ಕರೀನಾ-ಹೃತಿಕ್ 'ಶುದ್ಧಿ'?

ಕರೀನಾ-ಹೃತಿಕ್ 'ಶುದ್ಧಿ'?
Updated on: 

ಬರೋಬ್ಬರಿ ಒಂದು ದಶಕದ ಬಳಿಕ 'ಕಭಿ ಖುಷಿ ಕಭಿ ಗಮ್‌' ಜೋಡಿ ಒಂದಾಗುತ್ತಿದೆ. ಕರಣ್ ಮಲ್ಹೋತ್ರಾ ನಿರ್ದೇಶನದ 'ಶುದ್ಧಿ'ಯಲ್ಲಿ ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ಬಂದಿದ್ದ 'ಮಾ ಪ್ರೇಮ್ ಕೀ ದಿವಾನಿ ಹೂಂ' ಕೊನೆ, ಆ ನಂತರ ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಇದಕ್ಕೂ ಮುನ್ನ 'ಕಭಿ ಖುಷಿ ಕಭಿ ಗಮ್‌', 'ಮುಝೆ ದೋಸ್ತಿ ಕರೋಗಿ', 'ಯಾದೇನ್‌'ಗಳಲ್ಲಿ ಹೃತಿಕ್-ಕರೀನಾ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಈಗ ಕರಣ್ ಇವರನ್ನು ಸೇರಿಸುತ್ತಿರುವುದು ಪ್ರಜ್ಞಾಪೂರ್ವಕವಾಗಿ ಅಲ್ಲವಂತೆ. 'ಕಥೆ ಇವರಿಬ್ಬರನ್ನು ಕೇಳುತ್ತಿದೆ. ನಾವು ಸಂಪರ್ಕಿಸಿದಾಗ ಇಬ್ಬರೂ ಖುಷಿಯಿಂದಲೇ ಒಪ್ಪಿಕೊಂಡರು. ಇಬ್ಬರೂ ಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎನ್ನುವುದು ಕರಣ್ ಮಲ್ಹೋತ್ರಾ ಸಮಜಾಯಿಷಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com