ಎಂಥ ಪಾತ್ರಕೂ ಶ್ರದ್ಧಾ ರೆಡಿ!

ಎಂಥ ಪಾತ್ರಕೂ ಶ್ರದ್ಧಾ ರೆಡಿ!
Updated on: 

'ನಾನು ಎಂಥ ಪಾತ್ರಕ್ಕೂ ರೆಡಿ' ಹಾಗೆಂದು ಹೇಳುವ ನಟಿಯರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಹೊಸ ಸೇರ್ಪಡೆ 'ಆಶಿಕಿ 2' ಹೀರೊಯಿನ್ ಶ್ರದ್ಧಾ ಕಪೂರ್. ಇಂಥ ಮಾತಿನ ಅರ್ಥವನ್ನು ಬಿಡಿಸಿ ಹೇಳಬೇಕಾಗಿಲ್ಲವಲ್ಲ.
ಶ್ರದ್ಧಾ ಬೋಲ್ಡ್ ನಟಿ. ಆಕೆ ಸ್ಪಷ್ಟವಾಗೇ ಹೇಳಿದ್ದಾಳೆ, 'ಬಿಕಿನಿ, ಐಟಂ, ಎಕ್ಸ್‌ಪೋಸ್ ಯಾವುದಕ್ಕಾದರೂ ನಾನು ಸಿದ್ಧ. ಆದರೆ ಅದು ಕಥೆಗೆ ಪೂರಕವಾಗಿರಬೇಕಷ್ಟೆ. ಕಥೆಯ ಭಾಗವಾಗಿ ಆ ರೀತಿಯ ಉಡುಪು ಬೇಕಿದ್ದರೆ ಧರಿಸುವುದರಲ್ಲಿ ಅಡ್ಡಿ ಏನು? ಅದು ಕಥೆಗೆ ಮತ್ತಷ್ಟು ರಂಗು ತುಂಬುತ್ತದೆ' ಎನ್ನುವುದು ಶ್ರದ್ಧಾ ವಾದ. ಆರಕ್ಕೆ ಏರದೇ ನಿಂತಲ್ಲೇ ಇರುವ ಶ್ರದ್ಧಾಗೆ ಈ ಹೇಳಿಕೆಯಾದರೂ ಅವಕಾಶಗಳ ಬಾಗಿಲು ತೆರೆಯುತ್ತದಾ? 'ಆಶಿಕಿ 2' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾಯಕ ಆದಿತ್ಯ ರಾಯ್ ಕಪೂರ್ ಜತೆ ತಾನು ಬಹಳ 'ಕಂಫರ್ಟ್‌' ಆಗಿ ಮೂವ್ ಆಗಿದ್ದಾಗಿಯೂ, ಆದರೆ ತಮ್ಮ ನಡುವೆ ಏನೂ ಇಲ್ಲವೆಂದೂ ಶ್ರದ್ಧಾ ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com