

ಹೆಸರು ಕೇಳಿದಾಕ್ಷಣವೇ ಅದೊಂಥರ 'ಸನ್ನಿ' ಸೃಷ್ಟಿಸುವ ಸುರಸುಂದರಿ ಸನ್ನಿ ಲಿಯೋನ್. ಕೆನಡಾ ಮೂಲದ ಚೆಲುವೆ ತನ್ನ ಸ್ನಿಗ್ಧ ಸೌಂದರ್ಯಕ್ಕಿಂತ ಹೆಚ್ಚಾಗಿ ನೀಲಿ ಚಿತ್ರಗಳಲ್ಲಿನ ನಟನೆಯಿಂದಲೇ ಹೆಸರು ಗಳಿಸಿದಾಕೆ. ಬಾಲಿವುಡ್ಗೂ ಕಾಲಿಟ್ಟು ಇಲ್ಲೂ ಮೋಡಿ ಮಾಡುತ್ತಿರುವಾಕೆ. 'ಐಟಂ'ನಲ್ಲೂ ಸೊಂಟ ಬಳುಕಿಸುತ್ತಿರುವಾಕೆ. ಅವಳು ವಿಶ್ವದ ಸಿರಿವಂತ 'ನೀಲಿ ತಾರೆ'ಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಸೆಲೆಬ್ರಿಟಿ ನೆಟ್ವರ್ಥ್ ಡಾಟ್ಕಾಮ್ ನಡೆಸಿದ ಸಮೀಕ್ಷೆಯಂತೆ, ಸನ್ನಿ ಎಂಟು ಕೋಟಿ ರುಪಾಯಿ ಒಡತಿ. ಪಟ್ಟಿಯಲ್ಲಿ ಅವಳಿಗೆ 19ನೇ ಸ್ಥಾನ. 165 ಕೋಟಿ ರುಪಾಯಿ ಹೊಂದಿರುವ ಜೆನ್ನಾ ಜೇಮ್ಸನ್ ಅಗ್ರಸ್ಥಾನದಲ್ಲಿದ್ದಾಳೆ. ಪಟ್ಟಿಯಲ್ಲಿ ಐವರು ಪುರುಷರೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ಎನರ್ಜಿ ಡ್ರಿಂಕ್ನ ಜಾಹೀರಾತಿಗಾಗಿ 1.5 ಕೋಟಿ ರುಪಾಯಿ ಸಂಭಾವನೆ ಪಡೆದು ಸುದ್ದಿ ಮಾಡಿದ್ದ ಸನ್ನಿಗೆ, ಮುಂದಿನ ದಿನಗಳಲ್ಲಿ ತನ್ನ ಸ್ಥಾನ ಉತ್ತಮಪಡಿಸಿಕೊಳ್ಳುವ ವಿಶ್ವಾಸ.