

ಬರೋಬ್ಬರಿ ಒಂದು ದಶಕದ ಬಳಿಕ 'ಕಭಿ ಖುಷಿ ಕಭಿ ಗಮ್' ಜೋಡಿ ಒಂದಾಗುತ್ತಿದೆ. ಕರಣ್ ಮಲ್ಹೋತ್ರಾ ನಿರ್ದೇಶನದ 'ಶುದ್ಧಿ'ಯಲ್ಲಿ ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ಬಂದಿದ್ದ 'ಮಾ ಪ್ರೇಮ್ ಕೀ ದಿವಾನಿ ಹೂಂ' ಕೊನೆ, ಆ ನಂತರ ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಇದಕ್ಕೂ ಮುನ್ನ 'ಕಭಿ ಖುಷಿ ಕಭಿ ಗಮ್', 'ಮುಝೆ ದೋಸ್ತಿ ಕರೋಗಿ', 'ಯಾದೇನ್'ಗಳಲ್ಲಿ ಹೃತಿಕ್-ಕರೀನಾ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಈಗ ಕರಣ್ ಇವರನ್ನು ಸೇರಿಸುತ್ತಿರುವುದು ಪ್ರಜ್ಞಾಪೂರ್ವಕವಾಗಿ ಅಲ್ಲವಂತೆ. 'ಕಥೆ ಇವರಿಬ್ಬರನ್ನು ಕೇಳುತ್ತಿದೆ. ನಾವು ಸಂಪರ್ಕಿಸಿದಾಗ ಇಬ್ಬರೂ ಖುಷಿಯಿಂದಲೇ ಒಪ್ಪಿಕೊಂಡರು. ಇಬ್ಬರೂ ಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎನ್ನುವುದು ಕರಣ್ ಮಲ್ಹೋತ್ರಾ ಸಮಜಾಯಿಷಿ.