

'ಚಾರುಲತಾ' ಏನು ಮಾಡುತ್ತಿದ್ದಾಳೆ? ಈ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕ ಬೆಂಗಳೂರು ಬಾಲೆ ಪ್ರಿಯಾಮಣಿ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ. ಅವಳೀಗ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿ. ಅವು ನಾಯಕಿ ಪ್ರಧಾನ ಸಿನಿಮಾಗಳು ಎನ್ನುವುದು ವಿಶೇಷ. ಆ ಪೈಕಿ ಸ್ವಲ್ಪ ಸದ್ದು ಮಾಡಿರುವುದು ತೆಲುಗಿನ 'ಚಾಂಡಿ'. ಅದರಲ್ಲಿ ಪ್ರಿಯಾಮಣಿ ಫೈಟ್ ಮಾಡುವ ದೃಶ್ಯಗಳಿವೆ. ವಿಲನ್ ಜತೆಗಿನ ಸಾಹಸ ಸನ್ನಿವೇಶವೊಂದನ್ನು ಕುದುರೆ ಬಳಸಿ ಚಿತ್ರಿಸಲಾಗಿದೆ. ಇದಕ್ಕಾಗಿ ಕುದುರೆ ಸವಾರಿ ಕಲಿತ ಪ್ರಿಯಾ, ಡ್ಯೂಪ್ ಗಳನ್ನೂ ಬಳಸದೇ ಶೂಟಿಂಗ್ ನಲ್ಲಿ ಭಾಗವಹಿಸಿದ್ದಳಂತೆ. ಇದು ನಿರ್ದೇಶಕ, ನಿರ್ಮಾಪಕರನ್ನು ಖುಷಿಗೊಳಿಸಿದೆ.
'ಕನ್ನಡದಲ್ಲೂ ಒಂದೆರಡು ಆಫರ್ ಗಳಿವೆ. ಅವಿನ್ನೂ ಮಾತುಕತೆ ಹಂತದಲ್ಲಿವೆ' ಎಂದಿದ್ದಾಳೆ ವಿ.ವಿ. ಪುರಂ ಬೆಡಗಿ.