

ಸೋನಂ ಕಪೂರ್ ಎಂಬ ಚೆಲುವೆ ಬಾಲಿವುಡ್ನಲ್ಲಿ ಜಾಸ್ತಿ ಸದ್ದು ಮಾಡಲು ಅವಳ ವ್ಯಕ್ತಿತ್ವವೂ ಕಾರಣ. ಮನಸ್ಸಿನಲ್ಲಿ ಇರುವುದನ್ನು ಇದ್ದಹಾಗೆ ಹೇಳಿಬಿಡುವುದು ಅವಳ ಜಾಯಮಾನ. ಸಾಂಪ್ರದಾಯಿಕ ಮನಸ್ಥಿತಿ ಅವಳದಲ್ಲ. ಈಗ ಮದುವೆ ವಿಚಾರದಲ್ಲಿಯೂ ಅಂತಹದೊಂದು ಹೇಳಿಕೆ ನೀಡಿದ್ದಾಳೆ ಅನಿಲ್ ಕಪೂರ್ ಮಗಳು. 'ಅಪ್ಪ ಸೇರಿದಂತೆ ನಮ್ಮ ಮನೆಯ ಪುರುಷರಿಗೆ ಮದುವೆಯಲ್ಲಿ ಹೇಳಿಕೊಳ್ಳುವಂತಹ ನಂಬಿಕೆ ಏನಿಲ್ಲ. ಪರಸ್ಪರ ಹೊಂದಿಕೊಂಡು ಹೋಗುವ ಮನೋಭಾವ ಮುಖ್ಯ. ನನ್ನದೂ ಅದೇ ನಿಲುವು' ಎಂದಿದ್ದಾಳೆ. ಅಂದಹಾಗೆ ತಾನು ಯಾರೊಂದಿಗೂ ಡೇಟಿಂಗ್ನಲ್ಲಿ ಇಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾಳೆ ಸೋನಂ.