ಕತ್ರಿನಾಗೆ ಗೇಟ್‌ಪಾಸ್?

ಯಾಕೋ ಕತ್ರಿನಾ ಕೈಫ್ ಅದೃಷ್ಟರೇಖೆ ವಕ್ರವಾಗಿರುವ ಹಾಗಿದೆ. ಅವಳಿಗೇನು ಅವಕಾಶಗಳ ಕೊರತೆಯಾಗಿಲ್ಲ....
ಕತ್ರಿನಾಗೆ ಗೇಟ್‌ಪಾಸ್?
Updated on: 

ಯಾಕೋ ಕತ್ರಿನಾ ಕೈಫ್ ಅದೃಷ್ಟರೇಖೆ ವಕ್ರವಾಗಿರುವ ಹಾಗಿದೆ. ಅವಳಿಗೇನು ಅವಕಾಶಗಳ ಕೊರತೆಯಾಗಿಲ್ಲ. ಸಮಸ್ಯೆ ಎದುರಾಗಿರುವುದು ಸಂಗಾತಿ ವಿಚಾರದಲ್ಲಿ. ಸಲ್ಲೂಗೆ ಬೈ ಹೇಳಿ ರಣಬೀರ್ ಕಪೂರ್ ಸಂಗಕ್ಕೆ ಬಿದ್ದಳು. ಆಗಾಗ ಈಕೆ ಕಪೂರ್ ಮನೆಗೆ ಹೋಗುವುದು, ಇಬ್ಬರೂ ಹೊರಗಡೆ ಜಾಲಿಯಾಗಿ ಸುತ್ತಾಡುವುದು, ರಾತ್ರಿಗಳನ್ನು ಅಲ್ಲಿಯೇ ಕಳೆಯುವುದು ಎಲ್ಲವೂ ನಡೆದಿತ್ತು. ರಿಶಿ ಕಪೂರ್ ಮತ್ತು ನೀತೂ ಕಪೂರ್ ಪ್ರಿತಿಯಿಂದಲೇ ಸ್ವಾಗತಿಸುತ್ತಿದ್ದರು ಕೂಡ. ಮೊನ್ನೆಮೊನ್ನೆ ಕತ್ರಿನಾ ಸ್ಪೇನ್‌ನ ಬೀಚ್‌ಗಳಲ್ಲಿ  ಬಿಕಿನಿ ತೊಟ್ಟು ರಣಬೀರ್ ಜತೆ ಸುತ್ತಾಡುತ್ತಿರುವ ಚಿತ್ರಗಳು ಪ್ರಕಟವಾದವಲ್ಲ, ಆ ನಂತರ ರಿಶಿ-ನೀತೂ ಆಕೆ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೆಂದೂ ತಮ್ಮ ಮನೆಗೆ ಕಾಲಿಡದಂತೆ ತಾಕೀತು ಮಾಡಿದ್ದಾರೆ ಎನ್ನುವ ಪಿಸುಮಾತು ಈಗ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಪಾಪ ಕ್ಯಾಟಿ, ಹೀಗಾಗಬಾರದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com