೆಯಂತೆ.
'ನಾನು ಬೆಳೆದದ್ದು ದೆಹಲಿಯಲ್ಲೇ. ಈಗಲೂ ಕೆಲಸದ ಮೇಲೆ ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿರುತ್ತೇನೆ. ಆದರೆ ಮುಂಬೈನಲ್ಲಿದ್ದಾಗ ಆಗುವ ಕಂಫರ್ಟ್ ಫೀಲ್ ದೆಹಲಿಯಲ್ಲಿ ಆಗುವುದಿಲ್ಲ. ಅದೇಕೊ ಗೊತ್ತಿಲ್ಲ, ಮೊದಲಿನಿಂದಲೂ ನನಗೆ ದೆಹಲಿ ಹೆಸರು ಕೇಳಿದರೇ ಒಂಥರಾ ಕಿರಿಕಿರಿ, ಭಯ ಆಗುತ್ತೆ' ಎಂದು ಹೇಳಿಕೊಂಡಿದ್ದಾಳೆ ಪ್ರೀತಿ.